ಮಾಜಿ ಪತ್ನಿ ಕಿರಣ್ ಜೊತೆ ಕಳಶ ಪೂಜೆ ಮಾಡಿದ ಆಮೀರ್, ಟ್ರೋಲ್ ಆಗಿದ್ದೇ ಬೇರೆ ರೀಸನ್!

Published : Dec 09, 2022, 04:16 PM ISTUpdated : Dec 09, 2022, 04:29 PM IST

ಆಮೀರ್ ಖಾನ್ (Aamir Khan) ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೆಚ್ಚು ವೈರಲ್ ಆಗುತ್ತಿದ್ದು, ಇದನ್ನು ನೋಡಿ  ಜನ ಫುಲ್‌ ಕನ್‌ಫ್ಯೂಸ್‌ ಆಗಿದ್ದಾರೆ. ವಾಸ್ತವವಾಗಿ, ಶೇರ್ ಆದ ಫೋಟೋಗಳಲ್ಲಿ, ಅವರು ಕುತ್ತಿಗೆಗೆ ಸ್ಕಾರ್ಫ್, ತಲೆಯ ಮೇಲೆ ಕ್ಯಾಪ್ ಮತ್ತು ಹಣೆ ಮೇಲೆ ತಿಲಕವನ್ನು ಧರಿಸಿದ್ದಾರೆ. ಬಿಳಿ ಗಡ್ಡ ಮತ್ತು ಮೀಸೆಯಲ್ಲಿ ವೈರಲ್ ಆಗುತ್ತಿರುವ ಅವರ ಫೋಟೋಗಳನ್ನು ನೋಡಿ ಜನರು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಆಮೀರ್ ಅವರನ್ನು ಶಕ್ತಿ ಕಪೂರ್ ಮತ್ತು ಸೌತ್ ಸ್ಟಾರ್ ಜಗತ್ಪತಿ ಬಾಬು ಎಂದು ತಪ್ಪಾಗಿ ಭಾವಿಸುವಷ್ಟು ನಟನ ಲುಕ್‌ನಿಂದ  ಗೊಂದಲಕ್ಕೊಳಗಾಗಿದ್ದಾರೆ.   

PREV
17
ಮಾಜಿ ಪತ್ನಿ ಕಿರಣ್ ಜೊತೆ ಕಳಶ ಪೂಜೆ ಮಾಡಿದ ಆಮೀರ್, ಟ್ರೋಲ್ ಆಗಿದ್ದೇ ಬೇರೆ ರೀಸನ್!

ಆಮೀರ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್ ಹೌಸ್‌ನ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು, ಅವರ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

27

ವಿಭಿನ್ನ ಲುಕ್ ಟ್ರೈ ಮಾಡುವುದರಲ್ಲಿ ಆಮೀರ್ ಖಾನ್ ನಿಪುಣರು. ಆಮೀರ್ ಖಾನ್ ಚಲನಚಿತ್ರಗಳಲ್ಲಿ ಡಿಫ್ರೆಂಟ್‌ ಲುಕ್‌ ಪ್ರಯೋಗಕ್ಕೆ ಹೆಸರುವಾಸಿ. ಆದರೆ ಸದ್ಯ ವೈರಲ್ ಆಗುತ್ತಿರುವ ಅವರ ಲುಕ್ ಒರಿಜಿನಲ್ ಆಗಿದೆ. 

37

ಅವರು ತಮ್ಮ ಕಂಪನಿ ಆಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಪೂಜೆ ಮಾಡುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಆಮೀರ್ ಕಲಶ ಪೂಜೆ ಮಾಡುತ್ತಿರುವ ಫೋಟೋಗಳು ಹೊರಬಿದ್ದಿವೆ. ಪೂಜೆಯ ನಂತರ ಮಾಜಿ ಪತ್ನಿ ಕಿರಣ್ ರಾವ್ ಅವರೊಂದಿಗೆ ಆರತಿಯನ್ನೂ ಮಾಡಿದರು.


 

47

ವೈರಲ್ ಆಗುತ್ತಿರುವ ಫೋಟೋಗಳಿಗೆ ಜನರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 'ನಾನು ಹೆಸರನ್ನು ಓದಲಿಲ್ಲ ಮತ್ತು ಅದು ಶಕ್ತಿ ಕಪೂರ್ ಎಂದು ಭಾವಿಸಿದೆ ಎಂದು ಒಬ್ಬರು ಬರೆದಿದ್ದಾರೆ. ಆಮೀರ್ ಅವರ ಸ್ಥಿತಿಯನ್ನು ನೋಡಿ, ದಕ್ಷಿಣದ ನಟ ಜಗಪತಿ ಬಾಬು ಅವರ ಲುಕ್ ಅನ್ನು ಹೋಲುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಅವರು ದಕ್ಷಿಣದ ನಟ ಜಗಪತಿ ಬಾಬು ಅವರಂತೆ ಕಾಣುತ್ತಿದ್ದಾರೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.  ಲಾಲ್ ಸಿಂಗ್ ಚಡ್ಡಾ ನಂತರ, ಅದರ PR ಏಜೆನ್ಸಿ ಈ ಫೋಟೋವನ್ನು ಏಕೆ ಬಿಡುಗಡೆಮಾಡಿದೆ ಎಂದು ಅರ್ಥವಾಯಿತು. ಹಿಂದೂಗಳ ಮೌಲ್ಯ ಈಗ ಅರ್ಥವಾಗುತ್ತಿದೆ ಎಂದು ಒಬ್ಬ ಯೂಸರ್‌ ಟ್ರೋಲ್‌ ಮಾಡಿದ್ದಾರೆ.

57

ನಿರ್ದೇಶಕ ಅದ್ವೈತ್ ಚಂದನ್ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ #AamirKhanProductions ಎಂದು ಮಾತ್ರ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಪೂಜೆಯನ್ನು ಏಕೆ ಇರಿಸಲಾಗಿದೆ ಎಂಬುದರ ಕುರಿತು ಅವರು ಯಾವುದೇ ವಿವರವನ್ನು ಹಂಚಿಕೊಂಡಿಲ್ಲ. ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಆರತಿ ಮಾಡುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು ಮತ್ತು ಪಕ್ಕದಲ್ಲಿ ಆಮೀರ್‌ ಕೈ ಜೋಡಿಸಿ ನಿಂತಿದ್ದಾರೆ.

 

67

ಈ ವರ್ಷ ಆಮೀರ್ ಖಾನ್ ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಫ್ಲಾಪ್ ಎಂದು ಸಾಬೀತುಪಡಿಸಿದೆ. 180 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ತನ್ನ ಬಜೆಟ್ ಪಡೆಯುವಲ್ಲಿ ವಿಫಲವಾಗಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಬಹಿಷ್ಕಾರ ಎದುರಿಸಬೇಕಾಯಿತು.
 

77

ಕರೀನಾ ಕಪೂರ್ ಜೊತೆಗಿನ ಈ ಚಿತ್ರದ ಫ್ಲಾಪ್ ನಂತರ, ಆಮೀರ್ ಒಂದು ವರ್ಷ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ. ಒಂದು ವರ್ಷ ನಟನೆಯಿಂದ ದೂರ ಉಳಿದು ಕುಟುಂಬದೊಂದಿಗೆ ಕಾಲ ಕಳೆಯುವ ನಿರ್ಧಾರಕ್ಕೆ ಬಂದಿದ್ದಾರೆ.

Read more Photos on
click me!

Recommended Stories