Asianet Suvarna News Asianet Suvarna News

ಮೊಬೈಲ್ ಬಳಕೆಗೆ ಸ್ಟ್ರಿಕ್ಟ್ ರೂಲ್ಸ್, ಬ್ರೇಕ್ ಮಾಡಿದ್ರೆ ನೋ ಜೊಮಾಟೊ , ಸ್ವಿಗ್ಗಿ

ಮೊಬೈಲ್ ಬಳಕೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಮನೆಯಲ್ಲಿ ಮನುಷ್ಯರಿರೋದೆ ಗೊತ್ತಾಗೋದಿಲ್ಲ. ಎಲ್ಲರ ಕೈನಲ್ಲಿರುವ ಮೊಬೈಲ್ ಜಗತ್ತು ಮರೆಸಿದೆ. ಇದಕ್ಕೆ ಬ್ರೇಕ್ ಹಾಕಲು ಮಹಿಳೆ ಹೊಸ ನಿಯಮ ಜಾರಿಗೆ ತಂದಿದ್ದಾಳೆ. 
 

The Head Of The House Made Strict Rules To Keep Away From Mobile roo
Author
First Published Jan 5, 2024, 2:21 PM IST

ಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಫೋನ್ ಇಲ್ಲದೆ ಜೀವನ  ಅಪೂರ್ಣ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಓದಿನಿಂದ ಕಚೇರಿ ಕೆಲಸದವರೆಗೆ, ಕಾರ್ ಬುಕ್ ಮಾಡೋದ್ರಿಂದ ಹಿಡಿದು ಆಹಾರ ಆರ್ಡರ್ ಮಾಡುವವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಫೋನ್ ಬೇಕು. ಆದರೆ ಅಗತ್ಯಕ್ಕೂ, ವ್ಯಸನಕ್ಕೂ ವ್ಯತ್ಯಾಸವಿದೆ. ಅಗತ್ಯಕ್ಕೆ ಫೋನ್ ಬಳಸುವುದು ಸರಿ. ಆದರೆ ಯಾವುದೇ ಕೆಲಸ ಮಾಡದೆ ಫೋನ್ ನಲ್ಲೇ ಬ್ಯುಸಿಯಾಗಿರುವ ಚಟ ಸೂಕ್ತವಲ್ಲ. ಈ ಫೋನ್ ಚಟದಿಂದ ಹೊರಬರಲು ಅನೇಕರು ಪ್ರಯತ್ನ ನಡೆಸುತ್ತಿದ್ದಾರೆ. ಮನೆಯಲ್ಲಿ ಎಲ್ಲರೂ ಫೋನ್ ನಲ್ಲಿ ಬ್ಯುಸಿಯಾದ್ರೆ ಮನೆ ವಾತಾವರಣ ಹದಗೆಡುತ್ತದೆ ಎಂಬುದನ್ನು ಅರಿತ ಮಹಿಳೆಯೊಬ್ಬಳು ಮನೆಯವರ ಮೊಬೈಲ್ ಚಟ ಬಿಡಿಸಲು ಪ್ಲಾನ್ ಮಾಡಿದ್ದಾಳೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಕೆಲವು ನಿಯಮಗಳನ್ನು ಮಾಡಿ ಒಪ್ಪಂದಕ್ಕೆ ಸಹಿ ಹಾಕುವಂತೆ ಹೇಳಿದ್ದಾಳೆ. ಈಗ ಈ ಒಪ್ಪಂದದ ಫೋಟೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಜು ಗುಪ್ತಾ ಹೆಸರಿನ ಮಹಿಳೆ ಈ ಕೆಲಸಕ್ಕೆ ಕೈ ಹಾಕಿದ್ದಾಳೆ.  ಮನೆಯ ಜನರಿಗಾಗಿ ಮಾಡಿರುವ ನಿಯಮ ಮಂಜುಳಾ ಗುಪ್ತಾಗೂ ಅನ್ವಯವಾಗುತ್ತದೆ. ಈ ಅಗ್ರಿಮೆಂಟ್ ಹಿಂದಿಯಲ್ಲಿದೆ. ನಾನು ಮಂಜು ಗುಪ್ತಾ, ಕುಟುಂಬದ ಸದಸ್ಯರಿಗಾಗಿ ಕೆಲ ನಿಯಮ ಮಾಡ್ತಿದ್ದೇನೆ. ನನ್ನ ಮನೆಯವರು ನನಗಿಂತ ಮೊಬೈಲ್ ಗೆ ಹತ್ತಿರವಾಗ್ತಿದ್ದಾರೆ ಎಂಬುದನ್ನು ಮನಗಂಡು ನಾನು ಈ ನಿಯಮ ಮಾಡಿದ್ದೇನೆ ಎಂದು ಮಹಿಳೆ ಬರೆದಿದ್ದಾಳೆ.

ಮದುವೆ ವಾರ್ಷಿಕೋತ್ಸವದ ರೊಮ್ಯಾಂಟಿಕ್‌ ಹಾಲಿಡೇ ಬಗ್ಗೆ ಬಾಯಿ ಬಿಟ್ಟ ದೀಪಿಕಾ ಪಡುಕೋಣೆ

ಮಂಜುಳಾ ಗುಪ್ತಾ (Manjula Gupta)  ಮಾಡಿರುವ ನಿಯಮ ಏನು? : 
1. ಎಲ್ಲರೂ ಬೆಳಗ್ಗೆ ಎದ್ದು ಫೋನ್ (Phone) ಬಳಸುವ ಬದಲು ಸೂರ್ಯ ದೇವರನ್ನು ನೋಡಬೇಕು.
2. ಡೈನಿಂಗ್ ಟೇಬಲ್‌ನಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡಬೇಕು. ಈ ಸಮಯದಲ್ಲಿ ಫೋನ್‌ಗಳು 20 ಹೆಜ್ಜೆ ದೂರದಲ್ಲಿ ಇರಬೇಕು.
3. ರೀಲ್ಸ್ ಬದಲು ತಮ್ಮ ಕೆಲಸ ಮಾಡಬೇಕು ಎನ್ನುವ ಕಾರಣಕ್ಕೆ ಬಾತ್ ರೂಮ್ ಗೆ ಹೋಗುವಾಗ ಫೋನನ್ನು ಹೊರಗೆ ಇಡಬೇಕು.

ನಿಯಮ ಮುರಿದ್ರೆ ಸಿಗುತ್ತೆ ಈ ಶಿಕ್ಷೆ : ಅಗ್ರಿಮೆಂಟ್ ನಲ್ಲಿ ಇದನ್ನೂ ಹೇಳಲಾಗಿದೆ. ಯಾವುದೇ ವ್ಯಕ್ತಿ ನಿಯಮ ಮುರಿದ್ರೆ ಯಾವ ಶಿಕ್ಷೆಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಯಾವುದೇ ವ್ಯಕ್ತಿ ಈ ನಿಯಮ ಮುರಿದ್ರೆ ಒಂದು ತಿಂಗಳು ಜೊಮಾಟೊ (Zomato) ಅಥವಾ ಸ್ವಿಗ್ಗಿಯಿಂದ (Swiggy) ಆಹಾರ ಆರ್ಡರ್ (Food Order) ಮಾಡುವಂತಿಲ್ಲ.  ಈ ಫೋಟೋವನ್ನು ಎಕ್ಸ್ ನ @clownlamba ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನನ್ನ ಚಿಕ್ಕಮ್ಮ ಮನೆಯ ಎಲ್ಲ ಸದಸ್ಯರಿಂದ ಈ ಅಗ್ರಿಮೆಂಟ್ ಗೆ ಸಹಿ ಪಡೆದಿದ್ದಾರೆ ಎಂದು ಶೀರ್ಷಿಕೆ ಹಾಕಿದ್ದಾರೆ. 

ಮನೆ ಸೊಸೆಗೆ ಸೇರಬೇಕಾದ ಬೆಂಡೋಲೆ ಮೊಮ್ಮಗಳು ಸಾರಾ ಪಾಲಾದ ಕತೆ ಹೇಳಿದ ನಟಿ ಶರ್ಮಿಳಾ  

ಮಂಜುಳಾ ಗುಪ್ತಾ ಮಕ್ಕಳು ನೆಟ್ಫ್ಲಿಕ್ಸ್ ನಲ್ಲಿ ಕೋ ಗಯೆ ಹಮ್ ಕಹಾ ಎಂಬ ಸಿನಿಮಾ ತೋರಿಸಿದ್ದರಂತೆ. ಅದನ್ನು ನೋಡಿದ ನಂತ್ರ ನನಗೆ ಪರಿಸ್ಥಿತಿ ಅರ್ಥವಾಯ್ತು. ಮಕ್ಕಳು ಒಂದು ಲೈಕ್ಸ್ ಗೆ ಎಷ್ಟು ಹುಚ್ಚರಾಗ್ತಿದ್ದಾರೆ ಎಂಬುದನ್ನು ತಿಳಿದು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕೋಪದಿಂದ ತೆಗೆದುಕೊಂಡ ತೀರ್ಮಾನ ಇದಲ್ಲ ಎಂದು ಮಂಜುಳಾ ಗುಪ್ತಾ ಹೇಳಿದ್ದಾರೆ. 
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದ್ದು, 4 ಲಕ್ಷ 87 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಲಕ್ಷಾಂತರ ಮಂದಿ ಲೈಕ್ ಒತ್ತಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ಒಪ್ಪಂದದಲ್ಲಿ ದೋಷವಿದೆ. ಒಪ್ಪಂದದಲ್ಲಿ ದಿನಾಂಕವನ್ನು ನಮೂದಿಸದಿದ್ದರೆ, ಅದರ ಅನುಪಸ್ಥಿತಿಯಲ್ಲಿ ಒಪ್ಪಂದವು ಅಮಾನ್ಯವಾಗುತ್ತದೆ ಎಂದು ಒಬ್ಬರು ಬರೆದಿದ್ದಾರೆ. ಅನೇಕರು ಮಂಜು ಗುಪ್ತಾ ನಿಯಮ ಮೆಚ್ಚಿದ್ರೆ ಮತ್ತೆ ಕೆಲವರು ಮನೆಯಲ್ಲಿರುವ ಮಕ್ಕಳ ಸ್ಥಿತಿ ಹೇಗಿರುತ್ತೆ ಎನ್ನುವ ಬಗ್ಗೆ ಫನ್ನಿ ವಿಡಿಯೋ ಹಂಚಿಕೊಂಡಿದ್ದಾರೆ.
 

Follow Us:
Download App:
  • android
  • ios