ಅನುರಾಗ್ ಕಶ್ಯಪ್ ಮೊದಲನೇ ಹೆಂಡತಿ ಆರತಿ ಬಜಾಜ್ ಮಾಜಿ ಗಂಡನ ನೆರವಿಗೆ ಧಾವಿಸಿದ್ದಾರೆ.
ಇಸ್ಟಾಗ್ರ್ಯಾಮ್ ಮೂಲಕ ಪೋಸ್ಟ್ ಮಾಡಿರುವ ಆರತಿ ಅನುರಾಗ್ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಅತ್ಯಂತ ಕೀಳುಮಟ್ಟದ ತಂತ್ರ ಎಂದಿದ್ದಾರೆ.
ಮೊದಲನೇ ಹೆಂಡತಿ ಮಾತನಾಡುತ್ತಿದ್ದೇನೆ.. ಮಹಿಳೆಯರನ್ನು ಸಬಲೀಕರಣ ಮಾಡುವ ನಿಮ್ಮ ಕೆಲಸ ಮುಂದುವರಿಸಿ.. ನಿಮ್ಮ ಬಳಿಬರುವ ಮಹಿಳೆಯರನ್ನು ಮಗಳಂತೆ ಕಾಣುವುದನ್ನು ನೋಡಿದ್ದೇನೆ ಎಂದು ಮಾಜಿ ಗಂಡನ ಪರ ನಿಂತಿದ್ದಾರೆ.
ನಿಮ್ಮ ಮೇಲೆ ಆರೋಪ ಮಾಡುತ್ತ ಸಮಯ ಮತ್ತು ಶ್ರಮ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಕೀಳು ಮಟ್ಟದ ತಂತ್ರ ಎಂದು ಹೇಳಿದ್ದಾರೆ.
ನಿಮ್ಮ ಧ್ವನಿ ಯಾವಾಗಲೂ ದೃಢವಾಗಿರಲಿ, ನಿಮ್ಮೊಂದಿಗೆ ನಾವಿದ್ದೇವೆ..ನಾವು ನಿಮ್ಮನ್ನು ಪ್ರೀತಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಆರತಿ ಮತ್ತು ಅನುರಾಗ್ ಅವರಿಗೆ ಅಲೈಯ್ ಎನ್ನುವ ಪುತ್ರಿ ಇದ್ದಾಳೆ. ಕಂಗನಾ ಸಹ ಅನುರಾಗ್ ವಿರುದ್ಧ ಕೆಂಡ ಕಾರಿದ್ದರು.
ಅನುರಾಗ್ ಕಶ್ಯಪ್ ನನ್ನನ್ನು ಬಟ್ಟೆ ಬಿಚ್ಚಿ ಮಂಚಕ್ಕೆ ಬರಲು ಆಹ್ವಾನ ನೀಡಿದ್ದರು ಎಂದು ನಟಿ ಪಾಯಲ್ ಘೋಷ್ ಆರೋಪ ಮಾಡಿದ್ದರು.
ಈ ಎಲ್ಲ ಆರೋಪಗಳನ್ನು ನಿರ್ದೇಶಕ ಅನುರಾಗ್ ಕಶ್ಯಪ್ ತಳ್ಳಿ ಹಾಕಿದ್ದರು.