ಹುಡುಗ್ರು ಪಿಂಕ್ ಧರಿಸ್ಬಾರ್ದು ಅಂದಿದ್ಯಾರು..? ಪಿಂಕ್ ಬಟ್ಟೆ ಯಾರು ಬೇಕಾದ್ರೂ ಧರಿಸ್ಬೋದು, ಹಾಗೇ ಯಾವಸ ಸೀಸನ್‌ಗೂ ಈ ಬಣ್ಣ ಸೂಕ್ತವೇ. ಪಿಂಕ್ ಶೇಡ್‌ನಲ್ಲಿ ಬಾಲಿವುಡ್ ಬಾಯ್ಸ್ ಮಿಂಚಿರೋದನ್ನ ನೋಡಿ
ಆದಿತ್ಯ ರಾಯ್ ಕಪೂರ್: ಬೇಬಿ ಪಿಂಕ್ ಕಲರ್‌ನಲ್ಲಿ ಆದಿತ್ಯ ನಿಜಕ್ಕೂ ಸೂಪರ್ ಆಗಿ ಕಾಣ್ಸಿದ್ದಾರೆ. ಬ್ಲೂ ರಿಪ್ಪ್‌ಡ್ ಜೀನ್ಸ್, ಸ್ಲಿಪರ್ಸ್ ಮತ್ತು ಪಿಂಕ್ ಶರ್ಟ್. ಡೆಡ್ಲಿ ಕಾಂಬಿನೇಷನ್ ಅಂತ ತೋರ್ಸಿದ್ದಾರೆ ನಟ.
ಆಯುಷ್ಮಾನ್ ಖುರಾನ: ನಟ ಆಯುಷ್ಮಾನ್ ಒಂದು ಹೆಜ್ಜೆ ಮುಂದೆ ಹೋಗಿ ಪಿಂಕ್ ಪ್ಯಾಂಟ್ ಚೂಸ್ ಮಾಡಿದ್ದಾರೆ. ಅಬ್ಬಾ ಆಡ್ ಅಂತನ್ಕೊಂಡವ್ರು ಆಯುಷ್ಮಾನ್‌ನ ಈ ಲುಕ್ ನೋಡಿ.
ರಣಬೀರ್ ಕಪೂರ್: ರಣಬೀರ್‌ಗೆ ಪಿಂಕ್ ಕಲರ್ ಸ್ವಿಟ್‌ಶಟ್ ಚೆನ್ನಾಗಿ ಸೂಟ್ ಆಗಿದೆ. ಫುಲ್‌ಸ್ಲೀವ್ಸ್‌ನ ಪಿಂಕ್ ಜಾಕೆಟ್‌ಗೆ ಆಸಿಡ್ ವಾಶಡ್ ಜೀನ್ಸ್ ಧರಿಸಿದ್ದಾರೆ. ಅದರ ಜೊತೆಗೊಂದು ಬ್ಲೂ ಬೇಸ್‌ಬಾಲ್ ಕ್ಯಾಪ್
ವರುಣ್ ಧವನ್: ವರುಣ್ ಫೆಸ್ಟಿವಲ್ ಲುಕ್‌ಗೆ ಪಿಂಕ್ ಚೂಸ್ ಮಾಡಿದ್ದಾರೆ. ವೈಟ್ ಕರ್ತಾ ಸೆಟ್ ಮೇಲೆ ಪಿಂಕ್ ಬಂಧಗಲಾ ಜಾಕೆಟ್ ಸೂಪರ್ ಆಗಿ ಕಾಣಿಸಿದೆ.
ರಣವೀರ್:ರಣವೀರ್‌ಗೆ ಆಗಲ್ಲ ಅನ್ನೋ ಕಲರೇ ಇಲ್ಲ. ಎಲ್ಲ ಬಣ್ಣದ ಡ್ರೆಸ್ ಧರಿಸ್ತಾರೆ ನಟ. ರಣವೀರ್‌ಗೆ ಪಿಂಕ್ ಲುಕ್ ಕೂಡಾ ಸೂಟ್ ಆಗುತ್ತೆ. ಪಿಂಕ್ ಡೆನಿಮ್ ಜಾಕೆಟ್, ಮ್ಯಾಚಿಂಗ್ ಪ್ಯಾಂಟ್, ಪಿಂಕ್ ಶೂಸ್. ಇದಕ್ಕೆ ಬ್ಲೂ ಟೀಶರ್ಟ್ ಮತ್ತು ಬ್ಲೂ ಹ್ಯಾಟ್ ಹಾಕಿದ್ದಾರೆ