Amir Khan with Kiran Rao: ಮಗನಿಗಾಗಿ ಒಟ್ಟಿಗೆ ಕಾಣಿಸಿಕೊಂಡ ಮಾಜಿ ದಂಪತಿ

Published : Dec 02, 2021, 10:06 PM ISTUpdated : Dec 02, 2021, 10:15 PM IST

ಆಮೀರ್ ಖಾನ್ (Aamir Khan) ಕೆಲವು ತಿಂಗಳ ಹಿಂದೆ ಎರಡನೇ ಪತ್ನಿ ಕಿರಣ್ ರಾವ್‌ಗೆ (Kiran Rao) ವಿಚ್ಛೇದನ ನೀಡಿದ್ದರು. ಆದಾಗ್ಯೂ, ವಿಚ್ಛೇದನದ ನಂತರವೂ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡರು. ಈ ನಡುವೆ ದಂಪತಿಗಳು ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡರು. ವಾಸ್ತವವಾಗಿ ಇಬ್ಬರೂ ಪುತ್ರರು ಆಜಾದ್ ರಾವ್  ಅವರ ಜನ್ಮದಿನವನ್ನು ಆಚರಿಸಲು ಒಟ್ಟುಗೂಡಿದರು. ಹುಟ್ಟುಹಬ್ಬದ ಸಂಭ್ರಮದ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

PREV
18
Amir Khan with Kiran Rao: ಮಗನಿಗಾಗಿ ಒಟ್ಟಿಗೆ ಕಾಣಿಸಿಕೊಂಡ ಮಾಜಿ ದಂಪತಿ

ಆಮೀರ್-ಕಿರಣ್ ಇಬ್ಬರೂ ಮಗನ ಜೊತೆ ಕುಳಿತು ಕೇಕ್‌  ತಿನ್ನುತ್ತಿರುವುದು ಫೋಟೋಗಳಲ್ಲಿ ಕಂಡು ಬರುತ್ತಿದೆ. ಅದೇ ಸಮಯದಲ್ಲಿ, ಕೆಲವು ಫೋಟೋಗಳಲ್ಲಿ, ಕಿರಣ್ ತನ್ನ ಮಗನ ಹುಟ್ಟುಹಬ್ಬದ ಕೇಕ್ ಅನ್ನು ತೆಗೆಯುತ್ತಿರುವುದು ಕಾಣಬಹುದು. ಈ ಪಾರ್ಟಿಯಲ್ಲಿ ಆಮೀರ್ ಅವರ ಹಿರಿಯ ಮಗ ಜುನೈದ್ ಖಾನ್ ಕೂಡ ಭಾಗವಹಿಸಿದ್ದರು.

28

ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ಪುತ್ರ ಆಜಾದ್ ಗೆ ಈಗ 10 ವರ್ಷ. ಮಗನ ಸಂತೋಷಕ್ಕಾಗಿ ಮತ್ತೊಮ್ಮೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಲೇಖಕಿ ಶೋಭಾ ಡಿ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಆಜಾದ್ ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

38

ಆಮೀರ್-ಕಿರಣ್ ವಿಚ್ಛೇದನದ ನಂತರ ಆಜಾದ್ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಮಗನ ಸಂತೋಷಕ್ಕಾಗಿ ಕಿರಣ್ ರಾವ್ ಮನೆಯಲ್ಲಿ ಸಣ್ಣ ಪಾರ್ಟಿ ಇಟ್ಟಿದ್ದರು ಈ ಪಾರ್ಟಿಯಲ್ಲಿ ಆಮೀರ್ ಖಾನ್ ತಮ್ಮ ಮಗನಿಗೆ ವಿಶ್ ಮಾಡಲು ವಿಶೇಷವಾಗಿ ಬಂದಿದ್ದರು.


 

48

ಕಿರಣ್ ರಾವ್ ಅವರು ಆಮೀರ್ ಖಾನ್ ಅವರ ಲಗಾನ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರ. ಈ ಸಿನಿಮಾವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದಾರೆ. ಲಗಾನ್ ಸಮಯದಲ್ಲಿ ಕಿರಣ್ ಮೊದಲ ಬಾರಿಗೆ ಆಮೀರ್ ಅವರನ್ನು ಭೇಟಿಯಾದರು.

58

ಲಗಾನ್ ಸಮಯದಲ್ಲಿ ಕಿರಣ್ ನನ್ನ ತಂಡದ ಸದಸ್ಯರಾಗಿದ್ದರು. ಆಗ ಅವಳು ಸಹಾಯಕ ನಿರ್ದೇಶಕಿಯಾಗಿದ್ದಳು.ರೀನಾರಿಂದ ವಿಚ್ಛೇದನದ ನಂತರ ನಾನು ಆಘಾತಕ್ಕೆ ಒಳಗಾಗಿದ್ದೆ. ಅಷ್ಟರಲ್ಲಿ ಒಂದು ದಿನ ಕಿರಣ್ ಫೋನ್ ಮಾಡಿದ್ದಳು ಎಂದು ಆಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು

68

ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ಆಮೀರ್-ಕಿರಣ್ ವಿಚ್ಛೇದನ ಪಡೆದರು. ಈ ವರ್ಷ ಜುಲೈನಲ್ಲಿ ಇಬ್ಬರೂ ಹೇಳಿಕೆ ನೀಡಿ ವಿಚ್ಛೇದನದ ಸುದ್ದಿಯನ್ನು ನೀಡಿದ್ದರು. '15 ವರ್ಷಗಳಲ್ಲಿ ಒಟ್ಟಿಗೆ ಕಳೆದ ನಾವು ಪ್ರತಿ ಕ್ಷಣವನ್ನು ನಗುವಿನೊಂದಿಗೆ ಬದುಕಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಬೆಳೆಯುತ್ತಲೇ ಇತ್ತು. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇವೆ. ಗಂಡ ಮತ್ತು ಹೆಂಡತಿಯಂತಲ್ಲ ಆದರೆ ಒಬ್ಬರಿಗೊಬ್ಬರು ಸಹ-ಪೋಷಕರು ಮತ್ತು ಕುಟುಂಬವಾಗಿ ಇರುತ್ತೇವೆ ಎಂದು ಹೇಳಿಕೆ ನೀಡಿದ್ದರು.

78

'ಅವರು ರೀನಾ ದತ್ತಾ ಅವರಿಂದ ಬೇರ್ಪಟ್ಟಾಗ, ಅವರ ಜೀವನಕ್ಕೆ ಹೊಂದಿಕೊಳ್ಳುವುದು ನನಗೆ ದೊಡ್ಡ ಸವಾಲಾಗಿತ್ತು. ಆಮೀರ್ ಅವರಂತಹ ಗಂಡನೊಂದಿಗೆ ಬದುಕುವುದು ಕಷ್ಟ, ಏಕೆಂದರೆ ಅವರು ತುಂಬಾ ವಿಭಿನ್ನರಾಗಿದ್ದಾರೆ. ಅವರು ಪಾರ್ಟಿಗಳ ಬಗ್ಗೆ ಒಲವು ಹೊಂದಿಲ್ಲ, ಫಾಸ್ಟ್‌ ಹಾಡುಗಳನ್ನು ಕೇಳಲು ಇಷ್ಟಪಡುವುದಿಲ್ಲ' ಎಂದು ಕಿರಣ್ ರಾವ್ ಅವರು ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ  ಬಹಿರಂಗಪಡಿಸಿದ್ದರು. 

88

ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಕಪೂರ್ ಪ್ರಮುಖ ನಟಿ  ಮತ್ತು  ನಿರ್ದೇಶಕರು ಅದ್ವೈತ್ ಚಂದನ್ ಆಗಿದ್ದಾರೆ. ಈ ಚಿತ್ರವು 1994 ರ ಹಾಲಿವುಡ್‌ ಟಾಮ್ ಹ್ಯಾಂಕ್ಸ್ ಚಲನಚಿತ್ರ ಫಾರೆಸ್ಟ್ ಗಂಪ್ ರಿಮೇಕ್ ಆಗಿದೆ. ಲಾಲ್‌ ಸಿಂಗ್ ಚಡ್ಡಾವನ್ನುಆಮೀರ್ ಖಾನ್, ಕಿರಣ್ ರಾವ್ ಮತ್ತು ವಯಾಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿದ್ದಾರೆ ಮತ್ತು ಏಪ್ರಿಲ್ 2022 ರಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories