ದುಲ್ಕರ್ ಸಲ್ಮಾನ್(Dulqer Salman) ನಾಯಕನಾಗಿ ನಟಿಸಿರುವ ಪವನ್ ಸದಿನೇನಿ ನಿರ್ದೇಶನದ ಬಹುನಿರೀಕ್ಷಿತ Inspirational ಪ್ಯಾನ್ ಇಂಡಿಯಾ ಸಿನಿಮಾ 'ಆಕಾಶಂಲೋ ಒಕ ತಾರ(Aakasamlo Oka Tara)' ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೇವಲ ಹತ್ತು ದಿನಗಳ ಮಾತ್ರ ಬಾಕಿ ಉಳಿದಿವೆ.
ದುಲ್ಕರ್ ಸಲ್ಮಾನ್(Dulqer Salman) ನಾಯಕನಾಗಿ ನಟಿಸಿರುವ ಪವನ್ ಸದಿನೇನಿ ನಿರ್ದೇಶನದ ಬಹುನಿರೀಕ್ಷಿತ Inspirational ಪ್ಯಾನ್ ಇಂಡಿಯಾ ಸಿನಿಮಾ 'ಆಕಾಶಂಲೋ ಒಕ ತಾರ(Aakasamlo Oka Tara)' ಬಿಡುಗಡೆಗೆ ಸಜ್ಜಾಗಿದೆ. ಇನ್ನೇನು ಕೇವಲ ಹತ್ತು ದಿನಗಳ ಮಾತ್ರ ಬಾಕಿ ಉಳಿದಿವೆ.
ಈ ಬಗ್ಗೆ ವಿಶೇಷ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಂದೀಪ್ ಗಣ್ಣಂ ಮತ್ತು ರಮ್ಯಾ ಗಣ್ಣಂ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾ ನವೆಂಬರ್ 20ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗೀತಾ ಆರ್ಟ್ಸ್, ಸ್ವಪ್ನ ಸಿನಿಮಾ, ಲೈಟ್‌ಬಾಕ್ಸ್ ಮೀಡಿಯಾ ಸಂಸ್ಥೆಗಳು ಜಂಟಿಯಲ್ಲಿ ಈ ಚಿತ್ರ ಮೂಡಿಬರಲಿದೆ.
25
Aakasamlo Oka Tara: ವಿಭಿನ್ನ, ಸ್ಫೂರ್ತಿದಾಯಕ ಪ್ರೇಮಕಥೆ
ಪವನ್ ಸದಿನೇನಿ ಅವರ ಸಿನಿಮಾಗಳೇ ಹಾಗೆ. ಎಲ್ಲರಂತೆ ಕತೆಗಳನ್ನು ಹೇಳುವುದಿಲ್ಲ. ಅವರ ಸಿನಿಮಾ ಕಥೆಗಳೇ ಬೇರೆ ಲೆವೆಲ್. ಈ ಸಿನಿಮಾದಲ್ಲಿ ಅದು ಸಾಬೀತಾಗಿದೆ. ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಕೃಷ್ಣ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಯಾಗಿರುವ ಸಾತ್ವಿಕ ವೀರವಲ್ಲಿ 'ಕಲ್ಪನಾ' ಎಂಬ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.
ಸಮಾಜ ವಿಧಿಸುವ ಕಟ್ಟಳೆ, ಎಲ್ಲ ಮೀತಿಗಳನ್ನು ಮೀರಿ ತನ್ನ ಕನಸು ನನಸು ಮಾಡಿಕೊಳ್ಳಬೇಕೆಂಬ ಕಲ್ಪನಾಳ ಕನಸುಗಳಿಗೆ ನಾಯಕ ಬಣ್ಣ ತುಂಬುತ್ತಾನೆ. ಕನಸು ನನಸು ಮಾಡಿಕೊಳ್ಳಲು ಪ್ರಯತ್ನಿಸುವ ಕಲ್ಪನಾಳಿಗೆ ಕೃಷ್ಣ ಬೆಂಬಲವಾಗಿ ನಿಲ್ಲುತ್ತಾನೆ. ಇವರಿಬ್ಬರ ಸುತ್ತ ಸಾಗುವ ಕಥೆಯೇ ಚಿತ್ರದ ಪ್ರಮುಖ ಆಕರ್ಷಣೆ.
35
Aakasamlo Oka Tara: ಕುಟ್ಟಿ ಕುಟ್ಟಿ ಪೂವೇ ಹಾಡು..f
ಇದೊಂದು ಸುಂದರ ಪ್ರೇಮಕಥೆ, ತುಂಬಾ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸಿಗೆ ಮುದ ನೀಡುತ್ತವೆ. ಅಂತಹ ಸೀನುಗಳು ಇರುವ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರದ 'ಕುಟ್ಟಿ ಕುಟ್ಟಿ ಪೂವೇ' 'ಕಣ್ಣೇ ಕಣ್ಣೇ' ಹಾಡುಗಳು ಯುವಕ-ಯುವತಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿವೆ. ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ರುಹಾನಿ, ಮುರಳಿ ಶರ್ಮಾ ಮತ್ತು ಸ್ವಾಸಿಕಾ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Aakasamlo Oka Tara: ನಟ ದುಲ್ಕರ್ ಸಲ್ಮಾನ್ ಹಿಂದಿನ ಸಿನಿಮಾಗಳು
ಇನ್ನು ನಟ ದುಲ್ಕರ್ ಸಲ್ಮಾನ್ ಯಾರು ಎಂಬುದನ್ನು ಹೇಳಬೇಕಿಲ್ಲ. ಏಕೆಂದರೆ 'ಮಹಾನಟಿ', 'ಸೀತಾ ರಾಮಂ' ಮತ್ತು 'ಲಕ್ಕಿ ಭಾಸ್ಕರ್' ಸಿನಿಮಾಗಳನ್ನು ನೋಡಿದವರಿಗೆ ಅವರ ಅಭಿನಯ ಎಂಥದ್ದೆಂಬುದು ತಿಳಿದಿರುತ್ತದೆ. ಇದೀಗ ಆಕಾಶಂಲೋ ಒಕ ತಾರ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ವಿಶಿಷ್ಠವಾಗಿ ತಮ್ಮದೇ ಆದ ಇಮೇಜ್ ಹೊಂದಿರುವ ನಾಯಕ ದುಲ್ಕರ್ ಸಲ್ಮಾನ್ ಅವರ ಮುಂದಿನ ಸಿನಿಮಾ ತೆಲಗು ಚಿತ್ರರಂಗದಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಭಾರೀ ಕುತೂಹಲ ಮೂಡಿಸಿದೆ.
ಈ ಹಿಂದೆ ಬಿಡುಗಡೆಯಾದ'ಕಲ್ಕಿ 2898 ಎಡಿ' ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆಕಾಶಂಲೋ ಒಕ ತಾರ ಸಿನಿಮಾ ಬಿಡುಗಡೆಯಾಗಲಿದೆ.
55
Aakasamlo Oka Tara: ಆಕಾಶಂಲೋ ಒಕ ತಾರ ಚಿತ್ರಕಥೆ ಏನು?
ಬಾಲ್ಯದಿಂದಲೂ ಕಲ್ಪನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುತ್ತಾಳೆ. ಅವಳಿಗೆ ತಾನು ಮುಂದೊಮ್ಮೆ ಅಸ್ಟ್ರಾನಾಟ್ ಆಗಬೇಕೆಂಬ ಕನಸು. ಪಿತೃ ಪ್ರಧಾನ ಚಿಂತನೆಯ ಕುಟುಂಬದಲ್ಲಿ ಅಂತಹ ಕನಸೆಲ್ಲ ನನಸಾಗುವುದು ದೂರದ ಮಾತು. ಮಹಿಳೆ ಅಂದ್ರೆ ಮನೆಗೆಲಸ, ಅಡುಗೆ ಮಾಡೋದಕ್ಕೆ ಸೀಮಿತ ಅಂತಾ ನಂಬಿರುವ ಕುಟುಂಬ. ಇಂಥ ವಾತಾವರಣದಲ್ಲಿ ಬೆಳೆಯುವ ಕಲ್ಪನಾಗಳಿಗೆ ಆಕಾಶದೆತ್ತರ ಕನಸು. ಆದರೆ ಊರಿನಾಚೆ ಹೋಗಲು ಕೂಡ ಕುಟುಂಬ ಬಿಡದಂತ ಸಾಮಾಜಿಕ ಕಟ್ಟುಪಾಡುಗಳು. ಇವೆಲ್ಲವನ್ನು ಮೀರಿ ಕಲ್ಪನಾ ತನ್ನ ಕನಸು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಆಕೆ ದೃಢ ಸಂಕಲ್ಪದ ಬಗ್ಗೆ ಟೀಸರ್‌ನಲ್ಲಿ ತೋರಿಸಿದೆ. ಅಲ್ಲದೆ ನಾಯಕಿಯ ಪತಿಯಾಗಿ ದುಲ್ಕರ್ ಸಲ್ಮಾನ್ ನೀಡುವ ಬೆಂಬಲವೂ ಇದೆ.
'ಆಕಾಶಂಲೋ ಒಕ ತಾರಾ' ಚಿತ್ರದ ಬಿಡುಗಡೆ ವಿವರಗಳು ಮತ್ತು ತಾಂತ್ರಿಕ ತಂಡ
ಪವನ್ ಸಾದಿನೇನಿ ನಿರ್ದೇಶನದ ಈ ಚಿತ್ರಕ್ಕೆ ಗುನ್ನಮ್ ಗಂಗರಾಜು ಕಥೆ ಬರೆದಿದ್ದಾರೆ, ಸುಜಿತ್ ಸಾರಂಗ್ ಛಾಯಾಗ್ರಹಣ ಮತ್ತು ಪ್ರವೀಣ್ ಕೆಎಲ್ ಸಂಕಲನ ಮಾಡಿದ್ದಾರೆ. ಖ್ಯಾತ ಸಂಗೀತಗಾರ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರವು ನವೆಂಬರ್ 20, 2026 ರಂದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.