ಹೋಟೆಲ್ ಕೊಠಡಿಗಳ ಮೇಲಿನ GST ದರಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆಗಳನ್ನು ತರಲಿದೆ. ಇದರಿಂದ OYO ಸೇರಿದಂತೆ ಹಲವು ಹೋಟೆಲ್‌ಗಳಲ್ಲಿ ಕೊಠಡಿಗಳ ಬಾಡಿಗೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಗಳಿಂದಾಗುವ ಲಾಭಗಳೇನೆಂದು ತಿಳಿದುಕೊಳ್ಳೋಣ.
ಪ್ರಸ್ತುತ ಹೋಟೆಲ್ ಕೊಠಡಿಗಳ ಬೆಲೆಯ ಆಧಾರದ ಮೇಲೆ ಮೂರು ರೀತಿಯ ತೆರಿಗೆ ದರಗಳಿವೆ.
* ₹1000 ಒಳಗಿನ ಕೊಠಡಿಗಳಿಗೆ GST ಇಲ್ಲ.
* ₹1000 - ₹7500 ಮಧ್ಯದ ಕೊಠಡಿಗಳಿಗೆ 12% GST.
* ₹7500ಕ್ಕಿಂತ ಹೆಚ್ಚಿನ ಬೆಲೆಯ ಕೊಠಡಿಗಳಿಗೆ 18% GST.
ಹೀಗಾಗಿ, ₹5000-6000 ಬೆಲೆಯ ಕೊಠಡಿಗಳನ್ನು ಪಡೆಯುವವರಿಗೆ ಹೆಚ್ಚಿನ ಬಿಲ್ ಬರುತ್ತಿತ್ತು.
25
ಹೊಸ GSTಯಲ್ಲಿ ಬದಲಾವಣೆಗಳು
ಕೇಂದ್ರ ಸರ್ಕಾರದ ನಿರ್ಧಾರದಂತೆ ಹೊಸದಾಗಿ ಎರಡು GST ದರಗಳನ್ನು ಮಾತ್ರ ಜಾರಿಗೆ ತರಲಾಗುವುದು.
* ಮೊದಲನೆಯದು 5% GST
* ಎರಡನೆಯದು 18% GST.
ಇದರಿಂದ ಮಧ್ಯಮ ದರದ ಕೊಠಡಿಗಳನ್ನು ಪಡೆಯುವವರಿಗೆ ನೇರ ಲಾಭ ಸಿಗಲಿದೆ. ಏಕೆಂದರೆ ಈ ಹಿಂದೆ 12% ಕಟ್ಟಬೇಕಿತ್ತು, ಈಗ ಕೇವಲ 5% ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ.
35
ಬೆಲೆ ಎಷ್ಟು ಕಡಿಮೆಯಾಗುತ್ತದೆ?
ಉದಾಹರಣೆಗೆ ಒಂದು ಹೋಟೆಲ್ ಕೊಠಡಿಯ ಬೆಲೆ ₹5000 ಎಂದುಕೊಳ್ಳೋಣ. ಹಳೆಯ ವ್ಯವಸ್ಥೆಯಲ್ಲಿ: 12% GST = ₹600 ಆಗಿದ್ದರೆ, ಹೊಸ ವ್ಯವಸ್ಥೆಯಲ್ಲಿ 5% GST ₹250 ಆಗುತ್ತದೆ. ಅಂದರೆ ಒಂದೇ ಕೊಠಡಿಯ ಮೇಲೆ ₹350 ನೇರ ಉಳಿತಾಯವಾಗುತ್ತದೆ.
ಇದು OYO, Treebo, FabHotels ಮುಂತಾದ ಎಲ್ಲಾ ಮಧ್ಯಮ ದರ್ಜೆಯ ಹೋಟೆಲ್‌ಗಳಿಗೆ ಅನ್ವಯಿಸುತ್ತದೆ. ಹಾಗಾಗಿ ಗ್ರಾಹಕರ ಹಣ ಉಳಿತಾಯವಾಗಲಿದೆ.
₹7501ಕ್ಕಿಂತ ಹೆಚ್ಚಿನ ಐಷಾರಾಮಿ ಕೊಠಡಿಗಳ ಮೇಲೆ ಈ ಹಿಂದಿನಂತೆ 18% GST ಮುಂದುವರಿಯುತ್ತದೆ. ಆದ್ದರಿಂದ ದೊಡ್ಡ ಹೋಟೆಲ್‌ಗಳಲ್ಲಿ, ಫೈವ್ ಸ್ಟಾರ್ ಕೊಠಡಿಗಳಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಈ ಬದಲಾವಣೆ ಸಂಪೂರ್ಣವಾಗಿ ಮಧ್ಯಮ ವರ್ಗದ, ಬಜೆಟ್ ಪ್ರಯಾಣಿಕರಿಗಾಗಿ ತರಲಾಗಿದೆ.
GST ಕಡಿತ ಜಾರಿಯಾದರೆ ಸಾಮಾನ್ಯ ಗ್ರಾಹಕರ ಖರ್ಚು ಕಡಿಮೆಯಾಗುತ್ತದೆ. ಪ್ರವಾಸಿಗರು ಹೆಚ್ಚಾಗಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ. ಇದರಿಂದ ಹೋಟೆಲ್ ಉದ್ಯಮದಲ್ಲಿ ಬುಕಿಂಗ್‌ಗಳು ಹೆಚ್ಚಾಗಿ ವ್ಯಾಪಾರವೂ ವೃದ್ಧಿಯಾಗುತ್ತದೆ. ತೆರಿಗೆ ಕಡಿತದಿಂದ ದೇಶೀಯ ಪ್ರವಾಸೋದ್ಯಮವು ಇನ್ನಷ್ಟು ಚುರುಕಾಗುವ ಸಾಧ್ಯತೆಗಳಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.