ಭಾರತದಲ್ಲಿ 5000 ವರ್ಷದ ಹಿಂದೆನೇ ಹಾರುವ ವಾಹನ ಇತ್ತು, ಟೆಸ್ಲಾ ಕಾರಿಗೆ ಪುಷ್ಪಕ ವಿಮಾನ ಹೋಲಿಸಿದ ರಣಬೀರ್‌ಗೆ ಈ ಟ್ರೋಲರ್‌ಗಳ ಕಾಟ

Published : Nov 03, 2026, 10:23 AM IST

ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ ರಾಮಾಯಣ ಸಿನಿಮಾ ದೀಪಾವಳಿಗೆ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಾಮಾಯಣದಲ್ಲಿರುವ ಪುಷ್ಪಕ ವಿಮಾನದ ಬಗ್ಗೆ ನಟ ರಣಬೀರ್ ಕಪೂರ್ ನೀಡಿರುವ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‌ ಟ್ರೋಲ್ ಗೆ ಗುರಿಯಾಗಿದೆ ಅಷ್ಟು ಅವರು ಹೇಳಿದ್ದೇನು?

PREV
14
ರಣಬೀರ್ ಕಪೂರ್ 'ಪುಷ್ಪಕ್ ವಿಮಾನ ಹೇಳಿಕೆ ಟ್ರೋಲ್

ರಣಬೀರ್ ಕಪೂರ್(Ranbir kapoor) ಈಗ ತಮ್ಮ ಹೊಸ ಚಿತ್ರ 'ರಾಮಾಯಣ' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ದೀಪಾವಳಿಗೆ ಬಿಡುಗಡೆಯಾಗುತ್ತಿದ್ದು, ಬಿಡುಗಡೆ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಬರೆಯುತ್ತಿದ್ದರೆ. ಮುಂಗಡ ಬುಕಿಂಗ್‌ನಲ್ಲಿ ರಣಬೀರ್ ಕಪೂರ್ ಅವರ ಎರಡನೇ ಅತಿ ಹೆಚ್ಚು ಓಪನಿಂಗ್ ಪಡೆದ ಚಿತ್ರವಾಗಿದೆ. ಇನ್ನೊಂದೆಡೆ ಈ ಚಿತ್ರದಲ್ಲಿ ತೋರಿಸಿರುವ ಪುಷ್ಪಕ್ ವಿಮಾನ ಕುರಿತು ಹೇಳಿಕೆಯಿಂದ ಹಿಗ್ಗಾ ಟ್ರೋಲ್‌ಗೆ ಗುರಿಯಾಗಿದೆ.

24
ಪುಷ್ಪಕ್ ವಿಮಾನ ಎಲಾನ್ ಮಸ್ಕ್ ಹಾರುವ ಕಾರ ಹೋಲಿಕೆ

ಅಷ್ಟಕ್ಕೂ ರಣಬೀರ್ ಕಪೂರ್ ಹೇಳಿದ್ದಾದ್ರೂ ಏನು? ಎಲಾನ್ ಮಸ್ಕ್‌ ಕಾರಿಗೂ ಪುಷ್ಪಕ್ ವಿಮಾನಕ್ಕೂ ಏನು ಸಂಬಂಧ? ಅಸಲಿ ವಿಚಾರ ಇಲ್ಲಿದೆ.

ಇತ್ತೀಚೆಗೆ 'ರಾಮಾಯಣ' ಪ್ರಚಾರ ಕಾರ್ಯಕ್ರಮವೊಂದರಲ್ಲಿ ಯಶ್, ರಕುಲ್ ಪ್ರೀತ್ ಸಿಂಗ್, ನಿತೇಶ್ ತಿವಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ರಣಬೀರ್ ಕಪೂರ್ ಪುಷ್ಪಕ್ ವಿಮಾನದ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದೆ

34
ಪುಷ್ಪಕ್ ವಿಮಾನ: ರಣಬೀರ್ ಕಪೂರ್ ಹೇಳಿಕೆ ಟ್ರೋಲ್

ಎಲಾನ್ ಮಸ್ಕ್ ಟೆಸ್ಲಾ ಕಾರಿನೊಂದಿಗೆ ಪುಷ್ಪಕ್ ವಿಮಾನ ಹೋಲಿಕೆ

ರಾಮಾಯಣದ ಪುಷ್ಪಕ ವಿಮಾನದ ಬಗ್ಗೆ ರಣಬೀರ್ ಕಪೂರ್ ಮಾತನಾಡುತ್ತಾ, 'ಇತ್ತೀಚೆಗೆ ಎಲಾನ್ ಮಸ್ಕ್ ಹಾರುವ ಕಾರನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಆದರೆ ನಿಮಗಿದು ಗೊತ್ತೇ, ಭಾರತವು 5000 ವರ್ಷಗಳ ಹಿಂದೆನೇ 'ಪುಷ್ಪಕ್ ವಿಮಾನ' ತಯಾರಿಸುವ ಮೂಲಕ ಆ ಸಾಧನೆ ಮಾಡಿ ಮುಗಿಸಿದೆ ಎಂದು ಹೇಳಿದ್ದಾರೆ. ರಣಬೀರ್ ಕಪೂರ್ ಅವರ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಪುಷ್ಪಕ್ ವಿಮಾನ ಬಗ್ಗೆ ಹೇಳಿಕೆ ಬಳಿಕ ನೆಟಿಜನ್ ತರಹೇವಾರಿ ಟ್ರೋಲ್ ಮಾಡಿದ್ದಾರೆ, ಒಬ್ಬಾತ, ರಣಬೀರ್ ಜಿ, ಪುಷ್ಪಕ್ ವಿಮಾನ ಬಗ್ಗೆ ನೀವು ಇದನ್ನೆಲ್ಲ ಹೇಳುವಾಗ ಜೋಕರ್‌ನಂತ ಕಾಣಿಸಿದಿರಿ, ನಿಮ್ಮ ಮಾತನ್ನು ಯಾರೂ ನಂಬುವುದಿಲ್ಲ' ಎಂದರೆ, ಮತ್ತೊಬ್ಬ, 'ರೋಡ್‌ಸ್ಟರ್ ಈಗ ಗಾಳಿಯಲ್ಲಿದೆ. ಆದ್ರೆ ಪುಷ್ಪಕ್ ವಿಮಾನ ಈಗ ಕೇವಲ ಪುಸ್ತಕ, ಚಲನಚಿತ್ರಗಳಲ್ಲಿ ಮಾತ್ರ ಹಾರುತ್ತಿದೆ ಎಂದಿದ್ದಾರೆ.

44
ರಾಮಾಯಣದಲ್ಲಿ ಪುಷ್ಪಕ ವಿಮಾನದ ಪಾತ್ರವೇನು?

ಈ ಟ್ರೋಲ್‌ಗಳ ಮಧ್ಯೆಯೂ ರಾಮಾಯಣದ ಪುಷ್ಪಕ ವಿಮಾನದ ಪಾತ್ರದ ಬಗ್ಗೆ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅದು ಲಂಕಾದ ಅಸುರ ರಾವಣನ ಹಾರುವ ವಾಹನವಾಗಿತ್ತು. ಇನ್ನು ಪುರಾಣದ ಪ್ರಕಾರ ಹೇಳುವುದಾದರೆ ರಾವಣನು ಈ ಪುಷ್ಪಕ ವಿಮಾನವನ್ನು ಬಳಸಿಕೊಂಡು ಸೀತೆಯನ್ನ ಅಪಹರಿಸಿದ ಬಗ್ಗೆ ವಿವರಿಸುತ್ತದೆ. ಅಷ್ಟೇ ಅಲ್ಲ ಲಂಕಾ ದಹನ ಬಳಿಕ ಭಗವಾನ್ ಶ್ರೀರಾಮ್ ಇದೇ ವಾಹನದಲ್ಲಿ ಆಯೋಧ್ಯೆಗೆ ಹಿಂದಿರುಗಿದ ಎಂದೂ ಹೇಳಲಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories