ಸ್ವಿಫ್ಟ್, ವ್ಯಾಗನ್ಆರ್ ಸೇರಿ ಮಾರುತಿ ಕಾರುಗಳಿಗೆ 2 ಲಕ್ಷ ರೂ ಡಿಸ್ಕೌಂಟ್, ಕೈಗೆಟುಕುವ ಕಾರು ಈಗ ಮತ್ತಷ್ಟು ಅಗ್ಗ

Published : Jul 06, 2026, 07:15 PM IST

ಮಾರುತಿ ಸುಜುಕಿ ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಇದೀಗ 2 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದ್ದು, ಕಾರುಗಳು ಅತೀ ಕಡಿಮೆ ದರದಲ್ಲಿ ಖರೀದಿಗೆ ಲಭ್ಯ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್, ಬೋನಸ್ ಸೇರಿದಂತೆ ಸಂಪೂರ್ಣ ವಿವರ.

PREV
15
ಮಾರುತಿ ಸುಜುಕಿಯಿಂದ ಡಿಸ್ಕೌಂಟ್ ಆಫರ್

ಭಾರತದಲ್ಲಿ ಮಾರುತಿ ಸುಜುಕಿ ಅತೀ ಹೆಚ್ಚು ಮಾರುಕಟ್ಟೆ ಹೊಂದಿದೆ. ಮಾರುತಿ ಸುಜುಕಿ ಕಾರುಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಜೊತೆಗೆ ಕಾರು ನಿರ್ವಹಣೆ ಕಡಿಮೆ, ಉತ್ತಮ ಮೈಲೇಜ್ ಸೇರಿದಂತೆ ಹಲವು ಪ್ರಯೋಜನಗಳಿವೆ. ಇದೀಗ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಲು ಪ್ಲಾನ್ ಮಾಡಿರುವವರಿಗೆ ಮಾರುತಿ ಸುಜುಕಿ ಭರ್ಜರಿ ಡಿಸ್ಕೌಂಟ್ ಆಫರ್ ನೀಡಿದೆ. ಈ ಆಫರ್ ಜುಲೈ ತಿಂಗಳಿಗೆ ಮಾತ್ರ ನೀಡಲಾಗಿದೆ.

25
ವಿಕ್ಟೋರಿಸ್ ಸಿಎನ್‌ಜಿ ಕಾರಿಗೆ 2 ಲಕ್ಷ ರೂ ಡಿಸ್ಕೌಂಟ್

ಮಾರುತಿ ಸುಜುಜಿ ವಿಕ್ಟೋರಿಸ್ ಕಾರು ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಮೂಲಕ ಲಭ್ಯವಿದೆ. ಈ ಪೈಕಿ ವಿಕ್ಟೋರಿಸ್ ಸಿಎನ್‌ಜಿ ಕಾರಿಗೆ 2 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಒಂದು ಕೆಜಿ ಸಿಎನ್‌ಜಿಗೆ 27.02 ಕಿಲೋಮೀಟರ್ ಮೈಲೇಜ್ ನೀಡಲಿದೆ.

35
ಅರೆನಾ ಕಾರುಗಳ ಮೇಲೂ ಭಾರಿ ಡಿಸ್ಕೌಂಟ್

ಮಾರುತಿ ಸುಜುಕಿಯ ಅರೆನಾ ಡೀಲರ್‌ಶಿಪ್‌ನಲ್ಲಿರು ಕಾರುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದೆ. ವಿಶೇಷವಾಗಿ ಸಣ್ಣ ಹ್ಯಾಚ್ ಬ್ಯಾಕ್ ಅಲ್ಟೋ, ಸ್ವಿಫ್ಟ್, ವ್ಯಾಗನ್ಆರ್ ಸೇರಿದಂತೆ ಗರಿಷ್ಠ ಮಾರಾಟವಾಗುತ್ತಿರುವ ಕಾರುಗಳ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಇದರಿಂದ ಬಜೆಟ್ ಕಾರುಗಳು ಇದೀಗ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ.

45
ಯಾವ ಕಾರುಗಳಿಗೆ ಎಷ್ಟು ಡಿಸ್ಕೌಂಟ್

ಮಧ್ಯಮ ವರ್ಗದ ಅಲ್ಟೋ ಕೆ10 ಕಾರಿನ ಮೇಲೆ ನಗದು ರಿಯಾಯಿತಿ ಮತ್ತು ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೋನಸ್ ಸೇರಿದಂತೆ ಒಟ್ಟು 52,500 ರೂಪಾಯಿಗಳವರೆಗೆ ರಿಯಾಯಿತಿ ಸಿಗಲಿದೆ. ಇದರ ಟ್ಯಾಕ್ಸಿ ಆವೃತ್ತಿಯಾದ ಟೂರ್ H1 ಮೇಲೂ 50,000 ರೂ. ವರೆಗೆ ರಿಯಾಯಿತಿ ಇದೆ.ಭಾರತದ ಅತ್ಯಂತ ಜನಪ್ರಿಯ ಫ್ಯಾಮಿಲಿ ಕಾರ್ ವ್ಯಾಗನ್ಆರ್ ಮೇಲೆ ಒಟ್ಟು 52,500 ರೂಪಾಯಿಗಳವರೆಗೆ ಡಿಸ್ಕೌಂಟ್ ನೀಡಲಾಗಿದೆ. ಟೂರ್ H3 ಮೇಲೆ ಬರೋಬ್ಬರಿ 70,000 ರೂ. ವರೆಗೆ ಭರ್ಜರಿ ಲಾಭವಿದೆ.

55
ಮಾರುತಿ ಸ್ವಿಫ್ಟ್ ಹಾಗೂ ಬ್ರೆಜಾ

ಹೊಸ ಮಾರುತಿ ಸ್ವಿಫ್ಟ್ ಹೊಸ ಇಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಸ್ವಿಫ್ಟ್ ಕಾರಿನ ಮೇಲೂ ಜುಲೈನಲ್ಲಿ ನಗದು ಕಡಿತ ಮತ್ತು ಗ್ರಾಹಕ ಆಫರ್ ಸೇರಿದಂತೆ 45,000 ರೂಪಾಯಿಗಳವರೆಗೆ ರಿಯಾಯಿತಿ ಘೋಷಿಸಲಾಗಿದೆ. ಮಾರುತಿ ಬ್ರೆಜ್ಜಾ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬ್ರೆಜ್ಜಾ ಕಾರಿನ ಮೇಲೆ ಗ್ರಾಹಕರು ಒಟ್ಟು 55,000 ರೂಪಾಯಿಗಳವರೆಗೆ ಭಾರಿ ಉಳಿತಾಯವನ್ನು ಮಾಡಬಹುದಾಗಿದೆ.

Read more Photos on
click me!

Recommended Stories