75000 ಕಾರು ಮಾರಾಟ ಮೂಲಕ ಹೊಸ ದಾಖಲೆ ಬರೆದ ಎಂಜಿ ವಿಂಡ್ಸರ್, ಈ ಕಾರಿನಲ್ಲಿ ಅಂತಾದ್ದೇನಿದೆ?

Published : Jul 06, 2026, 01:36 PM IST

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಎಂಜಿ ವಿಂಡ್ಸರ್ ಇವಿ ಕಾರು ಹೊಸ ದಾಖಲೆ ಬರೆದಿದೆ. ಬರೋಬ್ಬರಿ 75 ಸಾವಿರ ಕಾರುಗಳು ಮಾರಾಟವಾಗಿದೆ. ಜನರು ವಿಂಡ್ಸರ್ ಇವಿ ಖರೀದಿಸಲು ಕಾರಣವೇನು? ಇದರ ಬೆಲೆ, ವಿಶೇಷತೆ ಏನು?

PREV
15
ಹೊಸ ಇತಿಹಾಸ ಸೃಷ್ಟಿಸಿದ ವಿಂಡ್ಸರ್

ಎಂಜಿ ಮೋಟಾರ್ ಭಾರತದಲ್ಲಿ ಬಿಡುಗಡೆ ಮಾಡಿದ ಎಲೆಕ್ಟ್ರಿಕ್ ಕಾರುಗಳ ಪೈಕಿ ವಿಂಡ್ಸರ್ ಇವಿ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಗರಿಷ್ಠ ಮಾರಾಟವಾಗುವ ಇವಿ ಕಾರುಗಳ ಪಟ್ಟಿಯಲ್ಲಿ ವಿಂಡ್ಸರ್ ಕೂಡ ಕಾಣಿಸಿಕೊಂಡಿದೆ. ಎರಡೂವರೆ ವರ್ಷದಲ್ಲಿ 75,000 ಕಾರುಗಳು ಮಾರಾಟವಾಗಿದೆ. ವಿಶೇಷ ಅಂದರೆ ಈ ವರ್ಷ ಬರೋಬ್ಬರಿ 19,000 ಕಾರುಗಳು ಮಾರಾಟವಾಗಿದೆ. ವಿಂಡ್ಸರ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ದೊಡ್ಡ ಇವಿ ಕಾರು.

25
ವಿಂಡ್ಸರ್ ಇವಿ ಕಾರಿನ ಬೆಲೆ ಎಷ್ಟು?

ಎಂಜಿ ವಿಂಡ್ಸರ್ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅತೀ ದೊಡ್ಡ ಕಾರು. ಹೆಚ್ಚಿನ ಸ್ಥಳಾವಕಾಶ ಈ ಕಾರಿನಲ್ಲಿದೆ. ಹೀಗಾಗಿ ಆರಾಮದಾಯಕ ಪ್ರಯಾಣಕ್ಕೆ ಈ ಕಾರು ಅತ್ಯುತ್ತಮ. ಇದರ ಬೆಲೆ 9.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ದುಬಾರಿ ಇವಿಗಳ ನಡುವೆ ಗೊಡ್ಡ ಗಾತ್ರದ ವಿಂಡ್ಸರ್ ಕಾರು ಬ್ಯಾಟರಿ ಸಬ್‌ಸ್ಕ್ರಿಪ್ಶನ್ ಆಯ್ಕೆಯಲ್ಲೂ ಲಭ್ಯವಿದೆ.

35
449 ಕಿಲೋಮೀಟರ್ ಮೈಲೇಜ್ ರೇಂಜ್

ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ವಿಂಡ್ಸರ್ ಇವಿ ಕಾರು ಲಭ್ಯವಿದೆ. 38kWh ಬ್ಯಾಟರಿ ಪ್ಯಾಕ್ ವಿಂಡ್ಸರ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 332 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 52.9kWh ಬ್ಯಾಟರಿ ಪ್ಯಾಕ್ ಕಾರು 449 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹೀಗಾಗಿ ದೂರ ಪ್ರಯಾಣಕ್ಕೂ ವಿಂಡ್ಸರ್ ಕಾರು ಉತ್ತಮವಾಗಿದೆ.

45
ಮೊದಲ ಇಂಟಲಿಜೆನ್ಸ್ ಸಿಯುವಿ ಕಾರು

ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರು ಭಾರತದ ಮೊದಲ ಇಂಟಲಿಜೆನ್ಸ್ ಸಿಯುವಿ ಕಾರಾಗಿದೆ. ಅಂದರೆ ಸೆಡಾನ್ ಕಾರಿನ ಐಷಾರಾಮಿತನ ಹಾಗೂ ಎಸ್‌ಯುವಿ ಕಾರಿನ ಗಘಡ್ ಲುಕ್ ಹಾಗೂ ಫೀಚರ್ಸ್ ನೀಡಲಿದೆ. ಬೆಲೆಯಲ್ಲಿ ಎ ಸೆಗ್ಮೆಂಟ್, ವಿನ್ಯಾಸ ದಲ್ಲಿ ಬಿ ಹಾಗೂ ವಿಶಾಲವಾದ ಸಿ ಸೆಗ್ಮೆಂಟ್ ಒಳವಿನ್ಯಾಸದ ಮೂಲಕ ಎಬಿಸಿ ಕಾರು ಎಂದೇ ಗುರುತಿಸಿಕೊಂಡಿದೆ.

55
ಪರ್ಫಾಮೆನ್ಸ್ ಹೇಗಿದೆ?

ಇದು ನಗರ ಹಾಗೂ ದೂರ ಪ್ರಯಾಣಕ್ಕೂ ಸೂಕ್ತವಾಗಿದೆ. 136hp ಪವರ್ ಹಾಗೂ 200Nm ಟಾರ್ಕ್ ಉತ್ಪಾದಿಸಲಿದೆ. ಎಂಜಿ ವಿಂಡ್ಸರ್ ಕಾರು ಅತ್ಯಾಧುನಿಕ 'ಏರೋಗ್ಲೈಡ್' (AeroGlide) ವಿನ್ಯಾಸ ಹೊಂದಿದೆ. ಬಿಸ್‌ನೆಸ್ ಕ್ಲಾಸ್ ಫೀಚರ್ಸ್ ನೀಡಲಾಗಿದ್ದು, ಐಷಾರಾಮಿತನದಿಂದ ಕೂಡಿದೆ. 135 ಡಿಗ್ರಿ ವಾಲಿಸಬಹುದಾದ ಸೀಟುಗಳನ್ನು ಹೊಂದಿದೆ 15.6 ಇಂಜಿನ ಟಚ್‌ ಡಿಸ್‌ಪ್ಲೇ ಹೊಂದಿದೆ.

Read more Photos on
click me!

Recommended Stories