2022ರಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲೂ ಬಾಲಿವುಡ್‌ ಹಿಂದಿಕ್ಕಿದ ಸೌತ್‌

First Published Dec 8, 2022, 4:25 PM IST

2022 ರಲ್ಲಿ ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದವು, ಆದರೆ ಹೆಚ್ಚಿನ ಬಾಲಿವುಡ್ ಚಿತ್ರಗಳು ವಿಫಲವಾದವು. ದಕ್ಷಿಣ ಭಾರತದ ಚಿತ್ರಗಳು ಮೇಲುಗೈ ಸಾಧಿಸಿದವು.  ಬಾಕ್ಸ್ ಆಫೀಸ್ ನಲ್ಲಿ ಮಾತ್ರವಲ್ಲ, ಗೂಗಲ್ ಸರ್ಚ್ ನಲ್ಲೂ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್ ಅನ್ನು ಆವರಿಸಿಕೊಂಡಿವೆ. ಅತಿ ಹೆಚ್ಚು ಸರ್ಚ್ ಮಾಡಿದ ಸಿನಿಮಾ ಬಾಲಿವುಡ್‌ನದ್ದೇ ಆದರೆ ಟಾಪ್ 10ಗೆ ಬಂದರೆ ಇಲ್ಲಿ ಬಾಲಿವುಡ್ ಸೋಲು ಕಾಣುತ್ತಿದೆ . ಬುಧವಾರ ಗೂಗಲ್ ಇಂಡಿಯಾ ಅತಿ ಹೆಚ್ಚು ಸರ್ಚ್ ಮಾಡಿದ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 10 ರಲ್ಲಿ ಯಾವ ಚಲನಚಿತ್ರಗಳು ಸ್ಥಾನ ಪಡೆದಿದೆ ನೋಡಿ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ ಒನ್: ಶಿವ' ಮೊದಲ ಸ್ಥಾನದಲ್ಲಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ಗೂಗಲ್ ಇಂಡಿಯಾದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟಿದೆ.

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೂಲತಃ ಕನ್ನಡ ಭಾಷೆಯಲ್ಲಿ ತಯಾರಾದ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಇದುವರೆಗಿನ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವೂ ಹೌದು.

ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಬಾಲಿವುಡ್ ಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಮೂರನೇ ಅತಿ ಹೆಚ್ಚು ಸರ್ಚ್‌ ಮಾಡಿದ ಚಿತ್ರವಾಗಿದೆ. ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿದ್ದಾರೆ.

ಗೂಗಲ್ ಇಂಡಿಯಾದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಾಲ್ಕನೇ ಚಿತ್ರ 'RRR'. ತೆಲುಗು ಭಾಷೆಯ ಚಲನಚಿತ್ರವನ್ನು ಎಸ್‌ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ ಮತ್ತು ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.

ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ದಕ್ಷಿಣ ಭಾರತದ ಚಿತ್ರವೂ ಪ್ರಾಬಲ್ಯ ಹೊಂದಿದೆ. ರಿಷಬ್ ಶೆಟ್ಟಿ ಅಭಿನಯದ ಮತ್ತು ಅವರದೇ ನಿರ್ದೇಶನದ ಕನ್ನಡ ಚಿತ್ರ 'ಕಾಂತಾರ' ಅತಿ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳಲ್ಲಿ ಒಂದಾಗಿದೆ.

ಅತಿ ಹೆಚ್ಚು ಹುಡುಕಲ್ಪಟ್ಟ ಆರನೇ ಚಲನಚಿತ್ರ 'ಪುಷ್ಪ: ದಿ ರೈಸ್'. ಸುಕುಮಾರ್ ನಿರ್ದೇಶನದ ಈ ತೆಲುಗು ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಪಟ್ಟಿಯಲ್ಲಿ ತಮಿಳಿನ 'ವಿಕ್ರಂ' ಚಿತ್ರ ಏಳನೇ ಸ್ಥಾನದಲ್ಲಿದೆ. ಕಮಲಹಾಸನ್ ಅಭಿನಯದ ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ.

ಆಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಗೂಗಲ್ ಇಂಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ಎಂಟನೇ ಚಲನಚಿತ್ರವಾಗಿದೆ. ಈ ಬಾಲಿವುಡ್ ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ.

ಅಜಯ್ ದೇವಗನ್ ಅಭಿನಯದ 'ದೃಶ್ಯಂ 2' ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಈ ಬಾಲಿವುಡ್ ಚಿತ್ರದ ನಿರ್ದೇಶಕ ಅಭಿಷೇಕ್ ಪಾಠಕ್. ಟಬು ಹಾಗೂ ಶರಿಯಾ ಶರನ್‌ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹಾಲಿವುಡ್ ಚಿತ್ರ 'ಥಾರ್: ಲವ್ ಅಂಡ್ ಥಂಡರ್' ಗೂಗಲ್ ಇಂಡಿಯಾದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ 10 ನೇ ಚಲನಚಿತ್ರವಾಗಿದೆ. ಕ್ರಿಸ್ ಹೆಮ್ಸ್‌ವರ್ತ್ ಅಭಿನಯದ ಚಿತ್ರವನ್ನು ಟೈಕಾ ವೈಟಿಟಿ ನಿರ್ದೇಶಿಸಿದ್ದಾರೆ.

click me!