7 Horror Films: ನೀವು ಹಾರರ್ ಸಿನಿಮಾ ಇಷ್ಟಪಡುವವರಾಗಿದ್ರೆ, ಈ ಏಳು ಸಿನಿಮಾಗಳು ನಿಮಗೆ ಸೂಕ್ತವಾಗಿವೆ. ಚಳಿಗಾಲದ ರಾತ್ರಿಯಲ್ಲಿ ಲೈಟ್ ಆಫ್ ಮಾಡಿ, ಕಂಬಳಿಯ ಕೆಳಗೆ ಬೆಚ್ಚಗೆ ಕುಳಿತು ಈ ಸಿನಿಮಾಗಳನ್ನು ವೀಕ್ಷಿಸಿ. ಆದ್ರೆ ಒಂದು ಮಾತು ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ಸಿನಿಮಾ ನೋಡಿ.
ಚಳಿಗಾಲದ ದೀರ್ಘ ರಾತ್ರಿಗಳು ಸ್ವಾಭಾವಿಕವಾಗಿ ನಿಗೂಢವಾಗಿರುತ್ತವೆ ಮತ್ತು ಈ ರಾತ್ರಿಗಳಲ್ಲಿ ಹಾರರ್ ಸಿನಿಮಾಗಳನ್ನು ನೋಡಿದ್ರೆ, ಥ್ರಿಲ್ ದ್ವಿಗುಣಗೊಳ್ಳುತ್ತದೆ. ನೀವು ಹಾರರ್ ಚಿತ್ರಗನ್ನು ಇಷ್ಟಪಡುವವರಾಗಿದ್ರೆ, ಈ ಏಳು ಚಿತ್ರಗಳು ಖಂಡಿತವಾಗಿಯೂ ನೋಡಬೇಕು. ಆದರೆ ಗುಂಡಿಗೆ ಮಾತ್ರ ಗಟ್ಟಿಯಾಗಿರಬೇಕು ಅಷ್ಟೇ.
28
ಹೆಲ್ ಹೌಸ್ ಎಲ್ಎಲ್ ಸಿ Hell House LLC (2016)
ಇದು ಅಮೆರಿಕದ ಹಾರರ್ ಚಿತ್ರವಾಗಿದ್ದು, ಹ್ಯಾಲೋವೀನ್ ಗಾಗಿ ಸ್ನೇಹಿತರ ಗುಂಪೊಂದು "ಹೆಲ್ ಹೌಸ್" ಎಂಬ ಭಯಾನಕ ಮನೆಯನ್ನು ನಿರ್ಮಿಸುತ್ತದೆ. ಆದರೆ ಮೊದಲ ರಾತ್ರಿಯಲ್ಲಿ, ಒಂದು ಭಯಾನಕ ಅಪಘಾತ ಸಂಭವಿಸುತ್ತದೆ, ಇದರ ಪರಿಣಾಮವಾಗಿ ಹಲವಾರು ಜನರು ಸಾವನ್ನಪ್ಪುತ್ತಾರೆ. ಚಿತ್ರವು ಆ ರಾತ್ರಿಯ ರಹಸ್ಯಗಳನ್ನು ಕ್ರಮೇಣ ಬಿಚ್ಚಿಡುತ್ತದೆ.
38
ಹೆರಿಡೆಟರಿ -Hereditary (2018)
ಹೆರಿಡಿಟರಿ ಒಂದು ಅಲೌಕಿಕ ಸೈಕಲಾಜಿಕಲ್ ಹಾರರ್ ಚಿತ್ರವಾಗಿದ್ದು, ಇದು ದುಃಖಿತ ಕುಟುಂಬದ ಕಥೆಯನ್ನು ಹೇಳುತ್ತದೆ. ಅಜ್ಜಿಯ ಮರಣದ ನಂತರ, ಕುಟುಂಬಕ್ಕೆ ವಿಚಿತ್ರ ಮತ್ತು ಭಯಾನಕ ಘಟನೆಗಳು ಕಾಡುತ್ತದೆ. ಕಥೆಯು ಕ್ರಮೇಣ ಭಯಾನಕ ತಿರುವುಗಳನ್ನು ಪಡೆಯುತ್ತದೆ, ಅದು ಕೊನೆಯವರೆಗೂ ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ಈ ಚಿತ್ರವು ದುಃಖ, ಮ್ಯಾಡ್ ನೆಸ್, ಹಾರರ್ ಥ್ರಿಲ್ ಎಲ್ಲವನ್ನೂ ನೀಡುತ್ತೆ.
ಇದು ಫ್ರೆಂಚ್ ಚಿತ್ರವಾಗಿದ್ದು, ರಕ್ತಪಾತ ಮತ್ತು ಉದ್ವೇಗದಿಂದ ತುಂಬಿದೆ. ವಿಹಾರಕ್ಕೆಂದು ತನ್ನ ಸ್ನೇಹಿತನ ಕುಟುಂಬವನ್ನು ಅವರ ಫಾರ್ಮ್‌ಹೌಸ್‌ಗೆ ಭೇಟಿ ನೀಡುವ ವಿದ್ಯಾರ್ಥಿನಿಯ ಸುತ್ತ ಕಥೆ ಸುತ್ತುತ್ತದೆ, ಆದರೆ ಒಬ್ಬ ಕೊಲೆಗಾರ ರಾತ್ರಿಯ ವೇಳೆ ಬರುತ್ತಾನೆ. ಚಿತ್ರದ ತಿರುವುಗಳು ನಿಮ್ಮನ್ನು ಸೀಟ್ ತುದಿಯಲ್ಲಿ ಕುಳಿತು ಸಿನಿಮಾ ನೋಡುವಂತೆ ಮಾಡುತ್ತೆ.
58
ಸಿನಿಸ್ಟರ್ -Sinister (2012)
ಈ ಚಿತ್ರವು ಹಳೆಯ ಮನೆಯಲ್ಲಿ ಕಂಡುಬರುವ ಸೂಪರ್ 8 ಚಿತ್ರಗಳ ಮೂಲಕ ನಿಗೂಢ ಸೀರಿಯಲ್ ಕಿಲ್ಲರ್ ನನ್ನು ಪತ್ತೆಹಚ್ಚುವ ಬರಹಗಾರನ ಕಥೆಯನ್ನು ಹೇಳುತ್ತದೆ. ಪ್ರತಿಯೊಂದು ರೀಲ್ ಒಂದು ಕುಟುಂಬದ ಕೊಲೆಯನ್ನು ಚಿತ್ರಿಸುತ್ತದೆ. ಸತ್ಯವನ್ನು ಬಹಿರಂಗಪಡಿಸುವ ಅವನ ಅನ್ವೇಷಣೆಯು ಅವನನ್ನು ನಿಧಾನವಾಗಿ ಸಾವಿನ ಹತ್ತಿರಕ್ಕೆ ಕರೆದೊಯ್ಯುತ್ತದೆ. ಚಿತ್ರದಲ್ಲಿನ ದೃಶ್ಯಗಳು ಎಷ್ಟು ಭಯಾನಕವಾಗಿದೆಯೆಂದರೆ ನೀವು ರಾತ್ರಿಯಲ್ಲಿ ಲೈಟ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಆಂಗಲ್ ಭಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
68
ದಿ ಲಾಡ್ಜ್ - The Lodge (2019)
ದಿ ಲಾಡ್ಜ್ ಕ್ರಿಸ್‌ಮಸ್ ಸಮಯದಲ್ಲಿ ತಾನು ಎಂಗೇಜ್ ಆಗಿರುವ ಹುಡುಗನ ಮಕ್ಕಳೊಂದಿಗೆ ಹಿಮ ಆವರಿಸಿರುವ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಮಹಿಳೆಯ ಕಥೆಯಾಗಿದೆ. ಇದೊಂದು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರವಾಗಿದೆ. ಬಳಿಕ ಲಾಡ್ಜ್ ನಲ್ಲಿ, ವಿಚಿತ್ರ ಘಟನೆಗಳು ಸಂಭವಿಸಲು ಪ್ರಾರಂಭಿಸುತ್ತವೆ, ಅದು ಅವಳ ಭೂತಕಾಲಕ್ಕೆ ಸಂಬಂಧಿಸಿರುತ್ತದೆ. ಚಿತ್ರದ ವಾತಾವರಣ ಮತ್ತು ಮೌನವು ಭಯದ ಭಾವನೆಯನ್ನು ಸೃಷ್ಟಿಸುತ್ತದೆ.
78
ದಿ ವೈಲಿಂಗ್ - The Wailing (2016)
ದಿ ವೈಲಿಂಗ್ ದಕ್ಷಿಣ ಕೊರಿಯಾದ ಭಯಾನಕ ಚಿತ್ರವಾಗಿದ್ದು, ಇದು ಸಸ್ಪೆನ್ಸ್ ಮತ್ತು ಭಯ ಎರಡನ್ನೂ ಅದ್ಭುತವಾಗಿ ನೀಡುತ್ತದೆ. ಕಥೆಯು ಒಬ್ಬ ಪೊಲೀಸ್ ತನ್ನ ಹಳ್ಳಿಯಲ್ಲಿನ ನಿಗೂಢ ಕೊಲೆಗಳು ಮತ್ತು ಕಾಯಿಲೆಗಳನ್ನು ತನಿಖೆ ಮಾಡುವ ಸುತ್ತ ಸುತ್ತುತ್ತದೆ. ಅವನು ಸತ್ಯಕ್ಕೆ ಹತ್ತಿರವಾಗುತ್ತಿದ್ದಂತೆ, ಭಯ ಮತ್ತು ಮೂಢನಂಬಿಕೆಯ ಪ್ರಪಂಚವು ತೆರೆದುಕೊಳ್ಳಲು ಪ್ರಾರಂಭಿಸುತ್ತದೆ.
88
ದಿ ವಿಚ್ - The Witch (2015)
1630 ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಈ ಜಾನಪದ ಭಯಾನಕ ಚಿತ್ರವು, ಕಾಡಿನ ಬಳಿಯ ತಮ್ಮ ಜಮೀನಿನಲ್ಲಿ ದುಷ್ಟಶಕ್ತಿಗೆ ಗುರಿಯಾಗುವ ಪ್ಯೂರಿಟನ್ ಕುಟುಂಬದ ಕಥೆಯನ್ನು ಹೇಳುತ್ತದೆ. ಭಯ, ಅನುಮಾನ ಮತ್ತು ಧಾರ್ಮಿಕ ಮೂಢನಂಬಿಕೆಗಳು ಕ್ರಮೇಣ ಕುಟುಂಬವನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟುತ್ತವೆ.