ಇರಾ ತನ್ನ ತಂದೆಯೊಂದಿಗೆ ಕ್ರಿಸ್ ಮಸ್ ಸಮಯದ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಂದೆ-ಮಗಳ ಸುಂದರ ಬಾಂಧವ್ಯ ಕಾಣುತ್ತದೆ. ಚಿತ್ರದಲ್ಲಿ ಆಮೀರ್ ಖಾನ್ ತಮ್ಮ ಮಗಳೊಂದಿಗೆ ನಿಂತು ಪೋಸ್ ನೀಡುತ್ತಿದ್ದಾರೆ. ಅವರ ಹಿಂದೆ ಹೊಳೆಯುತ್ತಿರುವ ಕ್ರಿಸ್ಮಸ್ ಮರವಿದೆ.
ಎರಡನೇ ಫೋಟೋದಲ್ಲಿ, ನಟ ತನ್ನ ಮಗಳ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಮೂರನೇ ಫೋಟೋದಲ್ಲಿ, ಅವರು ಇರಾ ಜೊತೆ ಕುಳಿತಿರುವುದನ್ನು ಕಾಣಬಹುದು. ನಾಲ್ಕನೇ ಚಿತ್ರದಲ್ಲಿ, ಇರಾ ತಂದೆಯೊಂದಿಗೆ ಪೋಸ್ ನೀಡುತ್ತಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಂಡ ಇರಾ, ಮೇರಿ ಕ್ರಿಸ್ಮಸ್ ಭಾಗ 2.. ಬ್ಲೂಪರ್ಸ್ ಇನ್ ಸ್ಟೋರಿ! ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದೇ ಸಮಯದಲ್ಲಿ, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕೆಲವು ಬಳಕೆದಾರರು ಅಮೀರ್ ಖಾನ್ ಅವರ ಬುದ್ಧಿವಂತಿಕೆಯನ್ನು ಹೊಗಳುತ್ತಿದ್ದಾರೆ. ಇನ್ನೂ ಕೆಲವು ಬಳಕೆದಾರರು ತಂದೆ ಮತ್ತು ಮಗಳು ಒಟ್ಟಿಗೆ ಮೋಜು ಮಾಡುವುದನ್ನು ನೋಡಲು ಅದ್ಭುತವಾಗಿದೆ ಎಂದು ಹೇಳುತ್ತಿದ್ದಾರೆ.
Ira khan
ಆಮೀರ್ ಅಭಿಮಾನಿಗಳು ಈ ಫೋಟೋಗಳನ್ನು ಸಖತ್ ಲೈಕ್ ಮಾಡಿದ್ದಾರೆ. ಇರಾಗಿಂತಲೂ ಹೆಚ್ಚು ಮಂದಿ ಅಮೀರ್ ಅವರನ್ನು ಹೊಗಳಿದ್ದು ಕಾಮೆಂಟ್ ಸೆಕ್ಷನ್‌ನಲ್ಲಿ ಕಂಡುಬಂತು. ಮಗಳಿಗಿಂತ ತಂದೆಯೇ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಇರಾ ಖಾನ್ ಬಾಲಿವುಡ್‌ಗೆ ಕಾಲಿಡಲು ಬಯಸುತ್ತಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಲು ಚಿಂತಿಸುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಒಂದು ನಾಟಕವನ್ನು ನಿರ್ದೇಶಿಸಿದ್ದರು, ಇದರಲ್ಲಿ ಯುವರಾಜ್ ಸಿಂಗ್ ಅವರ ಪತ್ನಿ ಮತ್ತು ನಟಿ ಹೇಜಲ್ ಕೀಚ್ ಪ್ರಮುಖ ಪಾತ್ರದಲ್ಲಿದ್ದರು.
ಆಮೀರ್ ಜುಲೈ 2021 ರಲ್ಲಿ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಅವರಿಂದ ವಿಚ್ಛೇದನ ಪಡೆದರು. ಅಧಿಕೃತ ಘೋಷಣೆ ಮಾಡುವಾಗ ಮದುವೆಯಾಗಿ 15 ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದರು. ಆದರೆ ಅವರ ಮಗ ಆಜಾದ್ ಅನ್ನು ಒಟ್ಟಿಗೆ ಬೆಳೆಸುತ್ತಾರೆ ಎಂದು ಇಬ್ಬರೂ ಹೇಳಿದ್ದಾರೆ. ಕಿರಣ್ ನಿಂದ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು ಆಮೀರ್.