Aadhaar Card : ಆಧಾರ್ ಕಾರ್ಡ್ ಗೆ ಇಮೇಲ್ ಲಿಂಕ್ ಮಾಡುವವರಿಗೆ ಹಾಗೂ ಇಮೇಲ್ ಬದಲಿಸುವ ಪ್ಲಾನ್ ನಲ್ಲಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ಯುಐಡಿಎಐ, ಈ ಸೇವೆ ಶುಲ್ಕವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ.
ಆಧಾರ್ ಕಾರ್ಡ್ ಗೆ ಇಮೇಲ್ ಐಡಿ ಲಿಂಕ್ ಮಾಡ್ಬೇಕು ಇಲ್ಲ ಹಳೆ ಇಮೇಲ್ ಐಡಿ ಬದಲಿಸಬೇಕು ಎನ್ನುವವರು ಶೀಘ್ರವೇ ಈ ಕೆಲ್ಸ ಮಾಡಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ಸೇವಯನ್ನು ಸದ್ಯ ಉಚಿತ ಮಾಡ್ತಿದೆ. ಅಂದ್ರೆ ಜುಲೈ ಒಂದರಿಂದ ಈ ಸೇವೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಆದ್ರೆ ಇದು ತಾತ್ಕಾಲಿಕವಾಗಿರಲಿದೆ. ಗ್ರಾಹಕರು ಆರು ತಿಂಗಳುಗಳ ಕಾಲ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು.
24
ಕಡಿಮೆಯಾಗಲಿದೆ ವ್ಯಾಲೆಟ್ ಹೊಣೆ
ಯುಐಡಿಎಐ ಈ ನಿರ್ಧಾರದಿಂದ ಸಾರ್ವಜನಿಕರ ಹಣ ಉಳಿಯಲಿದೆ. ಈ ಹಿಂದೆ ಇಮೇಲ್ ಬದಲಿಸಲು ಅಥವಾ ಇಮೇಲ್ ಸೇರಿಸಲು 75 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿತ್ತು. ಯುಐಡಿಎಐ (UIDAI) ಯ ಹೊಸ ನಿರ್ಧಾರದ ಪ್ರಕಾರ, ಈ ಸಂಪೂರ್ಣ ಪ್ರಕ್ರಿಯೆಯನ್ನು ಜುಲೈ 1, 2026 ರಿಂದ ಡಿಸೆಂಬರ್ 2026 ರವರೆಗೆ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.
34
ಮನೆಯಲ್ಲೇ ಮಾಡಿ ಈ ಕೆಲ್ಸ
ಇನ್ನು ಆಧಾರ್ ಜೊತೆ ಇಮೇಲ್ ಲಿಂಕ್ ಮಾಡಲು ನೀವು ಆಧಾರ್ ಕೇಂದ್ರಕ್ಕೆ ಹೋಗಿ ಸರತಿ ಸಾಲಿನಲ್ಲಿ ನಿಲ್ಬೇಕಾಗಿಲ್ಲ. ಯುಐಡಿಎಐ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಸಂಪೂರ್ಣ ಸೇವೆಯನ್ನು ಒದಗಿಸುತ್ತಿದೆ. ಫೋನ್ನಲ್ಲಿ ಅಪ್ಲಿಕೇಶನ್ ಓಪನ್ ಮಾಡಿ, ಸರಳ ವಿಧಾನದ ಮೂಲಕ ಇಮೇಲ್ ಲಿಂಕ್ ಮಾಡ್ಬಹುದು. ಇದು ಹಣದ ಜೊತೆ ಸಮಯ ಕೂಡ ಉಳಿಸುತ್ತೆ.
ಯುಐಡಿಎಐ ಮತ್ತು ಸರ್ಕಾರ ಈ ಸೇವೆಯನ್ನು ಉಚಿತವಾಗಿ ನೀಡಲು ಪ್ರಮುಖ ಕಾರಣ ಅಂದ್ರೆ ಡಿಜಿಟಲ್ ಗುರಿ ಸಾಧನೆ. ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲಾ ಸರ್ಕಾರಿ ಮತ್ತು ಹಣಕಾಸು ಸೇವೆಗಳು ಆನ್ಲೈನ್ನಲ್ಲಿ ಲಭ್ಯವಿದೆ. ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಇಮೇಲ್ ವಿಳಾಸವನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕೆಂದು ಯುಐಡಿಎಐ ಬಯಸುತ್ತದೆ. ಇಮೇಲ್ ಐಡಿಯನ್ನು ಲಿಂಕ್ ಮಾಡುವುದರಿಂದ ಒಟಿಪಿ ಆಧಾರಿತ ದೃಢೀಕರಣ ಮತ್ತು ಆನ್ಲೈನ್ ಕೆವೈಸಿ ಪ್ರಕ್ರಿಯೆಗಳು ಅತ್ಯಂತ ಸುರಕ್ಷಿತ, ವೇಗ ಮತ್ತು ಸುಲಭವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.