15ನೇ ವಯಸ್ಸಿನಲ್ಲಿ ಮೆಹಂದಿ ಮಾರಾಟಗಾರ ಈಗ ವ್ಯಾಟ್ಸಾಪ್ ಜಾಗತಿಕ ಸಿಇಒ, ಕುನಾಲ್ ಶಾ ಜೀವನವೇ ಸ್ಪೂರ್ತಿ

Published : Jun 23, 2026, 03:39 PM IST

ಮೆಟಾ ಮಾಲೀಕತ್ವದ ಗ್ಲೋಬಲ್ ಮುಖ್ಯಸ್ಥನಾಗಿ ಭಾರತದ ಕುನಾಲ್ ಶಾ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ 15ನೇ ವಯಸ್ಸಿಗೆ ಆರ್ಥಿಕ ಸಂಕಷ್ಟದಿಂದ ಕುನಾಲ್ ಶಾ ಮೆಹಂದಿ ಮಾರಾಟ, ಡೆಲಿವರಿ ಬಾಯ್, ಪೈರೆಟೆಡ್ ಸಿಡಿ ಮಾರಾಟಗಾರ ಸೇರಿದಂತೆ ಹಲವು ಕೆಲಸ ಮಾಡಿ ಬೆಳೆದು ಬಂದಿದ್ದಾರೆ.

PREV
16
ವ್ಯಾಟ್ಸಾಪ್ ಜಾಗತಿಕ ಸಿಇಒ ಕುನಾಲ್ ಶಾ

ಗೂಗಲ್,ಮೈಕ್ರೋಸಾಫ್ಟ್ ಸೇರಿದಂತೆ ಹಲವು ದಿಗ್ಗಜ ಕಂಪನಿಗಳನ್ನು ಮುಖ್ಯಸ್ಥರಾಗಿ ಭಾರತೀಯರು ಮುನ್ನಡೆಸುತ್ತಿದ್ದಾರೆ. ಈ ಸಾಲಿಗೆ ಇದೀಗ ಕುನಾಲ್ ಶಾ ಸೇರಿಕೊಂಡಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ಸಿಇಒ ಆಗಿ ಭಾರತದ ಕುನಾಲ್ ಶಾ ನೇಮಕಗೊಂಡಿದ್ದಾರೆ. ಕ್ರೆಡ್ ಫಿನ್ ಟೆಕ್ ಸಂಸ್ಥಾಪಕ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಗ್ಲೋಬಲ್ ಮುಖ್ಯಸ್ಥನಾಗಿದ್ದಾರೆ. ಆದರೆ ಕುನಾಲ್ ಶಾ ಇತರ ಉದ್ಯಮಿಗಳಂತೆ ಐಐಟಿ, ಎಂಬಿಎ ಪೂರೈಸಿ ಕಂಪನಿ ಕಟ್ಟಿದ ಸಾಧಕನಲ್ಲ. ಕುನಾಲ್ ಶಾ ಎಲ್ಲಾ ಕಷ್ಟಗಳನ್ನು ಅನುಭವಿಸಿ ಬೆಳೆದ ಸಾಧಕ.

26
15ನೇ ವಯಸ್ಸಿಗೆ ಕೆಲಸಕ್ಕಿಳಿದ ಕುನಾಲ್ ಶಾ

ಕುನಾಲ್ ಶಾ ತಂದೆ ಉದ್ಯಮ ನಡೆಸುತ್ತಿದ್ದರು. ದಿಢೀರ್ ಕೆಲ ಸಂಕಷ್ಟಗಳು ಎದುರಾಗಿ ಉದ್ಯಮ ಸಂಪೂರ್ಣ ನೆಲಕಚ್ಚಿತು. ಮನೆಯ ಪರಿಸ್ಥಿತಿ ಬದಲಾಗಿತ್ತು. 14ನೇ ವಯಸ್ಸಿಗೆ ತಂದೆಯ ಉದ್ಯಮ ನಷ್ಟಕ್ಕೆ ಬಿತ್ತು. ಒಂದು ವರ್ಷ ಪೋಷಕರು ಹೇಗೋ ತಳ್ಳಿದ್ದಾರೆ. ಮತ್ತೆ ಸಾಲ ಹೆಚ್ಚಾಯಿತು. ಆದಾಯ ಸಂಪೂರ್ಣ ಇಲ್ಲದಾಯಿತು. ಹೀಗಾಗಿ 15ನೇ ವಯಸ್ಸಿಗೆ ಹಣ ಸಂಪಾದನೆ ಕುನಾಲ್ ಶಾಗೆ ಅನಿವಾರ್ಯವಾಗಿತ್ತು. ಆರಂಭದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಕುನಾಲ್ ಶಾ ತಮ್ಮ ಬಿಡುವಿನ ಸಮಯದಲ್ಲಿ ಹಲವು ಕೆಲಸ ಮಾಡಿದ್ದಾರೆ.

36
ಮೆಹಂದಿ ಮಾರಾಟ, ಸಿಡಿ ಮಾರಾಟ ಸೇರಿ ಹಲವು

ಕುನಾಲ್ ಶಾ ತಮ್ಮ ವಿದ್ಯಾಭ್ಯಾಸ ಖರ್ಚು ನೋಡಿಕೊಳ್ಳಲು ದುಡಿಯಬೇಕಿತ್ತು. ಹೀಗಾಗಿ ಬಿಡುವಿನ ಸಮಯದಲ್ಲಿ ಡೆಲಿವರಿ ಬಾಯ್, ರಜೆ ಸಮಯದಲ್ಲಿ ಮಹೆಂದಿ ಕೋನ್ ಮಾರಾಟ, ಪೈರೆಟೆಡ್ ಸಿಡಿ ಮಾರಾಟ, ಡೇಟಾ ಆಪರೇಟರ್, ಕಂಪ್ಯೂಟರ್ ಸೈಬರ್ ಸೆಂಟರ್, ಕಂಪ್ಯೂಟರ್ ಟ್ಯೂಟರ್ ಸೇರಿದಂತೆ ಹಲವು ಕೆಲಸ ಮಾಡಿದ್ದಾರೆ. ಈ ಮೂಲಕ ತಮ್ಮ ಶಾಲಾ ಕಾಲೇಜು ವಿದ್ಯಾಭ್ಯಾಸದ ಖರ್ಚು ನಿರ್ವಹಿಸಿದ್ದಾರೆ.

46
ಫಿಸಾಲಫಿ ಪದವಿ ಓದಿದ ರೋಚಕ ಕತೆ

ಕುನಾಲ್ ಶಾ ಯಾವುದೇ ಕೋರ್ಸ್ ಓದಲು ತಾವೇ ದುಡಿಯಬೇಕಿತ್ತು. ವಿಶೇಷ ಆಂದರೆ ಸದ್ಯ ಯಶಸ್ವಿ ಉದ್ಯಮಿ, ಜಾಗತಿಕ ಸಿಇಒ ಪಟ್ಟ ಗಿಟ್ಟಿಸಿಕೊಂಡ ಕುನಾಲ್ ಶಾ ಐಐಟಿ, ಐಐಎಂ ಪದವಿ ಪಡೆದಿಲ್ಲ. ಮುಂಬೈ ವಿಲ್ಸನ್ ಕಾಲೇಜಿನಲ್ಲಿ ಫಿಲಾಸಪಿ ಪದವಿ ಪಡೆದಿದ್ದಾರೆ. ಫಿಲಾಸಫಿ ಪದವಿ ಕೋರ್ಸ್ ಇಷ್ಟಪಟ್ಟು ಅಥವಾ ಉದ್ಯೋಗ ಸಿಗುತ್ತೆ ಅನ್ನೋ ದೃಷ್ಟಿಯಿಂದ ತೆಗೆದುಕೊಂಡಿದ್ದಲ್ಲ. ಫಿಲಾಸಫಿ ಕ್ಲಾಸ್ ಬೆಳಗ್ಗೆ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ. ಇನ್ನುಳಿದ ಸಮಯ ಫ್ರೀ. ಹೀಗಾಗಿ ಈ ಕೋರ್ಸ್ ಆಯ್ಕೆ ಮಾಡಿಕೊಂಡು ಉಳಿದ ಸಮಯದಲ್ಲಿ ಹತ್ತು ಹಲವು ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದರು.

56
ಎಂಬಿಎ ಡ್ರಾಪ್ಔಟ್

ಕುನಾಲ್ ಶಾ ಒಳಗೆ ಉದ್ಯಮಿಯಾಗಬೇಕು,ಸಂಸ್ಥೆ ಕಟ್ಟಿ ಬೆಳೆಸಬೇಕು ಅನ್ನೋ ತುಡಿತವಿತ್ತು. ಹೀಗಾಗಿ ಎಂಬಿಎ ವ್ಯಾಸಾಂಗಕ್ಕೆ ತೆರಳಿದ್ದರು. ಮುಂಬೈನ ನರ್ಸಿ ಮೊಂಜೆ ಸಂಸ್ಥೆಯಲ್ಲಿ ಎಂಬಿಎ ಆಡ್ಮಿಷನ್ ಮಾಡಿದ ಕುನಾಲ್ ಶಾ ಪದವಿ ಪೂರ್ಣಗೊಳಿಸಲಿಲ್ಲ. ಅರ್ಧಕ್ಕೆ ಬಿಟ್ಟು ತನ್ನ ಸ್ವಂತ ಅನುಭವವೇ ಸಾಕು ಎಂದು ಉದ್ಯಮ ಜಗತ್ತಿಗೆ ಕಾಲಿಟ್ಟ ಸಾಧಕ ಈ ಕುನಾಲ್ ಶಾ.

66
ಡಿಗ್ರಿ ಮೇಲೆ ನಂಬಿಕೆ ಇಲ್ಲ, ಸ್ಕಿಲ್ ಇರಬೇಕು

ಕುನಾಲ್ ಶಾ ಹುಟ್ಟುಹಾಕಿದ ಅತ್ಯಂತ ಯಶಸ್ವಿ ಸಂಸ್ಥೆ ಕ್ರೆಡ್ ಸಾವಿರಾರು ಕೋಟಿ ರೂಪಾಯಿ ಆದಾಯಗಳಿಸುತ್ತಿದೆ. ಈ ಸಂಸ್ಥೆಯ ಹಿರಿಯ ಉದ್ಯೋಗಿ ಕೇವಲ 10ನೇ ಕ್ಲಾಸ್ ಪಾಸ್. ಸಂದರ್ಶನದಲ್ಲಿ ಈ ಕುರಿತು ಹೇಳಿದ್ದ ಕುನಾಲ್ ಶಾ, ನಾನು ಪದವಿ ಮೇಲೆ ನಂಬಿಕೆ ಇಡಲ್ಲ. ಹಾಗಂತ ಪದವಿ ಮಾಡಬೇಡಿ, ಎಂಬಿಎ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ಸ್ಕಿಲ್ ಬೇಕು. ನಾನು ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಆತನಿಗೆ ಕೆಲಸ ಗೊತ್ತಿದೆಯಾ, ಸ್ಕಿಲ್ ಅದೆಯಾ, ಕಲಿಯುವ ತುಡಿತ ಇದೆಯಾ, ಸವಾಲುಗಳನ್ನು ಎದುರಿಸುವ ಶಕ್ತಿ ಇದೆಯಾ, ಡಿಗ್ರಿ ಸರ್ಟಿಫಿಕೇಟ್‌ನಲ್ಲಿ ಆತ ಸಮರ್ಥನಿರಬಹುದು,ಆದರೆ ನನ್ನ ಕಂಪನಿಯ ಕೆಲಸಕ್ಕೆ ಆತನ ಸಮರ್ಥನೇ ಅನ್ನೋದಷ್ಟೇ ಮುಖ್ಯ ಎಂದು ಕುನಾಲ್ ಶಾ ಹೇಳಿದ್ದರು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories