ಸ್ವಂತ ಮನೆ ಖರೀದಿ ಅಥವಾ ಬಾಡಿಗೆ ಕಟ್ಟೋದು; ಯಾವುದು ಒಳ್ಳೇದು ಅಂತ ಹೇಳಿದ ಹಣಕಾಸು ತಜ್ಞರು

Published : Oct 26, 2025, 03:36 PM IST

Rent vs Buy: ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಮನೆ ಬೆಲೆ ಗಗನಕ್ಕೇರುತ್ತಿವೆ. ಆದ್ದರಿಂದ ಸರಿಯಾದ ಆಯ್ಕೆಯನ್ನು ಆರಿಸಲು ನಿಮ್ಮ ಆರ್ಥಿಕ ಪರಿಸ್ಥಿತಿ, ಭವಿಷ್ಯದ ಯೋಜನೆ ಮತ್ತು ವೃತ್ತಿ ಸ್ಥಿರತೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. 

PREV
15
ಯಾವುದು ಒಳ್ಳೇದು?

ಮನೆ ಖರೀದಿಸಿದ್ರೆ ಒಳ್ಳೆಯದೋ ಅಥವಾ ಬಾಡಿಗೆಗೆ ಇದ್ದರೆ ಒಳ್ಳೆಯದೋ..? ಇದು ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಮನಸ್ಸಿನಲ್ಲಿ ಆಗಾಗ್ಗೆ ಉದ್ಭವಿಸುವ ಪ್ರಶ್ನೆಯಾಗಿದೆ. ಹೆಚ್ಚುತ್ತಿರುವ ಸೈಟ್‌ ಬೆಲೆ, ಮನೆ ಲೀಸ್, ರೆಂಟ್, ಗೃಹ ಸಾಲದ ಇಎಂಐಗಳ ಮಧ್ಯೆ ಯಾವ ಆಯ್ಕೆಯು ಹೆಚ್ಚು ಪ್ರಯೋಜನಕಾರಿ ಎಂಬ ಬಗ್ಗೆ ಜನರು ಗೊಂದಲಕ್ಕೊಳಗಾಗುತ್ತಾರೆ. ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಮನೆ ಬೆಲೆ ಗಗನಕ್ಕೇರುತ್ತಿವೆ. ಆದ್ದರಿಂದ ಸರಿಯಾದ ಆಯ್ಕೆಯನ್ನು ಆರಿಸಲು ನಿಮ್ಮ ಆರ್ಥಿಕ ಪರಿಸ್ಥಿತಿ, ಭವಿಷ್ಯದ ಯೋಜನೆ ಮತ್ತು ವೃತ್ತಿ ಸ್ಥಿರತೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ.

25
ಹಣಕಾಸು ಸಲಹೆಗಾರರ ಪ್ರಕಾರ...

ಹೌದು. ಹಣಕಾಸು ಸಲಹೆಗಾರ ರಶ್ಮಿ ವರ್ಮಾ ಅವರ ಪ್ರಕಾರ, ಯಾರೇ ಆಗಲಿ ದೀರ್ಘಕಾಲದವರೆಗೆ ಸ್ಥಿರವಾದ ಆದಾಯವನ್ನು ಹೊಂದಿದ್ದರೆ ಮತ್ತು ಮುಂದಿನ 10–15 ವರ್ಷಗಳ ಕಾಲ ಅದೇ ನಗರದಲ್ಲಿ ಉಳಿಯಲು ಯೋಜಿಸುತ್ತಿದ್ದರೆ ನೀವು ಸ್ವಂತ ಮನೆಯನ್ನು ಖರೀದಿಸುವುದು ಪ್ರಯೋಜನಕಾರಿಯಾಗಿದೆ. ಇದು ಬಾಡಿಗೆಯನ್ನು ಉಳಿಸುತ್ತದೆ ಮತ್ತು ಮುಂದೊಂದು ದಿನ ಆಸ್ತಿಯ ಮೌಲ್ಯ ಹೆಚ್ಚಾದಾಗ ಮಾರಲು ಅವಕಾಶ ನೀಡುತ್ತದೆ. ಆದರೆ ನಿಮ್ಮ ವೃತ್ತಿ ಅಥವಾ ಕೆಲಸದ ಕಾರಣದಿಂದಾಗಿ ನೀವು ಬೇರೆ ಬೇರೆ ನಗರಗಳಿಗೆ ಸ್ಥಳಾಂತರಗೊಳ್ಳುತ್ತಲೇ ಇದ್ದರೆ ಬಾಡಿಗೆಗೆ ಪಡೆಯುವುದು ಉತ್ತಮ ಆಯ್ಕೆಯಾಗಿದೆ.

35
ಯೋಜನೆಯನ್ನು ರಚಿಸಿ

ತಜ್ಞರ ಪ್ರಕಾರ, ಮನೆ ಖರೀದಿಸುವ ಮೊದಲು ಡೌನ್ ಪೇಮೆಂಟ್, ಇಎಂಐ, ನಿರ್ವಹಣೆ ಮತ್ತು ಇತರ ಖರ್ಚುಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಮನೆ ಖರೀದಿಸುವಾಗ ಅನೇಕ ಜನರು ಆಸ್ತಿ ಬೆಲೆಯ ಮೇಲೆ ಮಾತ್ರ ಗಮನಹರಿಸುತ್ತಾರೆ. ಆದರೆ ಜೀವನದಲ್ಲಿ ನಿರ್ವಹಣೆ, ಗೃಹ ಸಾಲದ ಬಡ್ಡಿ ಮತ್ತು ಇತರ ವೆಚ್ಚಗಳು ಮಾಸಿಕ ಬಜೆಟ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ರಶ್ಮಿ ವರ್ಮಾ ಹೇಳುತ್ತಾರೆ. ಆದ್ದರಿಂದ, ಮೊದಲು ಸಂಪೂರ್ಣ ಹಣಕಾಸು ಯೋಜನೆಯನ್ನು ರಚಿಸುವುದು ಮುಖ್ಯ.

45
ಬಾಡಿಗೆ ಕೊಡುವುದರಿಂದಾಗುವ ಅನುಕೂಲ-ಅನಾನುಕೂಲ

ಒಂದು ವೇಳೆ ಬಾಡಿಗೆಗೆ ಇದ್ದರೂ ಅನುಕೂಲಗಳಿವೆ. ಬಾಡಿಗೆ ಕೊಡುವಾಗ ನಮಗೆ ಅನುಕೂಲ ಬಂದಂತೆ ಉದ್ಯೋಗಗಳು ಅಥವಾ ನಗರಗಳನ್ನು ಬದಲಾಯಿಸುವ ಸ್ವಾತಂತ್ರ್ಯ ದೊರೆಯುತ್ತದೆ. ಇದಲ್ಲದೆ, ನೀವು ಡೌನ್ ಪೇಮೆಂಟ್‌ಗಳು ಮತ್ತು ಗೃಹ ಸಾಲಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ದೀರ್ಘಾವಧಿಯಲ್ಲಿ ಬಾಡಿಗೆಗೆ ಹೂಡಿಕೆ ಮಾಡಿದರೆ ಪ್ರಾಪರ್ಟಿ ಕೊಳ್ಳುವ ಅವಕಾಶಗಳನ್ನು ಕಳೆದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

55
ಹಾಗಾದರೆ ಏನು ಮಾಡಬೇಕು?

ಆದ್ದರಿಂದ ನಾವೇನೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಮ್ಮ ವೃತ್ತಿ ಯೋಜನೆ, ಮಾಸಿಕ ಬಜೆಟ್, ಉಳಿತಾಯ ಮತ್ತು ಹೂಡಿಕೆ ಸಾಮರ್ಥ್ಯಗಳನ್ನು ಎಚ್ಚರಿಕೆಯಿಂದ ನಿರ್ಣಯಿಸಲು ಹಣಕಾಸು ತಜ್ಞರು ಶಿಫಾರಸು ಮಾಡುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಿಷ್ಠ ಮತ್ತು ಸ್ಥಿರವಾಗಿದ್ದರೆ, ಮನೆ ಖರೀದಿಸುವುದು ಉತ್ತಮ ಹೂಡಿಕೆಯಾಗಬಹುದು. ಅದೇ ನೀವು ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದರೆ ಅಥವಾ ಆಗಾಗ್ಗೆ ಬೇರೆ ನಗರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದರೆ ಬಾಡಿಗೆಗೆ ಪಡೆಯುವುದು ಮತ್ತು ಹೂಡಿಕೆ ಮಾಡುವುದು ಬುದ್ಧಿವಂತ ಕ್ರಮವಾಗಿರಬಹುದು.

Read more Photos on
click me!

Recommended Stories