ಕಳೆದ ವರ್ಷ ಈ ಷೇರುಗಳಲ್ಲಿ ಹಣ ಹಾಕಿದವರು ದಿವಾಳಿ ಆಗಿರೋದು ಫಿಕ್ಸ್‌!

Published : Jan 06, 2026, 05:14 PM IST

ಕಳೆದ ವರ್ಷ ಷೇರು ಮಾರುಕಟ್ಟೆಯು ಮಿಶ್ರಫಲ ನೀಡಿದ್ದು, ಕೆಲವು ಷೇರುಗಳು ಹೂಡಿಕೆದಾರರನ್ನು ಸಂಪೂರ್ಣವಾಗಿ ದಿವಾಳಿ ಮಾಡಿವೆ. ತೇಜಸ್ ನೆಟ್‌ವರ್ಕ್ಸ್, ಓಲಾ ಎಲೆಕ್ಟ್ರಿಕ್ಸೇ ರಿದಂತೆ ಶೇ. 50ಕ್ಕೂ ಹೆಚ್ಚು ಮೌಲ್ಯ ಕಳೆದುಕೊಂಡ ಟಾಪ್ 10 ಕಳಪೆ ಷೇರುಗಳ ಬಗ್ಗೆ ವಿವರಿಸಲಾಗಿದೆ.

PREV
112
ದಿವಾಳಿ ಮಾಡಿದ ಷೇರುಗಳು

ಜಗತ್ತು ಹೊಸ ವರ್ಷಕ್ಕೆ ಕಾಲಿಟ್ಟಿದೆ. ಷೇರು ಮಾರುಕಟ್ಟೆ ಕೂಡ ಹೊಸ ವರ್ಷದಲ್ಲಿ ಲಾಭದ ನಿರೀಕ್ಷೆಯಲ್ಲಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್‌ನಲ್ಲಿ ಕಳೆದ ವರ್ಷ ಸಿಂಗಲ್‌ ಡಿಜಿಟಲ್‌ ಲಾಭ ಕೊಟ್ಟಿದ್ದರೆ, ಇನ್ನೂ ಕೆಲವು ಷೇರುಗಳು ಹೂಡಿಕೆದಾರರನ್ನು ದಿವಾಳಿ ಮಾಡಿದೆ.

212
ಟಾಪ್‌-10 ಕಳಪೆ ಷೇರುಗಳು

ಕೆಲವೊಂದಿಷ್ಟು ಲಾಭ ನೀಡಿದ ಕಳೆದ ವರ್ಷದಲ್ಲಿ ಈ 10 ಷೇರುಗಳು ಮಾತ್ರ ಹೂಡಿಕೆದಾರರನ್ನು ಸಂಪೂರ್ಣವಾಗಿ ದಿವಾಳಿ ಮಾಡಿವೆ. ದೊಡ್ಡ ಮಟ್ಟದಲ್ಲಿ ಇದರ ಮೌಲ್ಯಗಳು ಕುಸಿದಿವೆ.

312
Tejas Networks

ತೇಜಸ್‌ ನೆಟ್‌ವರ್ಕ್ಸ್‌ ಕಂಪನಿಯ ಷೇರು ಕಳೆದ ವರ್ಷ ಬರೋಬ್ಬರಿ ಶೇ. 62.1 ರಷ್ಟು ಕುಸಿತ ಕಂಡಿದೆ. 2024ರ ಡಿಸೆಂಬರ್‌ 31ರಂದು 1185.7 ರೂಪಾಯಿಗೆ ಮಾರಾಟವಾಗಿದ್ದ ತೇಜಸ್‌ ನೆಟ್‌ವರ್ಕ್ಸ್‌ ಷೇರು, 2025ರ ಡಿ.31ಕ್ಕೆ 449.7 ರೂಪಾಯಿಗೆ ಅಂತ್ಯಕಂಡಿದೆ.

412
Praj Industries

ಪ್ರಾಜೆಕ್ಟ್‌ ಇಂಜಿನಿಯರಿಂಗ್‌ ಕಂಪನಿ ಪುಣೆ ಮೂಲದ ಪ್ರಜ್‌ ಇಂಡಸ್ಟ್ರೀಸ್ಟ್‌ ಕಳೆದ ವರ್ಷದಲ್ಲಿ ಶೇ. 60.7ರಷ್ಟು ಕುಸಿತ ಕಂಡಿದೆ. 2024ರ ಡಿ.31ಕ್ಕೆ ಪ್ರತಿ ಷೇರಿಗೆ 821.2 ರೂಪಾಯಿ ಇದ್ದರೆ, 2025ರ ಡಿಸೆಂಬರ್‌ 31ಕ್ಕೆ ಪ್ರತಿಷೇರಿನ ಬೆಲೆ 322.6 ರೂಪಾಯಿಗೆ ಇಳಿದಿದೆ.

512
Ola Electric Mobility

ಭಾರತದ ಎಲೆಕ್ಟ್ರಿಕ್‌ ಮೊಬಿಲಿಟಿಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾದ ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ 2025 ಅತ್ಯಂತ ಕೆಟ್ಟ ವರ್ಷ. 2024ರ ಡಿಸೆಂಬರ್‌ 31ಕ್ಕೆ ಪ್ರತಿ ಷೇರಿಗೆ 85.7 ರೂಪಾಯಿಯಿಂದ ಕುಸಿದು 2025ರ ಡಿ.31ರ ವೇಳೆಗೆ 36.2 ರೂಪಾಯಿಗೆ ಇಳದಿತ್ತು. ಒಂದೇ ವರ್ಷದಲ್ಲಿ ಕಂಪನಿಯ ಷೇರು ಬೆಲೆಯಲ್ಲಿ ಶೇ. 57.7ರಷ್ಟು ಕುಸಿತವಾಗಿದೆ.

612
Brainbees Solutions

ಬ್ರೈನ್‌ಬೀಸ್ ಸೊಲ್ಯೂಷನ್ಸ್ ಲಿಮಿಟೆಡ್ ಭಾರತದ ಅತ್ಯಂತ ವಿಶ್ವಾಸಾರ್ಹ ಮಲ್ಟಿ-ಚಾನೆಲ್, ಮಲ್ಟಿ-ಬ್ರಾಂಡ್ ರಿಟೇಲ್ ಪ್ಲಾಟ್‌ಫಾರ್ಮ್ ಎಂದು ಗುರಿತಿಸಲ್ಪಟ್ಟಿರುವ ಕಂಪನಿ. ಇದು ತಾಯಂದಿರು, ಶಿಶುಗಳು ಮತ್ತು ಮಕ್ಕಳ ಉತ್ಪನ್ನಗಳ ಕಂಪನಿ. ಫರ್ಸ್ಟ್‌ ಕ್ರೈನ ಮಾತೃಸಂಸ್ಥೆ ಬ್ರೈನ್‌ಬೀಸ್ ಸೊಲ್ಯೂಷನ್ಸ್ ಷೇರುಗಳು ಕಳೆದ ಒಂದೇ ವರ್ಷದಲ್ಲಿ ಶೇ. 56ರಷ್ಟು ಕುಸಿದಿದೆ. 2024ರ ಡಿ. 31ಕ್ಕೆ ಪ್ರತಿ ಷೇರಿಗೆ 652.1 ರೂಪಾಯಿಯಿಂದ 2025 ಡಿ.31ಕ್ಕೆ 286.9ರೂಪಾಯಿಗೆ ಇಳಿದಿದೆ.

712
Vedant Fashions

ವೇದಾಂತ್‌ ಫ್ಯಾಶನ್ಸ್‌ ಕಂಪನಿಯ ಕಥೆ ಕೂಡ ಇದ ರೀತಿ ಇದೆ. ಕಳೆದ ಒಂದು ವರ್ಷದಲ್ಲಿ ಶೇ.54.9ರಷ್ಟು ಇದರ ಮೌಲ್ಯ ಕುಸಿದಿದೆ. 2024ರ ಡಿ.31ಕ್ಕೆ ಪ್ರತಿ ಷೇರು 1289.7 ರೂಪಾಯಿಯಂತೆ ಬಿಕರಿಯಾಗಿದ್ದರೆ, 2025ರ ಡಿ.31ಕ್ಕೆ 582.1 ರೂಪಾಯಿಯಂತೆ ಮಾರಾಟವಾಗಿದೆ.

812
Cohance Lifesciences

ಕೋಹೆನ್ಸ್‌ ಲೈಫ್‌ಸೈನ್ಸಸ್‌ನ ಬೆಲೆ ಕೂಡ ಕಳೆದ ಒಂದು ವರ್ಷದಲ್ಲಿ ಶೇ. 53.6ರಷ್ಟು ಕುಸಿತವಾಗಿದೆ. 2024ರ ಡಿ.31ಕ್ಕೆ ಪ್ರತಿ ಷೇರಿನ ಬೆಲೆಗೆ 1138.8 ರೂಪಾಯಿ ಆಗಿತ್ತು. 2025ರ ಡಿ.31ಕ್ಕೆ ಇದರ ಪ್ರತಿ ಷೇರಿನ ಬೆಲೆ 528.6 ರೂಪಾಯಿಗೆ ಕುಸಿದಿತ್ತು.

912
Whirlpool of India

11,500 ಕೋಟಿ ಮೌಲ್ಯದ ಬ್ರ್ಯಾಂಡ್‌ ಆಗಿರುವ ವರ್ಲ್‌ಪೂಲ್‌ ಇಂಡಿಯಾದ ಷೇರುಗಳು ಕಳೆದ ವರ್ಷ ಶೇ. 51.1 ರಷ್ಟು ಕುಸಿದಿದೆ. 2024ರ ಡಿ.31ಕ್ಕೆ ವರ್ಲ್‌ಪೂಲ್‌ನ ಪ್ರತಿ ಷೇರಿನ ಬೆಲೆ 1840.2 ರೂಪಾಯಿ ಆಗಿತ್ತು. 2025ರ ಡಿ.31ಕ್ಕೆ ಇದೇ ಷೇರಿನ ಬೆಲೆ 899.1 ರೂಪಾಯಿಗೆ ಕುಸಿದಿದೆ.

1012
Newgen Software Tech

ನ್ಯೂಜೆನ್‌ ಸ್ಟಾಫ್ಟ್‌ವೇರ್‌ ಟೆಕ್‌. ಹೊಸ ತಲೆಮಾರಿನ ಟೆಕ್‌ ಕಂಪನಿಯ ಷೇರು ಕಳೆದ ಒಂದು ವರ್ಷದಲ್ಲಿ ಶೇ. 50.3 ರಷ್ಟು ಕುಸಿದೆ. 2024ರ ಡಿ.31ಕ್ಕೆ ಇದರ ಪ್ರತಿ ಷೇರಿನ ಬೆಲೆ 1701.8 ರೂಪಾಯಿ ಆಗಿದ್ದರೆ, 2025 ಡಿ.31ಕ್ಕೆ 845.1 ರೂಪಾಯಿಗೆ ಇಳಿದಿತ್ತು.

1112
Transformers & Rectifiers

ಭಾರತದ ಉನ್ನತ ಟ್ರಾನ್ಸ್‌ಫಾರ್ಮರ್ ರಿಕ್ಟಿಫೈಯರ್ ತಯಾರಕ ಎಂದು ಗುರುತಿಸಲ್ಪಟ್ಟ ಕಂಪನಿ Transformers & Rectifiers ಅಥವಾ TARIL. ಕಳೆದ ವರ್ಷ ಹೂಡಿಕೆದಾರರ ಹಣವನ್ನು ಶೇ. 49.9ರಷ್ಟು ಕುಸಿಯುವಂತೆ ಮಾಡಿದೆ. 2024ರ ಡಿ.31ಕ್ಕೆ ಇದರ ಪ್ರತಿ ಷೇರಿನ ಬೆಲೆ 569.9 ರೂಪಾಯಿ ಆಗಿದ್ದರೆ, 2025ರ ಡಿ.31ಕ್ಕೆ ಇದೆ ಪ್ರತಿ ಷೇರಿನ ಬೆಲೆ 285.3 ರೂಪಾಯಿಗೆ ಇಳಿದಿದೆ.

1212
Reliance Infrastructure

ಅನಿಲ್‌ ಅಂಬಾನಿಯ ರಿಲಯನ್ಸ್‌ ಗ್ರೂಪ್‌ನ ಕಂಪನಿ ಆಗಿರುವ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರಿನ ಬೆಲೆ ಕಳೆದ ವರ್ಷ ಶೇ. 45.9ರಷ್ಟು ಕುಸಿದಿದೆ. 2024ರ ಡಿ.31ಕ್ಕೆ ಪ್ರತಿ ಷೇರಿನ ಬೆಲೆ 304.2 ರೂಪಾಯಿ ಆಗಿದ್ದರೆ, 2025ರ ಡಿ. 31ಕ್ಕೆ 164.5 ರೂಪಾಯಗೆ ಕುಸಿದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories