ಕಪಾಳಕ್ಕೆ ಬಾರಿಸಿದ್ದಾರೆ, ಉಗಿದಿದ್ದಾರೆ; ನಟಿ ಪಾರ್ವತಿ ನಾಯರ್ ಅವರ ಮೇಲೆ ಸಹಾಯಕನ ಅರೋಪ

First Published Nov 12, 2022, 4:47 PM IST

ದಕ್ಷಿಣ ಭಾರತದ ನಟಿ ಪಾರ್ವತಿ ನಾಯರ್ (Parvati Nair) ಅವರ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ ಮತ್ತು ಉಗುಳಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ. ಈ ವಿಷಯವನ್ನು ಯುವಕ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾನೆ. ವಾಸ್ತವವಾಗಿ,  ನಟಿಗಾಗಿ ಕೆಲಸ ಮಾಡಿದ್ದೇನೆ ಮತ್ತು ತನ್ನ ವಿರುದ್ಧ ಪಾರ್ವತಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸುಭಾಷ್ ಅವರು ಮಧ್ಯರಾತ್ರಿ ಪಾರ್ವತಿ ಅವರ ಮನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯನ್ನು ನೋಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಂತರ ಅವರು ಆತನ ಮೇಲೆ ಕಳ್ಳತನದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ

ವಾಸ್ತವವಾಗಿ, ಅಕ್ಟೋಬರ್ 20 ರಂದು ಪಾರ್ವತಿ ಅವರು ತಮ್ಮ ದುಬಾರಿ ವಾಚ್‌ಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ಚೆನ್ನೈನ ನುಂಗಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

ವಾರಾಂತ್ಯದ ಆಚರಣೆಗೆಂದು ಕುಟುಂಬ ಸಮೇತ ತೆರಳಿದ್ದ ವೇಳೆ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿದ್ದವು. ಅವರ ಪ್ರಕಾರ, ಅವರು ತಮ್ಮ 31 ವರ್ಷದ ಕೆಲಸದವನಾದ ಚಂದ್ರ ಬೋಸ್‌ಗೆ ಕರೆ ಮಾಡಿದಾಗ ಯಾವುದೇ ಉತ್ತರ ಸಿಗಲಿಲ್ಲ  ಎಂದು ಪಾರ್ವತಿ ಹೇಳಿಕೊಂಡಿದ್ದರು.

ಪಾರ್ವತಿ ದೂರಿನ ನಂತರ, ಪ್ರಾಥಮಿಕ ತನಿಖೆಗಾಗಿ ಪೊಲೀಸರು ಆಕೆಯ ಮನೆಗೆ ತಲುಪಿದ್ದರು, ಕಳ್ಳತನವಾದ ವಸ್ತುಗಳಲ್ಲಿ 9 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳು, 1.30 ಲಕ್ಷ ರೂಪಾಯಿ ಮೌಲ್ಯದ ಹ್ಯಾಂಡ್‌ಸೆಟ್ ಮತ್ತು 2 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಸೇರಿದೆ.

ಈಗ  ಪಾರ್ವತಿ ನಾಯರ್ ಹಾಕಿದ್ದ ಕಳ್ಳತನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳ್ಳತನದ ಆರೋಪ ಹೊತ್ತಿರುವ ನಟಿಯ ಕೆಲಸದವನು ತಮ್ಮ ಹೇಳಿಕೆಯಲ್ಲಿ ಪಾರ್ವತಿ ವಿರುದ್ಧ ದೊಡ್ಡ ಆರೋಪಗಳನ್ನು ಮಾಡಿದ್ದಾನೆ.
 

ಪಾರ್ವತಿ ಅವರಿಂದ ಕಳ್ಳತನದ ಆರೋಪ ಹೊತ್ತಿರುವ ಚಂದ್ರಬೋಸ್ ಆರೋಪ ಸುಳ್ಳು ಎಂದಿದ್ದು, ತಮ್ಮ ವಿರುದ್ಧ ನಕಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಯಾಕೆಂದರೆ ಮಧ್ಯರಾತ್ರಿ ನಟಿಯ ಮನೆಯಲ್ಲಿ ಆತ ಅಪರಿಚಿತ ವ್ಯಕ್ತಿಯನ್ನು ನೋಡಿದ್ದ ಎಂದು  ಚಂದ್ರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

'ನಟಿ ನನಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದರು ಮತ್ತು ನನ್ನ ಕೈಗೆ ಉಗುಳಿದರು, ಅವರ ಸಹಚರ ಎಲಂಗೋ ಕೂಡ ನನ್ನ ಮೇಲೆ ಹಲ್ಲೆ ಮಾಡಿದನು, ನಾನು ಆರಂಭದಲ್ಲಿ ನುಂಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಮತ್ತು ಅದು ಅವರ ಅಧಿಕಾರ ವ್ಯಾಪ್ತಿ ಅಲ್ಲ  ಎಂದು ಹೇಳಿದರು. ನಂತರ ನಾನು ತೇನಾಂಪೇಟೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸ್ ದೂರು ಸಲ್ಲಿಸಿದೆ, ಆದರೆ ಎರಡು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ನಾನು ನೇರ ಆಯುಕ್ತರನ್ನು ಸಂಪರ್ಕಿಸಿದೆ' ಎಂದು  ಚಂದ್ರು ತಮ್ಮ ಹೇಳಿಕೆಯಲ್ಲಿ ನೀಡಿದ್ದಾನೆ .

ಚಂದ್ರು ಹೇಳುವಂತೆ ಅವರು ಪಾರ್ವತಿ ಅವರ ಒಬ್ಬ  ನಿರ್ಮಾಪಕರ ಮೂಲಕ ನಟಿಯ ಹೆಲ್ಪರ್‌ ಆದರು. ಪಾರ್ವತಿ ತನ್ನ ಪ್ರಾಣಕ್ಕೆ ಹಾನಿ ಮಾಡಬಹುದು ಎಂದು ಚಂದ್ರು ಆರೋಪಿಸಿದ್ದಾರೆ. ಈಗ ಪೊಲೀಸರ ತನಿಖೆಯಲ್ಲಿ ಏನೆಲ್ಲಾ ಹೊರಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

29 ವರ್ಷದ ಪಾರ್ವತಿ ಅವರು 2012 ರಲ್ಲಿ ಮಲಯಾಳಂ ಚಿತ್ರ 'ಪಾಪಿನ್ಸ್' ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅದರ ನಂತರ ಅವರು 'ಎನ್ನೈ ಅರಿಂತಲ್' ಮತ್ತು 'ಉತ್ತಮ ವಿಲನ್', 'ಮಲೈ ನೆರತು ಮಾಯಕ್ಕಂ' ಮುಂತಾದ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

click me!