ಈ ವ‍ರ್ಷದ ಜಗತ್ತಿನ ಟಾಪ್ 10 ಶ್ರೀಮಂತ ಮಹಿಳೆಯರ ಫೋರ್ಬ್ಸ್ ಪಟ್ಟಿ ರಿಲೀಸ್‌, ಭಾರತದ ಏಕೈಕ ಮಹಿಳೆಗೆ ಸ್ಥಾನ!

Published : Apr 03, 2025, 04:47 PM ISTUpdated : Apr 03, 2025, 05:04 PM IST

 ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಪ್ರತಿವರ್ಷದಂತೆ ಈ ವರ್ಷ ಕೂಡ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಬಾರಿ ಮಹಿಳೆಯರ ಪ್ರಾತಿನಿಧ್ಯ ಪಟ್ಟಿಯಲ್ಲಿ ಕಡಿಮೆಯಾಗಿದೆ ಎಂದು ಪೋರ್ಬ್ಸ್ ಹೇಳಿದೆ. ವಿಶ್ವದ ಒಟ್ಟು 3028 ಶ್ರೀಮಂತರ ಪಟ್ಟಿಯಲ್ಲಿ ಕೇವಲ 406 ಮಂದಿ ಮಹಿಳೆಯರಷ್ಟೇ ಶ್ರೀಮಂತರಾಗಿದ್ದು ಕೇವಲ ಶೇ. 13.4ರಷ್ಟಿದೆ ಎಂದು ಹೇಳಿದೆ. ಆದ್ರೂ ಮಹಿಳಾ ಶ್ರೀಮಂತರ ಪಟ್ಟಿ ನಿಧಾನವಾಗಿ ಏರಿಕೆಯತ್ತ ಸಾಗುತ್ತಿರುವುದು ಖುಷಿಯ ಸಂಗತಿಯೇ ಸರಿ. 

PREV
110
ಈ ವ‍ರ್ಷದ ಜಗತ್ತಿನ ಟಾಪ್ 10  ಶ್ರೀಮಂತ ಮಹಿಳೆಯರ ಫೋರ್ಬ್ಸ್ ಪಟ್ಟಿ ರಿಲೀಸ್‌, ಭಾರತದ ಏಕೈಕ ಮಹಿಳೆಗೆ ಸ್ಥಾನ!

ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯ ನಂಬರ್ 1 ಸ್ಥಾನದಲ್ಲಿ ವಾಲ್‌ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್‌ ಪುತ್ರಿ, ಆಲಿಸ್ ವಾಲ್ಟನ್  ಇದ್ದು, 101 ಬಿಲಿಯನ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಅಮೆರಿಕದಲ್ಲಿರುವ ವಾಲ್ಟನ್  ಗೆ ಈಗ 75 ವರ್ಷ ವಯಸ್ಸು. ಸ್ಯಾಮ್ ವಾಲ್ಟನ್‌ ಅವರ ಏಕೈಕ ಪುತ್ರಿಯಾಗಿದ್ದು, ಕಲಾ ವಿಭಾಗಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. 2025ರಲ್ಲಿ ಮೆಡಿಕಲ್ ಕಾಲೇಜನ್ನು ತೆರೆಯಲಿದ್ದಾರೆ.

210

ಲೋರಿಯಲ್ ಸಂಸ್ಥಾಪಕರ ಮೊಮ್ಮಗಳಾದ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್  ಎರಡನೇ ಶ್ರೀ ಮಂತ ಮಹಿಳೆಯಾಗಿದ್ದು, 81.6 ಬಿಲಿಯನ್‌ ನಿವ್ವಳ ಮೌಲ್ಯ ಹೊಂದಿದ್ದಾರೆ. ಫ್ರಾನ್ಸ್‌ನ  71 ವರ್ಷದ ಮೇಯರ್ಸ್ ಸಂಪತ್ತಿನ ಮೂಲ ಲೋರಿಯಲ್‌ ಆಗಿದ್ದು, ಈ ಹಿಂದಿನ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಟಾಪ್‌ ನಲ್ಲಿದ್ದರು.   20% ಷೇರು ಇಳಿಕೆ ಕಂಡ ಕಾರಣ ಎರಡನೇ ಸ್ಥಾನಕ್ಕೆ ಕುಸಿದರು. 2024ರಲ್ಲಿ ಕಂಪೆನಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದೆ ಅವರ ಮಗ ಜಿನ್‌ ವಿಕ್ಟರ್‌ ಕಂಪೆನಿಯನ್ನು ಮುನ್ನಡೆಸಲಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯ ಟಾಪ್ 10ರಿಂದ ಮುಕೇಶ್ ಅಂಬಾನಿ ಔಟ್; ಎಷ್ಟನೇ ಸ್ಥಾನ?

310

ಜೂಲಿಯಾ ಕೋಚ್‌ ಮತ್ತು ಕುಟುಂಬ
62 ವರ್ಷದ ಅಮೆರಿಕಾದ ಜೂಲಿಯಾ ಕೋಚ್‌ ಮತ್ತು ಕುಟುಂಬ ವಿಶ್ವದ ಮೂರನೇ ಶ್ರೀಮಂತ ಮಹಿಳೆಯಾಗಿದ್ದು, ಕೋಚ್‌ ಮತ್ತು ಇಂಕ್ ಇವರ ಸಂಪತ್ತಿನ ಮೂಲವಾಗಿದೆ. 74.2 ಬಿಲಿಯನ್ ಆಸ್ತಿಗೆ ಒಡತಿಯಾಗಿದ್ದಾರೆ. 2019ರಲ್ಲಿ ಪತಿ ಡೇವಿಡ್ ಕೋಚ್‌ ನಿಧನದ ನಂತರ ತೈಲ, ಕೃಷಿ, ರಿಯಲ್‌ ಎಸ್ಟೇಟ್ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಇಂಕ್‌ ನಲ್ಲಿ 42% ಹೂಡಿಕೆ ಹೊಂದಿದ್ದು, ಈ ವರ್ಷ ಸುಮಾರು 10  ಬಿಲಿಯನ್ ಡಾಲರ್ ಗಳಿಸಿದರು.
 

410

ಜಾಕ್ವೆಲಿನ್ ಮಾರ್ಸ್
ಅಮೆರಿಕದ ಜಾಕ್ವೆಲಿನ್ ಮಾರ್ಸ್ ಗೆ ಈಗ 85 ವರ್ಷ ವಯಸ್ಸು, ಕ್ಯಾಂಡಿ ಮತ್ತು ಸಾಕು ಪ್ರಾಣಿಗಳ ಆಹಾರ ಬಿಸಿನೆಸ್ ಹೊಂದಿದ್ದಾರೆ. 46.6 ಬಿಲಿಯನ್‌ ನಿವ್ವಳ ಮೌಲ್ಯ ಹೊಂದಿದ್ದಾರೆ. ಮಾರ್ಸ್ & ಎಂಎಸ್‌  ಸ್ನಿಕರ್ಸ್ ಮತ್ತು ಪೆಡಿಗ್ರಿ ಸಾಕು ಪ್ರಾಣಿ ಆಹಾರ ತಯಾರಿಕೆಯ ಕಂಪೆನಿಯಾದ ಮಾರ್ಸ್ ಇಂಕ್‌ ಸಹ ಮಾಲಿಕತ್ವ ಹೊಂದಿದ್ದಾರೆ. ಇವರ ಅಜ್ಜ 1911ರಲ್ಲಿ ಇದನ್ನು ಪ್ರಾರಂಭಿಸಿದರು.

ಜಗತ್ತಿನ ಟಾಪ್ 10 ದುಬಾರಿ ವಾಚ್‌ಗಳು: ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳೋದು ಗ್ಯಾರಂಟಿ!

510

ರಫೇಲಾ ಅಪೋಂಟೆ
80 ವರ್ಷದ ಅಪೋಂಟೆ-ಡಯಮಂತ್ ಸತತ ಮೂರನೇ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಸ್ವತಂತ್ರ ಮಹಿಳೆ ಎನಿಸಿಕೊಂಡಿದ್ದಾರೆ. 37.7 ಬಿಲಿಯನ್‌ ಆಸ್ತಿ ಹೊಂದಿದ್ದು,  ಶಿಪ್ಪಿಂಗ್‌  ಉದ್ಯಮ ಇವರ ಮೂಲ ಆದಾಯ. ಸ್ವಿಜ್ಜರ್‌ಲೆಂಡ್‌ ನ ಈ ಮಹಿಳೆ 1970 ರಲ್ಲಿ ತನ್ನ ಪತಿಯೊಂದಿಗೆ ಸೇರಿ ವಿಶ್ವದ ಅತಿದೊಡ್ಡ ಹಡಗು ಮಾರ್ಗವಾದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (MSC) ಯ ಸಹ ಸ್ಥಾಪಿಸಿದರು. ಇಂದು, ವ್ಯವಹಾರವು 900 ಹಡಗುಗಳ ಸಮೂಹವನ್ನು ಹೊಂದಿದೆ. ಗಂಡ ಜಿಯಾನ್ಲುಯಿಗಿ ಕಂಪನಿಯ ಸರಿ ಅರ್ಧ ಪಾಲು ಹೊಂದಿದ್ದಾರೆ.

610

ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ
ಭಾರತದ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ ಉಕ್ಕು ಉದ್ಯಮದಲ್ಲಿ ಫೇಮಸ್‌. ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 6 ನೇ ಸ್ಥಾನ ಪಡೆದಿದ್ದು, 75ರ ಹರೆಯದ ಸಾವಿತ್ರಿ ಜಿಂದಾಲ್ ಭಾರತದ ನಂಬರ್ 1 ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. 35.5 ಬಿಲಿಯನ್‌ ಆಸ್ತಿ ಹೊಂದಿದ್ದು ಉಕ್ಕು, ವಿದ್ಯುತ್, ಸಿಮೆಂಟ್ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳನ್ನು ವ್ಯಾಪಿಸಿರುವ ಭಾರತೀಯ ಸಂಘಟಿತ ಸಂಸ್ಥೆಯಾದ ಜಿಂದಾಲ್ ಗ್ರೂಪ್ ಮಾಲೀಕರು, ಹೆಲಿಕಾಫ್ಟರ್ ಅಪಘಾತದಲ್ಲಿ ಪತಿ ಓಂ ಪ್ರಕಾಶ್ ಜಿಂದಾಲ್ ಮೃತರಾದ ನಂತರ ಜಿಂದಾಲ್ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ  ಒಂಬತ್ತು ಮಕ್ಕಳಲ್ಲಿ ನಾಲ್ವರು ಕಂಪನಿಯನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ.

710

ಅಮೆರಿಕದ 63 ವರ್ಷದ ಅಬಿಗೈಲ್ ಜಾನ್ಸನ್ 32.7 ಬಿಲಿಯನ್‌ ಆಸ್ತಿ ಹೊಂದಿದ್ದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್‌ ಮಾಲಕಿಯಾಗಿದ್ದು, 1946 ರಲ್ಲಿ ಅವರ ಅಜ್ಜ ಸ್ಥಾಪಿಸಿದ ಬೋಸ್ಟನ್ ಮೂಲದ ಮ್ಯೂಚುವಲ್ ಫಂಡ್ ಕಂಪನಿಯಲ್ಲಿ 28.5% ಪಾಲನ್ನು ಹೊಂದಿದ್ದಾರೆ.ತಂದೆ ಎಡ್ವರ್ಡ್ "ನೆಡ್" ಜಾನ್ಸನ್ III ಮರಣದ ನಂತರ ಕಂಪೆನಿಯ ಸಿಇಒ ಆಗಿ 2014 ರಲ್ಲಿ ಅಧಿಕಾರ ವಹಿಸಿಕೊಂಡರು.

810

ಮಿರಿಯಮ್ ಅಡೆಲ್ಸನ್ ಮತ್ತು ಕುಟುಂಬ
ಇಸ್ರೇಲಿ ಮೂಲದ ಬಿಲಿಯನೇರ್ ಕುಟುಂಬ ಅಮೆರಿಕದ ಪೌರತ್ವ ಪಡೆದು ಅಲ್ಲೇ ನೆಲೆಸಿದೆ. 32.1 ಬಿಲಿಯನ್‌ ಆಸ್ತಿ ಹೊಂದಿದ್ದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ. ಆದಾಯದ ಮೂಲ ಕ್ಯಾಸಿನೋ ಆಗಿದ್ದು, ಮೂಲತ ವೈದ್ಯೆಯಾಗಿರುವ ಇವರು ದಿವಂಗತ ಪತಿ ಶೆಲ್ಡನ್ ಅಡೆಲ್ಸನ್ 1989 ರಲ್ಲಿ ಕಂಪನಿಯನ್ನು ಸ್ಥಾಪಿಸಿದ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.
 

910

ಮರ್ಲಿನ್ ಸೈಮನ್ಸ್ ಮತ್ತು ಕುಟುಂಬ
ಅಮೆರಿಕದ ಹೆಸರಾಂತ ಹೂಡಿಕೆದಾರ ಜಿಮ್ ಸೈಮನ್ಸ್  ಅವರ ಪತ್ನಿಯಾಗಿದ್ದು, ಸೈಮನ್ಸ್ ಫೌಂಡೇಶನ್ ಅನ್ನು ನೋಡಿಕೊಳ್ಳುತ್ತಾರೆ. ದಂಪತಿಗಳು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯನ್ನು ಬೆಂಬಲಿಸಲು ಜಂಟಿಯಾಗಿ ಸ್ಥಾಪಿಸಿದ ಸಂಸ್ಥೆ. ಹೆಡ್ಜ್ ಫಂಡ್‌ಗಳು ಇವರ ಆದಾಯದ ಮೂಲವಾಗಿದೆ.  31 ಬಿಲಿಯನ್‌ ಆಸ್ತಿ ಹೊಂದಿದ್ದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ಮತ್ತು ಈಸ್ಟ್ ಹಾರ್ಲೆಮ್ ಸ್ಕಾಲರ್ ಅಕಾಡೆಮಿಗಳ ಮಂಡಳಿ, ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಮಹಿಳಾ ನಾಯಕತ್ವ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
 

1010

ಮೆಲಿಂಡಾ ಫ್ರೆಂಚ್ ಗೇಟ್ಸ್
ವಿಶ್ವದ ಶ್ರೀಮಂತರದಲ್ಲಿ ಒಬ್ಬರಾದ ಬಿಲ್ ಗೇಟ್ಸ್ ವಿಚ್ಚೇದಿತ ಪತ್ನಿಯಾಗಿರುವ 60 ವರ್ಷದ ಮೆಲಿಂಡಾ   30.4 ಬಿಲಿಯನ್‌ ಆಸ್ತಿಗೆ ಮಾಲಕಿಯಾಗಿದ್ದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಇವರ ಆದಾಯದ ಮೂಲ ಮೈಕ್ರೋಸಾಫ್ಟ್ ಮತ್ತು ಹೂಡಿಕೆಗಳು.   ಜೂನ್ 2024 ರಲ್ಲಿ  ಗೇಟ್ಸ್ ಫೌಂಡೇಶನ್‌ಗೆ ರಾಜೀನಾಮೆ ನೀಡಿ, ಮಹಿಳಾ ನೇತೃತ್ವದ ನಿಧಿಗಳು ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಅವರು ಸ್ಥಾಪಿಸಿದ ಪಿವೋಟಲ್ ವೆಂಚರ್ಸ್ ಎಂಬ ಸಂಸ್ಥೆ ಬಗ್ಗೆ ಹೆಚ್ಚು ಗಮನ ನೀಡಿದರು. ಇದು ವಿಶ್ವದ ಸಾಮಾಜಿಕ ಬದಲಾವಣೆ ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಿರುವ ಒಂದು ಎನ್‌ಜಿಒ ಸಂಸ್ಥೆ.
 

Read more Photos on
click me!

Recommended Stories