Money Earning Ideas: AI ಬಳಸಿ ಸುಲಭವಾಗಿ ಸಂಪಾದನೆ ಮಾಡಲು ಟಾಪ್ 5 ಮಾರ್ಗಗಳು

Published : Jan 26, 2026, 05:02 PM IST

Easy Ways to Make Money: ದುಡ್ಡೇ ದೊಡ್ಡಪ್ಪ ಎನ್ನೋದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಈ ಕಾಲದಲ್ಲಿ ಹಾರ್ಡ್ ವರ್ಕ್ ಅಲ್ಲ, ಸ್ಮಾರ್ಟ್ ವರ್ಕ್ ಮಾಡಿದ್ರೆನೇ ಹೆಚ್ಚು ಹಣ ಗಳಿಸಬಹುದು. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು AI ಅನ್ನು ಮಾಹಿತಿ ಸಂಗ್ರಹಕ್ಕೆ ಮಾತ್ರವಲ್ಲದೆ ಹಣ ಗಳಿಸಲೂ ಬಳಸಬಹುದು.  

PREV
16
ಎಐ ಸಹಾಯದಿಂದ ಸಂಪಾದಿಸಿ...

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ ಮೇಲೆ ಹೊಸ ಆದಾಯದ ದಾರಿಗಳು ತೆರೆದುಕೊಂಡಿವೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಮಾತ್ರವಲ್ಲ, ಸಾಮಾನ್ಯ ಜನರೂ ಹೂಡಿಕೆ ಇಲ್ಲದೆ AI ನಿಂದ ಹಣ ಗಳಿಸಬಹುದು. ಅಂತಹ 5 ಸುಲಭ ಮತ್ತು ನಂಬಿಕಾರ್ಹ ಮಾರ್ಗಗಳ ಬಗ್ಗೆ ಇಲ್ಲಿ ತಿಳಿಯಿರಿ.

26
ಕಂಟೆಂಟ್ ರಚಿಸಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಟ್‌ಬಾಟ್‌ಗಳನ್ನು ಬಳಸಿ ಕಂಟೆಂಟ್ ರಚಿಸಬಹುದು. ನಮಗೆ ಬೇಕಾದ ಮಾಹಿತಿಯನ್ನು ಸೂಚಿಸಿ, ವೆಬ್‌ಸೈಟ್ ಅಥವಾ ವೀಡಿಯೊಗೆ ತಕ್ಕಂತೆ ಕಂಟೆಂಟ್ ರಚಿಸಲು ಹೇಳಿದರೆ AI ಚಾಟ್‌ಬಾಟ್‌ಗಳು ಕೊಡುತ್ತವೆ. ಅದಕ್ಕೆ ನಮ್ಮ ಮಾತು, ಹ್ಯೂಮನ್ ಟಚ್ ಸೇರಿಸಿದರೆ ಅದ್ಭುತ ಕಂಟೆಂಟ್ ರೆಡಿಯಾಗುತ್ತೆ. ಆದರೆ AI ಮಾಹಿತಿಯನ್ನು ಕಾಪಿ-ಪೇಸ್ಟ್ ಮಾಡಿದರೆ ಕಂಟೆಂಟ್ ಗುಣಮಟ್ಟ ಇರಲ್ಲ, ಅನುಭವ ಸೇರಿಸಲೇಬೇಕು. ಇದು ಮೀಡಿಯಾ, ಸಿನಿಮಾ ರಂಗದವರಿಗೆ ಉಪಯುಕ್ತ.

36
ಕ್ಯಾಮೆರಾ ಮುಂದೆ ಬರದೆ, ವೀಡಿಯೊ ಮಾಡಿ

ತುಂಬಾ ಜನ ಅದ್ಭುತವಾಗಿ ಮಾತಾಡಬಲ್ಲರು, ಮಾಹಿತಿಯನ್ನು ಚೆನ್ನಾಗಿ ವಿವರಿಸಬಲ್ಲರು. ಆದರೆ ಕ್ಯಾಮೆರಾ ಮುಂದೆ ಭಯದಿಂದ ತಡಬಡಾಯಿಸುತ್ತಾರೆ. ಅಂತಹವರು AI ಬಳಸಿ ಫೇಸ್‌ಲೆಸ್ ವೀಡಿಯೊಗಳನ್ನು ಮಾಡಬಹುದು. ಈ ವೀಡಿಯೊಗಳನ್ನು ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಫಾಲೋವರ್ಸ್ ಜೊತೆಗೆ ಹಣವನ್ನೂ ಗಳಿಸಬಹುದು.

46
ರೆಸ್ಯೂಮ್ ತಯಾರಿಕೆ

ಅಗತ್ಯವಿರುವವರಿಗೆ AI ಬಳಸಿ ರೆಸ್ಯೂಮ್ ತಯಾರಿಸಿ ಕೊಡಬಹುದು. ಇದೂ ಕೂಡ ಒಂದು ಒಳ್ಳೆಯ ಆದಾಯದ ದಾರಿ. ಕಂಪನಿಗಳ ಆಟೋಮೇಟೆಡ್ ಸಿಸ್ಟಮ್‌ಗಳಿಗೆ ತಕ್ಕಂತೆ ರೆಸ್ಯೂಮ್‌ಗಳನ್ನು ಸುಧಾರಿಸಬಹುದು. ಆದರೆ ಇದಕ್ಕಾಗಿ ಸ್ವಲ್ಪ ಅನುಭವ ಮತ್ತು ಸಂಶೋಧನೆ ಬೇಕು. ಯಾವ ಕಂಪನಿ ಯಾವ ಗುಣಗಳಿರುವ ಅಭ್ಯರ್ಥಿಗಳನ್ನು ಹುಡುಕುತ್ತಿದೆ ಎಂದು ತಿಳಿದು, ಅದಕ್ಕೆ ತಕ್ಕಂತೆ AIಗೆ ಕಮಾಂಡ್ ಕೊಟ್ಟರೆ ರೆಸ್ಯೂಮ್ ರೆಡಿಯಾಗುತ್ತೆ.

56
ವ್ಯಾಪಾರ ಜಾಹೀರಾತುಗಳು

ಸಣ್ಣಪುಟ್ಟ ವ್ಯಾಪಾರಗಳಿಗೆ ಸೋಶಿಯಲ್ ಮೀಡಿಯಾ ಕಂಟೆಂಟ್‌ನ ಅವಶ್ಯಕತೆ ಹೆಚ್ಚಿರುತ್ತೆ. ಹಾಗಾಗಿ ಇವರಿಗೆ AI ಸಹಾಯದಿಂದ ಕ್ಯಾಪ್ಶನ್‌ಗಳು, ರೀಲ್ಸ್ ಐಡಿಯಾಗಳನ್ನು ತಯಾರಿಸಬಹುದು. ಸ್ಥಳೀಯ ಭಾಷೆ, ಟ್ರೆಂಡ್‌ಗಳನ್ನು ಅರ್ಥಮಾಡಿಕೊಂಡು ಪೋಸ್ಟ್ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತೆ. ಕೆಲವರು ಈಗಾಗಲೇ ಇಂತಹ AI ಜಾಹೀರಾತು ವೀಡಿಯೊಗಳಿಂದ ವ್ಯಾಪಾರವನ್ನು ಬೆಳೆಸಿಕೊಳ್ಳುತ್ತಿದ್ದಾರೆ. 

66
ಬ್ಲಾಗ್ಸ್, ವೆಬ್‌ಸೈಟ್ಸ್ ನಡೆಸಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಬ್ಲಾಗ್ ಅಥವಾ ವೆಬ್‌ಸೈಟ್ ನಡೆಸುವ ಮೂಲಕ ದೀರ್ಘಕಾಲಿಕ ಆದಾಯ ಗಳಿಸಬಹುದು. AI ನಿಂದ ಸಂಶೋಧನೆ ಮಾಡಿ, ಸ್ವಂತ ಅನುಭವದಿಂದ ಲೇಖನಗಳನ್ನು ಬರೆಯಬೇಕು, ವೀಡಿಯೊಗಳನ್ನು ಮಾಡಬೇಕು. ಆರೋಗ್ಯ, ಶಿಕ್ಷಣದಂತಹ ವಿಷಯಗಳಿಗೆ ಬೇಡಿಕೆ ಹೆಚ್ಚು. ಇವುಗಳ ಬಗ್ಗೆ ಸ್ವಲ್ಪ ಅರಿವಿದ್ದರೂ AI ಸಹಾಯದಿಂದ ಪೂರ್ಣ ಮಾಹಿತಿ ಪಡೆಯಬಹುದು. ಇದನ್ನು ಬೇರೆ ಬೇರೆ ದಾರಿಗಳ ಮೂಲಕ ಜನರಿಗೆ ತಲುಪಿಸಿ ಆದಾಯ ಗಳಿಸಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories