ಯಾವುದೇ ಹೂಡಿಕೆ ಅಥವಾ ಅಂಗಡಿ ಇಲ್ಲದೆ, ನಿಮ್ಮ ವ್ಯವಹಾರವನ್ನು ಆರಂಭಿಸಬಹುದು. ಎರಡು ಅಪ್ಲಿಕೇಶನ್‌ಗಳ ಮೂಲಕ ಉತ್ಪನ್ನಗಳನ್ನು ಮರುಮಾರಾಟ ಮಾಡಿ, ನಿಮ್ಮ ನೆಟ್‌ವರ್ಕ್ ಮತ್ತು ಮಾರಾಟ ಕೌಶಲ್ಯವನ್ನು ಅವಲಂಬಿಸಿ ಉತ್ತಮ ಆದಾಯ ಗಳಿಸಬಹುದು.
ಇಂದು ಯಾವುದೇ ಅಂಗಡಿ ಇಲ್ಲದೇ, ಹಣವೂ ಹೂಡಿಕೆ ಮಾಡದೇ ವ್ಯವಹಾರ ಆರಂಭಿಸಬಹುದು. ಮನೆಯಲ್ಲಿಯೇ ಕುಳಿತೇ ಈ ವ್ಯಾಪಾರ ಆರಂಭಿಸಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದಾಗಿದೆ. ಈ ಹೊಸ ಪ್ರವೃತ್ತಿ ಸದ್ಯ ಟ್ರೆಂಡಿಂಗ್‌ನಲ್ಲಿದೆ. 9 ಟು 5 ಜಾಬ್‌ನಿಂದ ಬೇಸತ್ತಿದ್ರೆ ಈ ವ್ಯವಹಾರವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
25
ಶೂನ್ಯ ಹೂಡಿಕೆಯ ವ್ಯವಹಾರ
ನಿಮ್ಮ ಬಳಿಯಲ್ಲಿರುವ ಸ್ಮಾರ್ಟ್‌ಫೋನ್‌ನಿಂದ Zero Investment Business ಆರಂಭಿಸಬಹುದು. ನೀವು ದಿನನಿತ್ಯ ಬಳಕೆ ಮಾಡುವ WhatsApp ಮತ್ತು Telegram ಆಪ್ ಬಳಸಿಕೊಂಡು ಡಿಜಿಟಲ್ ಬ್ಯುಸಿನೆಸ್ ಸ್ಟಾರ್ಟ್ ಮಾಡಿ. ಈ ಅಪ್ಲಿಕೇಶನ್‌ಗಳೇ ನಿಮಗೆ ಒಂದು ರೀತಿಯ ಡಿಜಿಟಲ್ ಶೋರೋಮ್‌ಗಳಾಗಿ ಬದಲಾಗಿವೆ. ಅಂದ್ರೆ ಈ ಆಪ್‌ಗಳೇ ನಿಮ್ಮ ಅಂಗಡಿಗಳಾಗಿವೆ. ಅದು ಹೇಗೆ ಎಂದು ನೋಡೋಣ ಬನ್ನಿ.
35
ಆನ್‌ಲೈನ್ ರೀಸೇಲ್ ಬ್ಯುಸಿನೆಸ್
ಇಂದಿನ ಯುವ ಸಮುದಾಯ ಕ್ವಿಕ್ ಇನ್‌ಕಮ್ ಮತ್ತು ಫಾಸ್ಟ್ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳುವ ಗುಣ ಹೊಂದಿರುತ್ತಾರೆ. ಇಂದು ಜನರು ಅತ್ಯಧಿಕವಾಗಿ ವಾಟ್ಸಪ್ ಮತ್ತು ಟೆಲಿಗ್ರಾಂ ಬಳಕೆ ಮಾಡ್ತಾರೆ. ಈ ಆಪ್‌ಗಳಲ್ಲಿ ಚಾನೆಲ್ ಕ್ರಿಯೇಟ್ ಮಾಡಿಕೊಂಡು ಏಕಕಾಲದಲ್ಲಿ ಜನರನ್ನು ಒಂದೆಡೆ ಸೇರಿಸಿಕೊಳ್ಳುವುದು. ಇದರಿಂದ ನಿಮ್ಮದೇ ಆದ ಆನ್‌ಲೈನ್ ಸ್ಟೋರ್ ಕ್ರಿಯೇಟ್ ಅಗುತ್ತದೆ.
*ರೀಸೇಲ್ ಮಾರಾಟಗಾರರು ಸಪ್ಲೈರ್ ಅಥವಾ ಅಪ್ಲಿಕೇಶನ್ ಜೊತೆ ಕನೆಕ್ಟ್ ಹೊಂದುವುದು.
*ಈ ಆಪ್ ಮೂಲಕ ಮಾರಾಟದ ಉತ್ಪನ್ನದ ಕ್ಯಾಟ್‌ಲಾಗ್ ಶೇರ್ ಮಾಡಿಕೊಳ್ಳಬೇಕು.
*ಈ ಕ್ಯಾಟ್‌ಲಾಗ್ ನಲ್ಲಿ ಪ್ರೊಡಕ್ಟ್ ಖರೀದಿಗೆ ಚಾನೆಲ್‌ನಲ್ಲಿರುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ.
*ಈ ಮೂಲಕ ನೀವು ಖರೀದಿಸಿ, ನೇರವಾಗಿ ಗ್ರಾಹಕರಿಗೆ ರೀಸೇಲ್ ಮಾಡಬಹುದು. ಇದರಿಂದ ಒಂದು ಪ್ರೊಡಕ್ಟ್ ಮೇಲೆ ಉತ್ತಮ ಲಾಭ ಸಿಗುತ್ತದೆ.
55
ಎಷ್ಟು ಸಂಪಾದನೆ ಮಾಡಬಹುದು?
ಆನ್‌ಲೈನ್ ರೀಸೇಲ್ ಬ್ಯುಸಿನೆಸ್‌ನಲ್ಲಿ ನೀವು ತಿಂಗಳಿಗೆ ಆರಂಭದಲ್ಲಿ 10 ರಿಂದ 15 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಈ ಆದಾಯವು ನಿಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಚಾನೆಲ್‌ನಲ್ಲಿರುವ ಸಬ್‌ಸ್ಕ್ರೈಬರ್ಸ್ ಮೇಲೆ ನಿರ್ಧರಿತವಾಗುತ್ತದೆ. ಸಬ್‌ಸ್ಕ್ರೈಬರ್ಸ್ ಹೆಚ್ಚಾದಂತೆ ಲಾಭದ ಪ್ರಮಾಣವೂ ಏರಿಕೆಯಾಗುತ್ತದೆ. ಇಂದು ಎಷ್ಟೋ ಜನರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು, ತಿಂಗಳಿಗೆ 50 ರಿಂದ 1 ಲಕ್ಷದವರೆಗೂ ಸಂಪದಾನೆ ಮಾಡುತ್ತಿದ್ದಾರೆ.ಈ ವ್ಯವಹಾರ ಸಂಪೂರ್ಣವಾಗಿ ನೆಟ್‌ವರ್ಕ್ ಮತ್ತು ಮಾರಾಟ ಕೌಶಲ್ಯಗಳನ್ನು ಅವಲಂಬಿಸಿರುತ್ತದೆ ಎಂಬ ವಿಷಯ ನೆನಪಿನಲ್ಲಿರಲಿ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.