ಜಿಯೋದಲ್ಲಿದೆ ಮೆಟಾ, ಗೂಗಲ್ ಪಾಲು
ಸದ್ಯಕ್ಕೆ ಜೆಪಿಎಲ್ ನ ಶೇ 66.3ರಷ್ಟು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಒಡೆತನದಲ್ಲಿದೆ. ಜೆಪಿಎಲ್ ಈ ಹಿಂದೆ ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲಾ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ, ಇಂಟೆಲ್ ಕ್ಯಾಪಿಟಲ್ ಮತ್ತು ಕ್ವಾಲ್ಕಾಮ್ ವೆಂಚರ್ಸ್ ಸೇರಿ 13 ಹೂಡಿಕೆದಾರರಿಂದ ಸುಮಾರು 1,52,056 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಒಟ್ಟು ಶೇ 32.9ರಷ್ಟು ಪಾಲನ್ನು ಈ ಕಂಪನಿಗಳು ಪಡೆದುಕೊಂಡಿದ್ದವು. ಜಿಯೋ ಪ್ಲಾಟ್‌ಫಾರ್ಮ್ ನಲ್ಲಿ ಫೇಸ್‌ಬುಕ್ (ಈಗ ಮೆಟಾ) ಶೇ 10 ರಷ್ಟು ಪಾಲನ್ನು ಹೊಂದಿದ್ದರೆ, ಗೂಗಲ್ ಶೇ 7.7 ರಷ್ಟು ಪಾಲನ್ನು ಹೊಂದಿದೆ. ಇತರೆ ಹೂಡಿಕೆದಾರರು ಉಳಿದ ಶೇ 16 ರಷ್ಟು ಪಾಲನ್ನು ಹೊಂದಿದ್ದಾರೆ.