Tollywood Directors: ರಾಜಮೌಳಿ, ತ್ರಿವಿಕ್ರಮ್, ಸುಕುಮಾರ್ ಅವರಂತಹ ಟಾಪ್ ಡೈರೆಕ್ಟರ್‌ಗಳ ವೃತ್ತಿಜೀವನದ ಬೆಸ್ಟ್ ಸಿನಿಮಾಗಳ ಬಗ್ಗೆ ಈ ಸ್ಟೋರಿಯಲ್ಲಿದೆ. ಈ ಚಿತ್ರಗಳನ್ನು ಮೀರಿಸುವಂತಹ ಸಿನಿಮಾಗಳನ್ನು ಇವರು ಮತ್ತೆ ನಿರ್ದೇಶಿಸಬಲ್ಲರೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ.
ಟಾಲಿವುಡ್‌ನಲ್ಲಿ ಹಲವು ಟಾಪ್ ಡೈರೆಕ್ಟರ್‌ಗಳಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನೂ ತನ್ನ ಕೆರಿಯರ್‌ನಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡುವುದು ಸಹಜ. ಆದರೆ, ಆ ನಿರ್ದೇಶಕನ ಹೆಸರು ಹೇಳಿದ ತಕ್ಷಣ ನೆನಪಾಗುವ ಒಂದು ಬೆಸ್ಟ್ ಸಿನಿಮಾ ಇರುತ್ತದೆ. ಬೋಯಪಾಟಿ ಶ್ರೀನು, ರಾಜಮೌಳಿ, ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್ ಅವರಂತಹ ನಿರ್ದೇಶಕರ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.
28
ಬೋಯಪಾಟಿ ಶ್ರೀನು - ಭದ್ರ
ಬೋಯಪಾಟಿ ಕೆರಿಯರ್‌ನ ಬೆಸ್ಟ್ ಸಿನಿಮಾ ಎಂದರೆ ನಿಸ್ಸಂದೇಹವಾಗಿ 'ಭದ್ರ' ಎನ್ನಬಹುದು. 'ಭದ್ರ' ನಂತರ ಬೋಯಪಾಟಿ ಮಾಸ್ ಆ್ಯಕ್ಷನ್ ಸಿನಿಮಾಗಳನ್ನೇ ಮಾಡಿದರು. ಆದರೆ ಅವೆಲ್ಲವೂ ರೊಟೀನ್ ಎಂಬ ಟೀಕೆಗಳಿವೆ. ಆದರೆ 'ಭದ್ರ' ಚಿತ್ರದಲ್ಲಿ ಕಥೆ, ಸಂಗೀತ, ಚಿತ್ರಕಥೆ ಮತ್ತು ಎಮೋಷನ್ಸ್ ಎಲ್ಲವೂ ಪರ್ಫೆಕ್ಟ್ ಆಗಿ ಸಿಂಕ್ ಆಗಿದ್ದವು.
38
ಶ್ರೀನು ವೈಟ್ಲಾ - ದೂಕುಡು
ಶ್ರೀನು ವೈಟ್ಲಾ 'ದೂಕುಡು' ಚಿತ್ರಕ್ಕೂ ಮುನ್ನ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಆದರೆ 'ದೂಕುಡು' ಅವರ ಕೆರಿಯರ್‌ನ ಬೆಸ್ಟ್ ಸಿನಿಮಾ ಎನ್ನಬಹುದು. ಈ ಸಿನಿಮಾದಲ್ಲಿ ಮಹೇಶ್ ನಟನೆ, ಬ್ರಹ್ಮಾನಂದಂ ಕಾಮಿಡಿ ನೆಕ್ಸ್ಟ್ ಲೆವೆಲ್‌ನಲ್ಲಿತ್ತು. ಆದರೆ, ಇದೇ ಕಾಮಿಡಿ ಫಾರ್ಮುಲಾವನ್ನು ಶ್ರೀನು ವೈಟ್ಲಾ ಮತ್ತೆ ಮತ್ತೆ ಬಳಸಿದ್ದು ಅವರಿಗೆ ಮೈನಸ್ ಆಯಿತು.
ಪವನ್ ಕಲ್ಯಾಣ್ ಜೊತೆ ಹರೀಶ್ ಶಂಕರ್ ನಿರ್ದೇಶಿಸಿದ 'ಗಬ್ಬರ್ ಸಿಂಗ್' ಒಂದು ಕಲ್ಟ್ ಸಿನಿಮಾ ಆಗಿ ಉಳಿದಿದೆ. ಟಾಪ್ ಹೀರೋಗಳ ಕಮ್‌ಬ್ಯಾಕ್ ಚಿತ್ರಗಳಲ್ಲಿ 'ಗಬ್ಬರ್ ಸಿಂಗ್'ಗೆ ಅಗ್ರಸ್ಥಾನವಿದೆ.
58
ಕೊರಟಾಲ ಶಿವ - ಶ್ರೀಮಂತುಡು
ಕೊರಟಾಲ ಶಿವ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸಿದ ಬ್ಲಾಕ್‌ಬಸ್ಟರ್ ಸಿನಿಮಾ 'ಶ್ರೀಮಂತುಡು'. ಕೊರಟಾಲ ಶಿವ ಇದುವರೆಗೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಇದೇ ದಿ ಬೆಸ್ಟ್ ಎನ್ನಬಹುದು.
68
ಸುಕುಮಾರ್ - ರಂಗಸ್ಥಳಂ
'ಪುಷ್ಪ 2' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಾಖಲೆ ಬರೆದರೂ, ಸುಕುಮಾರ್ ಅವರ ಬೆಸ್ಟ್ ವರ್ಕ್ ಎಂದರೆ ನಿಸ್ಸಂದೇಹವಾಗಿ 'ರಂಗಸ್ಥಳಂ'. ಈ ಸಿನಿಮಾದಲ್ಲಿ ಸುಕುಮಾರ್ 80ರ ದಶಕದ ಹಳ್ಳಿ ರಾಜಕೀಯವನ್ನು ತೋರಿಸಿದ ರೀತಿ ಅದ್ಭುತ.
78
ತ್ರಿವಿಕ್ರಮ್ ಶ್ರೀನಿವಾಸ್ - ಅತಡು
ತ್ರಿವಿಕ್ರಮ್ ಶ್ರೀನಿವಾಸ್ ಮಾತುಗಳಿಂದಲೇ ಮ್ಯಾಜಿಕ್ ಮಾಡುವ ನಿರ್ದೇಶಕ. ತ್ರಿವಿಕ್ರಮ್ ಕೆರಿಯರ್‌ನ ಬೆಸ್ಟ್ ಸಿನಿಮಾ ಎಂದರೆ ಮಹೇಶ್ ಬಾಬು ನಟನೆಯ 'ಅತಡು'. ಈ ಸಿನಿಮಾದಲ್ಲಿನ ತ್ರಿವಿಕ್ರಮ್ ಡೈಲಾಗ್‌ಗಳು ಇಂದಿಗೂ ಫೇಮಸ್.
88
ರಾಜಮೌಳಿ
ರಾಜಮೌಳಿ ಪ್ರತಿ ಚಿತ್ರದಲ್ಲೂ ತಮ್ಮ ಮತ್ತು ತೆಲುಗು ಸಿನಿಮಾದ ಮಟ್ಟವನ್ನು ಹೆಚ್ಚಿಸುತ್ತಾ ಸಾಗುತ್ತಿದ್ದಾರೆ. ರಾಜಮೌಳಿ ಕೆರಿಯರ್‌ನ ಬೆಸ್ಟ್ ಸಿನಿಮಾ ಎಂದು ಒಂದೇ ಚಿತ್ರವನ್ನು ಹೇಳುವುದು ಕಷ್ಟ. ಆದರೆ 'ಬಾಹುಬಲಿ 2' ಅನ್ನು ಅತ್ಯುತ್ತಮ ಚಿತ್ರವಾಗಿ ಆಯ್ಕೆ ಮಾಡಬಹುದು. ಈ ಸಿನಿಮಾದಿಂದಲೇ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಭಾವ ಹೆಚ್ಚಾಯಿತು.
'ಪೋಕಿರಿ' ಸಿನಿಮಾ ಟಾಲಿವುಡ್ ದಾಖಲೆಗಳನ್ನು ಮುರಿಯಿತು. ಅಲ್ಲಿಯವರೆಗೂ ಯಾವ ನಿರ್ದೇಶಕರೂ ತೋರಿಸದ ರೀತಿಯಲ್ಲಿ ಪೂರಿ ಜಗನ್ನಾಥ್, ಮಹೇಶ್ ಬಾಬು ಅವರನ್ನು ಮಾಸ್ ಮತ್ತು ಸ್ಟೈಲಿಶ್ ಪಾತ್ರದಲ್ಲಿ ತೋರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.