60ರ ಹರೆಯದಲ್ಲಿ 3ನೇ ಹಿಂದೂ ಸ್ತ್ರೀ ಎಂಟ್ರಿ ಕೊಟ್ಟಾಗ ಆಮೀರ್​ ಖಾನ್​ಗೆ ಆಗಿದ್ದೇನು? ನಟನ ಬಾಯಲ್ಲೇ ಕೇಳಿ

Published : Dec 21, 2025, 03:00 PM IST

61ನೇ ವಯಸ್ಸಿನ ಹೊಸ್ತಿಲಲ್ಲಿರುವ ನಟ ಆಮೀರ್ ಖಾನ್, ತಮ್ಮ 60ನೇ ಹುಟ್ಟುಹಬ್ಬದಂದು ಮೂರನೇ ಸಂಗಾತಿ ಗೌರಿಯನ್ನು ಪರಿಚಯಿಸಿದ್ದಾರೆ. ಈ ವಯಸ್ಸಿನಲ್ಲಿ ಹೊಸ ಸಂಬಂಧ ಸಿಕ್ಕಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಅವರು, ತಮ್ಮ ಹಿಂದಿನ ಇಬ್ಬರು ಪತ್ನಿಯರೊಂದಿಗಿನ ಸೌಹಾರ್ದಯುತ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.

PREV
16
61ರ ಹೊಸ್ತಿಲಿನಲ್ಲಿ ಆಮೀರ್​ ಖಾನ್​

ಬಾಲಿವುಡ್​ ನಟ ಆಮೀರ್​ ಖಾನ್​ ಇನ್ನೇನು ಮೂರು ತಿಂಗಳಿನಲ್ಲಿ 61 ವರ್ಷ ಪೂರೈಸಲಿದ್ದಾರೆ. ಈ ವರ್ಷದ ಆರಂಭದಲ್ಲಿ ಅರ್ಥಾತ್​ ಮಾರ್ಚ್​ 2025ರಲ್ಲಿ ಅವರು ತಮ್ಮ 60 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸಂದರ್ಭದಲ್ಲಿ, ತಮ್ಮ ಲೈಫ್​ಗೆ ಎಂಟ್ರಿ ಕೊಟ್ಟ 3ನೆಯ ಮಹಿಳೆ ಗೌರಿಯನ್ನು ಎಲ್ಲರಿಗೂ ಪರಿಚಯಿಸಿದರು. ತಮ್ಮಿಬ್ಬರ ಸಂಬಂಧವನ್ನು ಅವರು ಅಧಿಕೃತಗೊಳಿಸಿದರು. 18 ತಿಂಗಳಿನಿಂದ ತಾವಿಬ್ಬರೂ ಸಂಬಂಧದಲ್ಲಿ ಇರುವುದಾಗಿ ಹೇಳಿದರು.

26
ಮೂವರು ಹಿಂದೂ ಮಹಿಳೆಯರು!

ಇದಕ್ಕೂ ಮೊದಲು ಆಮೀರ್​ ಖಾನ್​ ಪತ್ನಿಯಾಗಿ ಬಂದವರು ಇಬ್ಬರು ಹಿಂದೂ ಮಹಿಳೆಯರೇ. ಮೊದಲನೆಯವರು ರೀನಾ ದತ್ತಾ ಮತ್ತು ನಂತರ ಕಿರಣ್ ರಾವ್. ಇಬ್ಬರೂ ಪತ್ನಿಯರು ಬೇಡ ಎಂದು ಡಿವೋರ್ಸ್​ ಕೊಟ್ಟಿರೋ ಆಮೀರ್ ಖಾನ್​, ಈಗಲೂ ಅವರ ಜೊತೆ ಉತ್ತಮ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 3ನೇಯ ಭಾವಿ ಪತ್ನಿಯನ್ನು ಪರಿಚಯಿಸುತ್ತಲೇ, ತಮ್ಮಿಬ್ಬರು ವಿಚ್ಛೇದಿತ ಪತ್ನಿಯ ಜೊತೆ ಸೌಹಾರ್ದಯುತ ಸಂಬಂಧ ಉಳಿಸಿಕೊಂಡಿರುವುದಾಗಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು.

36
ಕಿರಣ್​- ಆಮೀರ್​ ಜೋಡಿ

ಅದರಂತೆಯೇ, ಕಿರಣ್​ ಅವರು ಕೂಡ ಇಂದಿಗೂ ಆಮೀರ್​ ಖಾನ್​ ಜೊತೆ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಕಿರಣ್ ನಿರ್ದೇಶನದ 'ಲಾಪತಾ ಲೇಡೀಸ್'ಗೆ ಆಮೀರ್​ ಜೊತೆಯಾಗಿದ್ದರು. ಈ ಚಿತ್ರ ಬ್ಲಾಕ್​ ಬಸ್ಟರ್​ ಕೂಡ ಆಗಿತ್ತು.

46
3ನೇಯಾಕೆ ಎಂಟ್ರಿ ಕೊಟ್ಟಾಗ...

ಇದೀಗ ತಮ್ಮ ಲೈಫ್​ನಲ್ಲಿ 3ನೇಯಾಕೆ ಎಂಟ್ರಿ ಕೊಟ್ಟಾಗ ಅದೂ 60ರ ಹರೆಯದಲ್ಲಿ ತಮಗೆ ಏನು ಎನ್ನಿಸಿತು ಎನ್ನುವ ಬಗ್ಗೆ ನಟ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಯಸ್ಸಿನಲ್ಲಿ ನನಗೆ ಇನ್ನೋರ್ವ ಸಂಗಾತಿ ಸಿಗುತ್ತಾಳೆ ಎಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಅದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಗೌರಿ ನನ್ನ ಲೈಫ್​ಗೆ ಎಂಟ್ರಿ ಕೊಟ್ಟಿದ್ದೇ ಕನಸು ಎನ್ನಿಸುತ್ತದೆ ಎಂದಿದ್ದಾರೆ ಆಮೀರ್​ ಖಾನ್​.

56
ನಾನು ಅದೃಷ್ಟವಂತ

ಗೌರಿ ಅದ್ಭುತ ವ್ಯಕ್ತಿ. ತುಂಬಾ ಶಾಂತ ಸ್ವಭಾವದವಳು. ಅಂಥವಳನ್ನು ಈ ವಯಸ್ಸಿನಲ್ಲಿ ಪಡೆದಿರುವುದಕ್ಕೆ ನಾನು ಅದೃಷ್ಟಶಾಲಿ. ನಾನು ಅವಳನ್ನು ಭೇಟಿಯಾದದ್ದು ನನ್ನ ಜೀವನದ ಅದೃಷ್ಟ. ನನ್ನ ಎರಡೂ ಮದುವೆಗಳು ಯಶಸ್ವಿಯಾಗಿಲ್ಲದಿದ್ದರೂ, ಗೌರಿ ನನ್ನ ಜೀವನದಲ್ಲಿ ಯಶಸ್ಸು ತಂದಿದ್ದಾಳೆ ಎಂದಿದ್ದಾರೆ ಆಮೀರ್​ ಖಾನ್​.

66
ಮಕ್ಕಳ ಬಗ್ಗೆ

ಮಗಳು ಇರಾ ಮತ್ತು ಮಗ ಜುನೈದ್ ಅವರನ್ನು ರೀನಾಳೊಂದಿಗೆ ಹಂಚಿಕೊಂಡ ಅಮೀರ್, "ನಾನು ಅವಳೊಂದಿಗೆ ನಿಜವಾಗಿಯೂ ಬೆಳೆದಿದ್ದೇನೆ. ನಾವು ಮದುವೆಯಾದಾಗ ನಾವಿಬ್ಬರೂ ತುಂಬಾ ಚಿಕ್ಕವರಾಗಿದ್ದೆವು. ಮತ್ತು ಅವಳು ಅದ್ಭುತ ವ್ಯಕ್ತಿ. ಆದ್ದರಿಂದ ನಮಗೆ ನಮ್ಮ ಭಿನ್ನಾಭಿಪ್ರಾಯಗಳಿದ್ದಾಗ ಮತ್ತು ನಾವು ಬೇರ್ಪಟ್ಟಾಗ, ನಾವು ಮನುಷ್ಯರಾಗಿ ಬೇರ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ನಮಗೆ ಹಾಗೆ ಅನಿಸಲಿಲ್ಲ. ಮತ್ತು ಕಿರಣ್‌ನಲ್ಲೂ ಅದೇ ಆಗಿತ್ತು ಎಂದು ನಟ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories