ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ಮಗಳಾಗಿದ್ದರಿಂದ ಶಾಲೆಯಲ್ಲಿ ತನಗೆ ಸಿಗುತ್ತಿದ್ದ ಸ್ಪೆಷಲ್ ಟ್ರೀಟ್‌ಮೆಂಟ್ ಬಗ್ಗೆ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದಾರೆ.
ಕ್ರೀಡೆಯಲ್ಲಿ ದೀಪಿಕಾ ಕೂಡಾ ತಂದೆಯನ್ನು ಪಾಲೋ ಮಾಡಿದ್ರು.
ಶಾಲೆಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಮಿಂಚಿ ಬಾಲಿವುಡ್ ಸ್ಟಾರ್ ಆಗಿ ನಂತರ ಹಾಲಿವುಡ್‌ಗೆ ಎಂಟ್ರಿಕೊಟ್ಟ ದೀಪಿಕಾ ಜರ್ನಿ ಸ್ಟೋರಿ ಕುತೂಹಲಕರವಾಗಿದೆ.
ನಿನ್ನನ್ನು ಪನಿಶ್ ಮಾಡ್ತಿದ್ವಿ, ಆದ್ರೆ ನಾವು ನಿನ್ನ ತಂದೆಯ ದೊಡ್ಡ ಫ್ಯಾನ್ಸ್ ಎಂದು ಶಿಕ್ಷಕರು ಆಕೆಯನ್ನು ಹೇಗೆ ಟ್ರೀಟ್ ಮಾಡ್ತಿದ್ದರು ಎಂಬುದನ್ನು ನಟಿ ನೆನಪಿಸಿದ್ದಾರೆ.
ಫನ್, ಪಾರ್ಟಿ ಮಾಡದೆ ಬರೀ ಬ್ಯಾಡ್ಮಿಂಟನ್‌ನಲ್ಲೇ ಮುಳುಗಿದ್ರಂತೆ ದೀಪಿಕಾ.
4-5 ಗಂಟೆಗೆ ಎದ್ದು, ವ್ಯಾಯಾಮ, ಶಾಲೆ, ಶಾಲೆ ಮುಗಿದ ತಕ್ಷಣ ಮನೆಗೆ, ಬಟ್ಟೆ ಬದಲಾಯಿಸಿ ತಿಂಡಿ ತಿನ್ನೋದು, ನಂತರ ನೇರ ಬ್ಯಾಡ್ಮಿಂಟನ್ ಕೋರ್ಟ್‌ಗೆ.
ಮನೆಗೆ ಬಂದು ಊಟ ಮಾಡಿ ಸುಸ್ತಾಗಿ ಮಲಗೋದು ಇದುವೇ ದಿನನಿತ್ಯದ ದಿನಚರಿಯಾಗಿತ್ತಂತೆ.
ಅದು ನನ್ನ ಬದುಕು. ನೋ ಲೇಟ್ ನೈಟ್, ನೋ ಟಿವಿ, ನೂ ಮೂವೀಸ್. ಕ್ರೀಡೆ ತ್ಯಾಗ, ಶಿಸ್ತು, ಸಮರ್ಪಣಾ ಭಾವ, ದೃಢ ನಿಶ್ಚಯವನ್ನು ಕೊಡುತ್ತದೆ ಎಂದಿದ್ದಾರೆ.
ಕೊಪೆನ್ ಹಾಗೆನ್ ಹೋಗಿ ಬಂದ ಮೇಲೆ ಎಲ್ಲ ಬದಲಾಯಿತು. ಮಾಡೆಲಿಂಗ್ ಆರಂಭಿಸಿದೆ. ಮಾಡೆಲಿಂಗ್‌ಗಾಗಿ 17 ವರ್ಷದಲ್ಲಿ ಸೂಟ್‌ಕೇಸ್ ಹಿಡಿದ ಮುಂಬೈಗೆ ಬಂದೆ ಎಂದಿದ್ದಾರೆ.
ಬ್ಯಾಡ್ಮಿಂಟನ್ ಅವಳ ಎರಡನೇ ಲವ್, ಮೊದಲಿನದ್ದಲ್ಲ ಎಂದಿದ್ದಾರೆ ಪ್ರಕಾಶ್ ಪಡುಕೋಣೆ.
2007ರಲ್ಲಿ ಶಾರೂಖ್ ಖಾನ್ ಜೊತೆಗೆ ಓಂ ಶಾಂತಿ ಓಂ ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಂಡ್ರು.