ಬಾಲಿವುಡ್ ನಟ ಆಮೀರ್ ಖಾನ್‌ಗೆ ನಟಿಯರ ಕೈಗೆ ಉಗುಳುವ ವಿಚಿತ್ರ ಚಟವಿದೆ. ತಾವು ಯಾರ ಕೈ ಮೇಲೆ ಉಗುಳುತ್ತಾರೋ ಅವರು ನಂಬರ್ 1 ನಟಿಯಾಗುತ್ತಾರೆ ಎಂಬುದು ಅವರ ನಂಬಿಕೆಯಾಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ಕೈ ಮೇಲೂ ಉಗುಳಿದ್ದರಿಂದ ಅವರು ಕೋಪಗೊಂಡ ಘಟನೆಗಳಿವೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಫೇಮಸ್ ಆಗಿರೋ ನಟ, ನಿರ್ಮಾಪಕ ಮತ್ತು ನಿರ್ದೇಶಕ ಎಂದರೆ ಆಮೀರ್ ಖಾನ್. ಲಗಾನ್, 3 ಇಡಿಯಟ್ಸ್, ದಂಗಲ್ ಮತ್ತು ಪಿಕೆ ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ನಟ. ಈಚೆಗಷ್ಟೇ 61ನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟನ ಹಳೆಯ ವಿಡಿಯೋ ಒಂದು ಇದೀಗ ಭಾರಿ ಸದ್ದು ಮಾಡುತ್ತಿದೆ.
26
ಫರ್ಹಾ ಖಾನ್ ಪ್ರಶ್ನೆ
ನಿರ್ಮಾಪಕ ಫರ್ಹಾ ಖಾನ್ ಅವರು ಈ ವಿಷಯವನ್ನು ಒಂದು ವೇದಿಕೆಯಲ್ಲಿ ಪ್ರಶ್ನಿಸಿದ್ದರು. ನೀವು ನಟಿಯರ ಕೈಗೆ ಉಗುಳುವುದು ಏಕೆ ಎಂದು ಕೇಳಿದ್ದರು. ಆಗ, ನಟ ತಮ್ಮ ಉಗುಳುವ ವಿಷಯ ಹೇಳಿದ್ದಾರೆ. ಆಮೀರ್ ಖಾನ್‌ಗೆ ನಟಿಯರ ಕೈಗೆ ಉಗುಳುವ ಚಟ ಇದೆಯಂತೆ. ಇದರ ಬಗ್ಗೆ ಅವರು ಮಾತನಾಡಿದ್ದಾರೆ.
36
ನಂಬರ್ 1 ನಟಿಯರು
ನಾನು ಯಾವ ಯಾವ ನಟಿಯರ ಕೈಮೇಲೆ ಉಗುಳುತ್ತೇನೋ ಅವರೆಲ್ಲರೂ ನಂಬರ್ 1 ನಟಿಯರಾಗುತ್ತಾರೆ ಎಂದಿದ್ದಾರೆ ಆಮೀರ್ ಖಾನ್. ಸಹ ನಟರ ಕೈಮೇಲೆ ಏಕೆ ಉಗುಳುವುದಿಲ್ಲ ಎನ್ನುವ ಪ್ರಶ್ನೆ ಎದುರಾದಾಗ, ಇಲ್ಲ ಇಲ್ಲ ನಾನು ಹೀರೋಯಿನ್ಸ್ ಕೈ ಮೇಲೆ ಮಾತ್ರ ಉಗುಳುವುದು. ನಾನು ಉಗುಳಿದವರೆಲ್ಲರೂ ನಂಬರ್ 1 ಆಗಿದ್ದಾರೆ ಎಂದಿದ್ದಾರೆ ನಟ. ಅಷ್ಟಕ್ಕೂ, ಇವರಿಂದ ಕೈ ಮೇಲೆ ಉಗುಳಿಸಿಕೊಂಡಿರುವ ನಟಿಯರ ಪೈಕಿ ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾದಂಥ ಖ್ಯಾತ ನಟಿಯರೂ ಸೇರಿದ್ದಾರಂತೆ!
ಈ ಹಿಂದೆ ಮಾಧುರಿ ದೀಕ್ಷಿತ್ ಅವರು ಆಮೀರ್ ಖಾನ್ ತಮ್ಮ ಕೈಮೇಲೆ ಉಗುಳಿದ ಘಟನೆಯನ್ನು ನೆನಪಿಸಿಕೊಂಡಿದ್ದರು. ತಮಗೆ ಹಸ್ತ ನೋಡಿ ಜಾತಕ ಹೇಳುವುದು ಬರುತ್ತದೆ ಎಂದು ಹೇಳಿದ್ದ ಆಮೀರ್ ಖಾನ್, ಹಸ್ತ ತೋರಿಸುವಂತೆ ನಟಿಯರಿಗೆ ಹೇಳುತ್ತಾರಂತೆ. ಅದೇ ರೀತಿ ಮಾಧುರಿ ದೀಕ್ಷಿತ್ಗೂ ಹೇಳಿದ್ದರು. ಇದನ್ನು ನಿಜ ಎಂದು ನಂಬಿದ್ದ ನಟಿ ಕೈ ತೋರಿಸಿದಾಗ, ಆಮೀರ್ ಖಾನ್ ಉಗುಳಿ ಹೋದಾಗ ಮಾಧುರಿ ಶಾಕ್ ಆದರಂತೆ. ಇದು 1990 ರ ದಿಲ್ ಚಿತ್ರದ ಸೆಟ್‌ನಲ್ಲಿ ಸಂಭವಿಸಿದ ಘಟನೆ. ಆಗ ನನಗೆ ತುಂಬಾ ಕೋಪ ಬಂದಿತ್ತು ಎಂದು ನಟಿ ಈ ಸಂದರ್ಶನದಲ್ಲಿ ನಗುತ್ತಲೇ ಹೇಳಿದ್ದರು.
56
ಮಾತು ಬಿಟ್ಟಿದ್ದ ಜೂಹಿ ಚಾವ್ಲಾ
ಈ ಹಿಂದೆ ಜೂಹಿ ಚಾವ್ಲಾ ಅವರಿಗೂ ಹೀಗೆ ಉಗುಳಿದ್ದರಂತೆ. ಇದೇ ಕಾರಣಕ್ಕೆ ನಟಿ ಆರು ವರ್ಷ ಆಮೀರ್ ಖಾನ್ ಜೊತೆ ಮಾತು ಬಿಟ್ಟಿದ್ದರು! ಮಾತ್ರವಲ್ಲದೇ, 2016 ರಲ್ಲಿ, Jio MAMI ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ 1992 ರ ಚಲನಚಿತ್ರ ಜೋ ಜೀತಾ ವೋಹಿ ಸಿಕಂದರ್‌ಗಾಗಿ ಪುನರ್ಮಿಲನದ ಪ್ಯಾನೆಲ್‌ನಲ್ಲಿ, ನಿರ್ದೇಶಕಿ ಫರಾ ಖಾನ್ ಕೈಗೂ ಉಗುಳಿ ವಿವಾದ ಸೃಷ್ಟಿಸಿದ್ದರು ಎಂದು ಫರಾ ಅವರೇ ಹೇಳಿದ್ದರು.
66
ಪೂಜಾ ಬೇಡಿ ಅಮ್ಮ
ಆದರೆ ಆಮೀರ್ ಕೈಗೆ ಉಗುಳಿದರೆ ಅವರು ನಂಬರ್ 1 ನಟಿಯರಾಗುತ್ತಾರೆ ಎಂದು ಹೇಳಿದ್ದರಿಂದ ನಟಿ ಪೂಜಾ ಬೇಡಿ, ನಾನು ನನ್ನ ಮಗಳು ಆಲಿಯಾಳನ್ನು ನಿಮ್ಮ ಬಳಿ ಕಳಿಸುತ್ತೇನೆ. ಅವಳ ಕೈಗೂ ಉಗುಳಿ ಎಂದಿದ್ದರಂತೆ. ಹಲವು ನಟಿಯರು ಇದರಿಂದ ತುಂಬಾ ಕೋಪಗೊಂಡಿದ್ದರು ಎಂಬ ವಿಷಯವನ್ನೂ ಹೇಳಿದ್ದಾರೆ. 1997 ರ ಚಲನಚಿತ್ರ ಇಷ್ಕ್‌ನ ಸೆಟ್‌ಗಳಲ್ಲಿ, ಅಮೀರ್ ಖಾನ್ ಅನೇಕ ಸಿಬ್ಬಂದಿ ಮುಂದೆ ಜೂಹಿ ಚಾವ್ಲಾ ಕೈಗೆ ಉಗುಳಿ ಓಡಿಹೋದಾಗ, ಜೂಹಿ ಚಾವ್ಲಾ ಆ ಚಿತ್ರದ ಶೂಟಿಂಗ್ಗೇ ಹಾಜರು ಆಗದೇ ಆರು ವರ್ಷ ಆಮೀರ್ ಜೊತೆ ಮಾತನ್ನೇ ಬಿಟ್ಟ ಬಗ್ಗೆಯೂ ನಟ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.