ಅಮೀರ್‌ ಖಾನ್‌ ಮಗ ಜುನೈದ್ ಖಾನ್‌ ಜೊತೆ ನ್ಯಾಚುರಲ್‌ ಬ್ಯೂಟಿ ಸಾಯಿಪಲ್ಲವಿ ಲವ್‌; ಏನಿದು ಗುಸುಗುಸು?

Published : Sep 15, 2023, 08:36 AM IST

ಬಹುಭಾಷಾ, ದಕ್ಷಿಣದ ಮೋಸ್ಟ್‌ ಟ್ಯಾಲೆಂಟೆಡ್‌ ನಟಿ ಸಾಯಿ ಪಲ್ಲವಿ. . ಸಹಜ ಸೌಂದರ್ಯವತಿ ಎಂದೇ ಖ್ಯಾತಿ ಪಡೆದಿರುವರು. ತಮ್ಮ ಅಭಿನಯ, ಕ್ಯೂಟ್‌ ಲುಕ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಈ ನಟಿಯ ಹೆಸರು ಬಾಲಿವುಡ್‌ನ ಖ್ಯಾತ ನಟ ಅಮೀರ್‌ ಖಾನ್ ಪುತ್ರನ ಜೊತೆ ಕೇಳಿಬರ್ತಿದೆ. ಅಮೀರ್ ಖಾನ್ ಪುತ್ರ, ಜುನೈದ್ ಖಾನ್ ಮತ್ತು ಸಾಯಿಪಲ್ಲವಿ ಬಗ್ಗೆ ಕೆಲವೊಂದು ಗುಸುಗುಸು ಹರಿದಾಡ್ತಿದೆ.

PREV
19
ಅಮೀರ್‌ ಖಾನ್‌ ಮಗ ಜುನೈದ್ ಖಾನ್‌ ಜೊತೆ ನ್ಯಾಚುರಲ್‌ ಬ್ಯೂಟಿ ಸಾಯಿಪಲ್ಲವಿ ಲವ್‌; ಏನಿದು ಗುಸುಗುಸು?

ಬಹುಭಾಷಾ, ದಕ್ಷಿಣದ ಮೋಸ್ಟ್‌ ಟ್ಯಾಲೆಂಟೆಡ್‌ ನಟಿ ಸಾಯಿ ಪಲ್ಲವಿ. . ಸಹಜ ಸೌಂದರ್ಯವತಿ ಎಂದೇ ಖ್ಯಾತಿ ಪಡೆದಿರುವರು. ತಮ್ಮ ಅಭಿನಯ, ಕ್ಯೂಟ್‌ ಲುಕ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಈ ನಟಿಯ ಹೆಸರು ಬಾಲಿವುಡ್‌ನ ಖ್ಯಾತ ನಟ ಅಮೀರ್‌ ಖಾನ್ ಪುತ್ರನ ಜೊತೆ ಕೇಳಿಬರ್ತಿದೆ. ಅಮೀರ್ ಖಾನ್ ಪುತ್ರ, ಜುನೈದ್ ಖಾನ್ ಮತ್ತು ಸಾಯಿಪಲ್ಲವಿ ಬಗ್ಗೆ ಕೆಲವೊಂದು ಗುಸುಗುಸು ಹರಿದಾಡ್ತಿದೆ.
 

29

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರ, ಜುನೈದ್ ಖಾನ್ ವೈಆರ್‌ಎಫ್ ನ 'ಮಹಾರಾಜ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಹೆಸರಿಡದ ಈ ಚಿತ್ರವು ಲವ್ ಸ್ಟೋರಿ ಎಂದು ಹೇಳಲಾಗಿದ್ದು, ಸುನೀಲ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. 

39

ಚಿತ್ರದ ನಾಯಕಿ ಬೇರೆ ಯಾರೂ ಅಲ್ಲ. ಸಹಜ ಸುಂದರಿ ಎಂದು ಕರೆಸಿಕೊಳ್ಳೋ, ಪ್ರತಿಭಾವಂತ ನಟಿ ಸಾಯಿ ಪಲ್ಲವಿ. ಈ ಚಿತ್ರವನ್ನು ಅಮೀರ್ ಖಾನ್ ಪ್ರೊಡಕ್ಷನ್ ಅಡಿಯಲ್ಲಿ ಸ್ವತಃ ಅಮೀರ್ ಖಾನ್ ನಿರ್ಮಿಸುತ್ತಿದ್ದಾರೆ. ಚಿತ್ರ ಇನ್ನೂ ಆರಂಭಿಕ ಹಂತದಲ್ಲಿದೆ, ಆದರೆ ಇದು ರೊಮ್ಯಾಂಟಿಕ್ ಡ್ರಾಮಾ ಎಂದು ನಿರ್ಮಾಣ ತಂಡದ ನಿಕಟ ಮೂಲಗಳು ಬಹಿರಂಗಪಡಿಸಿವೆ. 

49

ತಂಡದ ಆಪ್ತ ಮೂಲವೊಂದು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, 'ಜುನೈದ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಮುಂದಿನ ತಯಾರಿ ಪ್ರಾರಂಭವಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.

59

ಇದು ಅವರ YRF ಚೊಚ್ಚಲ ಚಿತ್ರದ ನಂತರ ಜುನೈದ್ ಅವರ ಮುಂದಿನ ಯೋಜನೆಯಾಗಿದೆ. ಸುನೀಲ್ ಪಾಂಡೆ ನಿರ್ದೇಶನದ ಈ ಚಿತ್ರವು ಪ್ರೇಮಕಥೆಯಾಗಿದೆ' ಎಂದು ತಿಳಿಸಿದೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಿರ್ವಹಿಸಿದ ಎರಡು ಪ್ರಮುಖ ಪಾತ್ರಗಳ ನಡುವಿನ ಸಂಬಂಧದ ಸುತ್ತ ಕಥೆ ಸುತ್ತುತ್ತದೆ ಎಂದು ತಿಳಿದುಬಂದಿದೆ.

69

ಸುನೀಲ್ ಪಾಂಡೆ, ಅಮೀರ್ ಖಾನ್ ಅವರ ದೀರ್ಘಕಾಲದ ಸಹವರ್ತಿ ಮತ್ತು ಉತ್ತಮ ನಿರ್ದೇಶಕರು. ಥಾಯ್ ಚಲನಚಿತ್ರದ ಸಾರವನ್ನು ಭಾರತೀಯ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಸಮರ್ಥವಾಗಿ ಮಾರ್ಪಡಿಸಿದ್ದಾರೆ. ಈ ರೂಪಾಂತರದಲ್ಲಿ ಕೇಂದ್ರ ಪಾತ್ರಕ್ಕೆ ಜುನೈದ್ ಖಾನ್ ಜೀವ ತುಂಬಲಿದ್ದಾರೆ. ಮಾಹಿತಿಯ ಪ್ರಕಾರ, ಜುನೈದ್ ಈ ಚಿತ್ರದಲ್ಲಿ ಐಟಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

79

ಅಮೀರ್ ಖಾನ್ ಮತ್ತು ಜುನೈದ್ ಖಾನ್ ಚಿತ್ರವು ಒನ್ ಡೇ ಎಂಬ ಥಾಯ್ ಚಿತ್ರದ ರಿಮೇಕ್ ಆಗಿದೆ. 2016ರ ಥಾಯ್ ರೋಮ್ಯಾಂಟಿಕ್ ನಾಟಕವನ್ನು ಮೆಚ್ಚಿಕೊಂಡ ಅಮೀರ್‌ ಖಾನ್‌ ಕಳೆದ ವರ್ಷ ಭಾರತೀಯ ರಿಮೇಕ್‌ನ ಅಧಿಕೃತ ಹಕ್ಕುಗಳನ್ನು ಪಡೆದುಕೊಂಡರು.

89

ಜುನೈದ್ ಖಾನ್ ಅಮೀರ್ ಖಾನ್ ಮತ್ತು ರೀನಾ ದತ್ತಾ ಅವರ ಪುತ್ರ. ಯಶ್ ರಾಜ್ ಫಿಲ್ಮ್ಸ್ ನ ‘ಮಹಾರಾಜ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜುನೈದ್ ಖಾನ್ ರಂಗಭೂಮಿಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು ಮತ್ತು LA ನಲ್ಲಿನ ನಾಟಕ ಶಾಲೆಯಲ್ಲಿ ಓದಿದ್ದಾರೆ, ಅಲ್ಲಿ ಅವರು ಎರಡು ವರ್ಷಗಳ ಕಾಲ ಮಾರ್ಗದರ್ಶನ ಪಡೆದರು. ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಮುಂಬೈನಲ್ಲಿ ಕೆಲವು ನಾಟಕಗಳನ್ನು ಸಹ ಮಾಡಿದ್ದಾರೆ. 

99

ಜುನೈದ್ ಅವರು ನಟನ ಕೈರಲಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ದೆಹಲಿ) ಮತ್ತು ಇಂಟರ್ ಕಲ್ಚರಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ಸಿಂಗಪುರ) ನಲ್ಲಿ ಹಲವಾರು ನಟರು ಮತ್ತು ನೃತ್ಯಗಾರರಿಗೆ ಕಾರ್ಯಾಗಾರಗಳನ್ನು ನಡೆಸುತ್ತಿರುವ ಭಾರತದ ಅತ್ಯಂತ ಪ್ರತಿಷ್ಠಿತ ಅಭಿನಯ ಗುರು ವೇಣು ಜಿ ಅವರು ಆನ್‌ಲೈನ್‌ನಲ್ಲಿ ಕಲಿಸಿದ ನವರಸ ಸಾಧನಾ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸಾಯಿ ಪಲ್ಲವಿ ದಕ್ಷಿಣ ಭಾರತದ ಚಿತ್ರರಂಗದ ಪ್ರಸಿದ್ಧ ನಟಿ. ಅವರು 'ಪ್ರೇಮಂ' ಮತ್ತು 'NGK' ನಂತಹ ಹಲವಾರು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories