Gold Prediction: ಒಂದು ವಾರದಲ್ಲಿ ಬರೋಬ್ಬರಿ 71 ಸಾವಿರ ರೂಪಾಯಿ ಇಳಿಕೆಯಾದ ಚಿನ್ನ; ಮತ್ತಷ್ಟು ಕಡಿಮೆಯಾಗುತ್ತಾ?

Published : Oct 26, 2025, 10:27 AM IST

Gold Prediction in India: ಭಾರತದಲ್ಲಿ ಸತತ ಏಳು ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಕಳೆದ ವಾರದಲ್ಲಿ ಚಿನ್ನದ ಮೇಲೆ ಸುಮಾರು 71,000 ರೂ. ಕುಸಿತವಾಗಿದ್ದು, ಹೂಡಿಕೆದಾರರು ಈಗ ಯುಎಸ್ ಫೆಡರಲ್ ರಿಸರ್ವ್ ಸಭೆಯತ್ತ ಗಮನ ಹರಿಸಿದ್ದಾರೆ. 

PREV
15
ಚಿನ್ನದ ಬೆಲೆಯಲ್ಲಿ ಗಮನಾರ್ಹ ಬದಲಾವಣೆ

ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡು ಬರುತ್ತಿವೆ. ಸತತ ಏಳು ದಿನಗಳ ಬೆಲೆ ಇಳಿಕೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಕಳೆದ ಒಂದು ವಾರದಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 71,000 ರೂ.ಗಳಷ್ಟು ಕುಸಿತ ಕಂಡು ಬಂದಿದೆ. ಹೂಡಿಕೆದಾರರು ಮುಂದಿನ ವಾರದ ವಹಿವಾಟುಗಳಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಯುಎಸ್ ಫೆಡರಲ್ ರಿಸರ್ವ್ ಸಭೆಯತ್ತ ಎಲ್ಲರನ್ನು ಸೆಳೆಯುತ್ತಿದೆ.

25
ಭಾರತದಲ್ಲಿ ಚಿನ್ನದ ದರ

ಭಾರತದಲ್ಲಿ ಅಕ್ಟೋಬರ್ 25ರಂದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,562 ರೂ. ಆಗಿತ್ತು. ಅಕ್ಟೋಬರ್ 17 ರಿಂದ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 71,000 ರೂ.ಗಳಷ್ಟು ಇಳಿಕೆಯಾಗಿ 12,56,200 ರೂ.ಗೆ ತಲುಪಿದೆ. ಒಂದು ವಾರದ ಅಂಕಿ ಅಂಶಗಳನ್ನು ಗಮನಿಸಿದ್ರೆ ರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 115 ರೂ.ಗಳಷ್ಟು ಏರಿಕೆಯಾಗಿ 11,515 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 94 ರೂ.ಗಳಷ್ಟು ಏರಿಕೆಯಾಗಿ 9,422 ರೂ.ಗೆ ತಲುಪಿದೆ.

35
ಭಾರತದಲ್ಲಿ ಬೆಳ್ಳಿ ದರ

ಕಳೆದ 5 ರಿಂದ 10 ದಿನಗಳಲ್ಲಿ ಬೆಳ್ಳಿಯೂ ಕುಸಿತಗೊಂಡಿರೋದನ್ನು ಗಮನಿಸಬಹುದು. ಅಕ್ಟೋಬರ್ 26ರಂದು 1 ಗ್ರಾಂ ಬೆಳ್ಳಿ ಬೆಲೆ 155 ರೂಪಾಯಿ ಮತ್ತು 1000 ಗ್ರಾಂ ದರ 1,55,000 ರೂ. ಇತ್ತು. ಅಕ್ಟೋಬರ್ ತಿಂಗಳ ಮೊದಲಾರ್ಧ ದೇಶೀಯ ಬೆಳ್ಳಿ ಬೆಲೆ ಅಸಾಧಾರಣವಾಗಿ ಏರಿಕೆಯಾದ ನಂತರ ಕಳೆದ 5-10 ದಿನಗಳಲ್ಲಿ ಬೆಲೆ ಕಡಿಮೆಯಾಗಿರೋದನ್ನು ಗಮನಿಸಬಹುದು.

45
ಚಿನ್ನ, ಬೆಳ್ಳಿ MCX ದರ

ಟ್ರೇಡಿಂಗ್ ಎಕನಾಮಿಕ್ಸ್ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಔನ್ಸ್‌ಗೆ $4,120 ಕ್ಕಿಂತ ಕಡಿಮೆಯಾಗಿದೆ. ಶುಕ್ರವಾರದ ಅಂತ್ಯಕ್ಕೆ 10 ಗ್ರಾಂ ಚಿನ್ನದ ಬೆಲೆ 1,23,451 ರೂ.ಗೆ ಅಂತ್ಯವಾಗಿದೆ. 1 ಕೆಜಿ ಬೆಳ್ಳಿ ಬೆಲೆ 1,47,470 ರೂ.ಗಳಿಗೆ ಮುಕ್ತಾಯಗೊಂಡಿವೆ. ಅಮೆರಿಕದಲ್ಲಿನ ಹಣದುಬ್ಬರದ ರಿಪೋರ್ಟ್ ನಂತರ ಹೂಡಿಕೆದಾರರು ಅಲರ್ಟ್ ಆಗಿದ್ದು, ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಕುಸಿಯಲಾರಂಭಿಸಿದೆ.

ಇದನ್ನೂ ಓದಿ: ಶೈನ್‌ ಕಳೆದುಕೊಂಡ ಸಿಲ್ವರ್‌, 10 ದಿನದಲ್ಲಿ 34 ಸಾವಿರ ಕುಸಿದ ಬೆಳ್ಳಿ ಬೆಲೆ!

55
ಇನ್ನಷ್ಟು ಇಳಿಕೆಯಾಗುತ್ತಾ ಚಿನ್ನದ ದರ?

ಕಳೆದೊಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಣನೀಯವಾಗಿ ಇಳಿಕೆಯಾಗಿದ್ದು, ಈ ಟ್ರೆಂಡ್‌ ಸಣ್ಣ ಪ್ರಮಾಣದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಅಕ್ಟೋಬರ್ 28 ರಂದು ನಡೆಯಲಿರುವ ಯುಎಸ್ ಫೆಡ್ ಸಭೆಯನ್ನು ಎಲ್ಲಾ ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ನೇರವಾಗಿ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ.

ಇದನ್ನೂ ಓದಿ: ಬ್ಯಾಂಕ್​ ಲಾಕರ್​, ಠೇವಣಿಗೆ ನಾಮಿನಿ ಮಾಡಿರುವಿರಾ? ನ.1ರಿಂದ ಈ ಹೊಸ ರೂಲ್ಸ್​: ಕೂಡಲೇ ತಿಳಿಯಿರಿ

Read more Photos on
click me!

Recommended Stories