ವಿಶ್ವದ ಶ್ರೀಮಂತರ ಪಟ್ಟಿಯ ಟಾಪ್ 10ರಿಂದ ಮುಕೇಶ್ ಅಂಬಾನಿ ಔಟ್; ಎಷ್ಟನೇ ಸ್ಥಾನ?
ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯ ಟಾಪ್ 10ರಿಂದ ಹೊರಗೆ ಬಿದ್ದಿದ್ದಾರೆ. ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಎಲಾನ್ ಮಸ್ಕ್ 29 ಲಕ್ಷ ಕೋಟಿ ರು.ನೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಫೇಸ್‌ಬುಕ್ ಮಾರ್ಕ್ ಜುಗರಬರ್ಗ್ 19 ಲಕ್ಷ ಕೋಟಿ ರು.ನೊಂದಿಗೆ 2ನೇ ಸ್ಥಾನ, ಜೆಬ್ ಬೆಜೋಸ್ 18 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.
ಇನ್ನು ಭಾರತದ ಮುಕೇಶ್ ಅಂಬಾನಿ ಟಾಪ್ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅಂಬಾನಿ 7.85 ಲಕ್ಷ ಕೋಟಿ ರು. ಆಸ್ತಿಯೊಂದಿಗೆ 18ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ 4.8 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಗೌತಮ್ ಅದಾನಿ 28ನೇ ಸ್ಥಾನ, 4.7 ಲಕ್ಷ ಕೋಟಿ ರು. ಆಸ್ತಿ ಹೊಂದಿರುವ ಸಾವಿತ್ರಿ ಜಿಂದಾಲ್ 56ನೇ ಸ್ಥಾನ ಪಡೆದಿದ್ದಾರೆ.
ವರದಿ ಅನ್ವಯ ವಿಶ್ವದಲ್ಲಿ 3028 ಶತಕೋಟ್ಯಧಿಪತಿಗಳಿದ್ದಾರೆ. ಇವರ ಒಟ್ಟು ಸಂಪತ್ತು 1,368 ಲಕ್ಷ ಕೋಟಿ ರು. ಆಗಿದೆ. ಪಟ್ಟಿಯಲ್ಲಿ ಅಮೆರಿಕ (902 ಶ್ರೀಮಂತರು) ಅಗ್ರಸ್ಥಾನದಲ್ಲಿದೆ, ಚೀನಾ (516) ಮತ್ತು ಭಾರತ (205) 2 ಮತ್ತು 3ನೇ ಸ್ಥಾನದಲ್ಲಿವೆ.