ಆನ್‌ಲೈನ್ ಫುಡ್ ಡೆಲಿವರಿ ಆಪ್ Zomatoದಿಂದ ಫುಡ್ ಆರ್ಡರ್ ಮಾಡ್ತಿದ್ದೀರಾ?, ಇನ್ಮೇಲೆ ಸ್ವಲ್ಪ ಹುಷಾರಾಗಿರಿ. ಯಾಕಂದ್ರೆ ನಿಮಗೇ ಖರ್ಚು ಹೆಚ್ಚು. ಹೌದು, ಹಬ್ಬದ ಸೀಸನ್‌ಗೆ ಮುಂಚಿತವಾಗಿಯೇ ಜೊಮಾಟೊ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಶೇಕಡ 20 ರಷ್ಟು ಹೆಚ್ಚಿಸಿದೆ. ಹಬ್ಬದ ಸೀಸನ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಜೊಮಾಟೊ ಈ ನಿರ್ಧಾರವನ್ನು ತೆಗೆದುಕೊಂಡಿದೆ. Zomato ಪ್ರತಿ ಆರ್ಡರ್‌ಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು 10ರೂ.-12 ರೂ.ಗೆ ಹೆಚ್ಚಿಸಿದೆ. ಜೊಮಾಟೊ ಕಾರ್ಯನಿರ್ವಹಿಸುವ ಎಲ್ಲಾ ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕದಲ್ಲಿ ಈ ಹೆಚ್ಚಳ ಸಂಭವಿಸಿದೆ. ಆದರೆ ಕಂಪನಿಯ ಷೇರುಗಳು ಇಂದು ಏರಿಕೆ ಕಾಣುತ್ತಿವೆ.
25
ಕಳೆದ ವರ್ಷವೂ ಹಬ್ಬದ ಸೀಸನ್‌ಗೆ ಮುನ್ನ ಹೆಚ್ಚಳ
ಕಳೆದ ತಿಂಗಳು ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಸ್ವಿಗ್ಗಿ ಕೆಲವು ಸ್ಥಳಗಳಲ್ಲಿ 14 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಪ್ರಯೋಗಿಸಿತು. ಇನ್ನು ಕಳೆದ ವರ್ಷ ಹಬ್ಬದ ಸೀಸನ್‌ಗೆ ಮುನ್ನ ಜೊಮಾಟೊ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ರೂ.ನಿಂದ 10 ರೂ.ಗೆ ಹೆಚ್ಚಿಸಿತ್ತು.
35
ಕಡಿಮೆಯಾಗಿದೆ ಕಂಪನಿಯ ಲಾಭ
ಜೊಮಾಟೊದ ಮೂಲ ಕಂಪನಿ ಎಟರ್ನಲ್. ಜೂನ್ 2025 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಎಟರ್ನಲ್ ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡ 36 ರಷ್ಟು ಕುಸಿತವನ್ನು ವರದಿ ಮಾಡಿದೆ. ಕಂಪನಿಯ ಲಾಭವು 25 ಕೋಟಿ ರೂ.ಗಳಷ್ಟಿತ್ತು. ಆದರೆ ಮಾರ್ಚ್ ತ್ರೈಮಾಸಿಕದಲ್ಲಿ ಇದು 39 ಕೋಟಿ ರೂ.ಗಳಷ್ಟಿತ್ತು.
ಝೊಮಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್‌ಪ್ಯೂರ್‌ನಂತಹ ಬ್ರ್ಯಾಂಡ್‌ಗಳ ಮೂಲ ಕಂಪನಿಯಾದ ಎಟರ್ನಲ್ ಲಿಮಿಟೆಡ್‌ನ ಷೇರುಗಳು ಬುಧವಾರ ಲಾಭದೊಂದಿಗೆ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಂಪನಿಯ ಷೇರುಗಳು ಆರಂಭಿಕ ವಹಿವಾಟಿನಲ್ಲಿ 324.90 ರೂ.ಗಳಲ್ಲಿ ವಹಿವಾಟು ನಡೆಸಿದ್ದು, ಶೇ. 0.82 ಅಥವಾ 2.65 ರೂ.ಗಳಷ್ಟು ಏರಿಕೆಯಾಗಿದೆ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು 3,13,539.89 ರೂ.ಗಳಿಗೆ ಏರಿಕೆಯಾಗಿದೆ.
55
ಎರಡು ವರ್ಷಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ 6 ಪಟ್ಟು ಹೆಚ್ಚಳ
ದೀಪಿಂದರ್ ಗೋಯಲ್ ನೇತೃತ್ವದ ಈ ಝೊಮ್ಯಾಟೊ, ಆಗಸ್ಟ್ 2023 ರಲ್ಲಿ ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು. ಆ ಸಮಯದಲ್ಲಿ, ಪ್ರತಿ ಆರ್ಡರ್‌ಗೆ 2 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಈಗ 2 ವರ್ಷಗಳ ನಂತರ, ಈ ಪ್ಲಾಟ್‌ಫಾರ್ಮ್ ಶುಲ್ಕವು 12 ರೂ.ಗೆ ಹೆಚ್ಚಾಗಿದೆ. ಈ ರೀತಿಯಾಗಿ ಜೊಮಾಟೊ 2 ವರ್ಷಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ಬಾರಿ ಹೆಚ್ಚಿಸಿದೆ.