180 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಎಂದು ಸಾಬೀತಾಯಿತು. ಫ್ಲಾಪ್ ಟ್ಯಾಗ್ ಪಡೆದ ನಂತರ, ಆಮೀರ್ ಅವರ ಮುಂಬರುವ ಚಿತ್ರ ಮೊಗಲ್ (Mogul_ ಅನ್ನು ಸಹ ತಯಾರಕರು ತಡೆಹಿಡಿದಿದ್ದಾರೆ. ಇದು ಅಮೀರ್‌ಗೆ ಭಾರೀ ಹೊಡೆತ ನೀಡಿದೆ
ಆಮೀರ್ ಅವರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ 14 ದಿನಗಳಲ್ಲಿ ಕೇವಲ 60 ಕೋಟಿ ವ್ಯವಹಾರ ಮಾಡಿದ. ಇದರಿಂದ ಚಿತ್ರ ಸದ್ಯ 120 ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ಸಿನಿ ನಿರ್ಮಾಪಕರಲ್ಲಿ ಆತಂಕ ಸೃಷ್ಟಿಸಿದೆ.
ಗುಲ್ಶನ್ ಕುಮಾರ್ ಅವರ ಜೀವನಾಧಾರಿತ ಚಿತ್ರ ಮೊಗಲ್ ವರದಿಗಳ ಪ್ರಕಾರ ಕಂಪನಿಯ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಜೀವನ ಚರಿತ್ರೆ ಮಾಡಲು ಟಿ-ಸೀರೀಸ್ ನಿರ್ಧರಿಸಿದೆ. ಚಿತ್ರಕ್ಕೆ ಮೊಗಲ್ ಎಂದು ಹೆಸರಿಡಬೇಕಿತ್ತು. ಇದನ್ನು ಗುಲ್ಶನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ನಿರ್ಮಿಸಲಿದ್ದು, ಚಿತ್ರದಲ್ಲಿ ನಾಯಕ ನಟನಾಗಿ ಆಮೀರ್ ನಟಿಸಲಿದ್ದರು. ಆದರೆ ಈಗ ಚಿತ್ರವು ಕೈಬಿಡಲಾಗಿದೆಯಂತೆ.
ಇದಕ್ಕೆ ಕಾರಣ ಲಾಲ್ ಸಿಂಗ್ ಚಡ್ಡಾ ಎಂದು ಹೇಳಲಾಗುತ್ತಿದೆ ಹಾಗೂ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಸುಭಾಷ್ ಕಪೂರ್ ನಡುವೆ ಕೆಲವು ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದ ಚಿತ್ರವೂ ಸದ್ಯಕ್ಕೆ ರದ್ದಾಗಿದೆ.
ಮೊಗಲ್ ಸಿನಿಮಾಕ್ಕೆ ಆಮೀರ್ ಖಾನ್‌ಗೂ ಮೊದಲು ಅಕ್ಷಯ್ ಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಆ ಸಮಯದಲ್ಲಿ, ನಿರ್ಮಾಪಕ-ನಿರ್ದೇಶಕ ಮತ್ತು ಅಕ್ಷಯ್ ಕುಮಾರ್ ನಡುವಿನ ಕೆಲವು ಭಿನ್ನಾಭಿಪ್ರಾಯದಿಂದಾಗಿ ಅವರು ಚಿತ್ರ ಮಾಡಲು ನಿರಾಕರಿಸಿದರು. ಅಕ್ಷಯ್ ನಿರಾಕರಿಸಿದ ನಂತರ ಆಮೀರ್‌ಗೆ ಆಫರ್ ನೀಡಲಾಯಿತು ಮತ್ತು ಅವರು ಒಪ್ಪಿಕೊಂಡರು.
ಆಮೀರ್‌ಗೆ ಚಿತ್ರದ ಆಫರ್ ಬಂದಾಗ, ಅವರು ಲಾಲ್ ಸಿಂಗ್ ಚಡ್ಡಾವನ್ನು ಪೂರ್ಣಗೊಳಿಸಿದ ನಂತರ ಮೊಗಲ್‌ನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಬಾಕ್ಸ್ ಆಫೀಸ್‌ನಲ್ಲಿ ಲಾಲ್ ಸಿಂಗ್ ಚಡ್ಡಾ ಸ್ಥಿತಿ ನೋಡಿ, ತಯಾರಕರು ಹಿಂದೇಟು ಹಾಕಿದ್ದಾರೆ. ಆಮೀರ್ ಅವರ 180 ಕೋಟಿಯ ರೂ. ಈ ಚಿತ್ರ ಬಿಡುಗಡೆಯಾದ 14 ದಿನಗಳಲ್ಲಿ ಕೇವಲ 60 ಕೋಟಿ ರೂ. ವ್ಯವಹಾರ ಮಾಡಿದೆ.