ಟಿಸಿಎಸ್ ಮತ್ತು ಇನ್ಫೋಸಿಸ್ ಕಂಪನಿಗಳ 2025-26ರ ವಾರ್ಷಿಕ ವರದಿಯ ಪ್ರಕಾರ, ಸಿಇಒಗಳ ಸಂಬಳದಲ್ಲಿ ದೊಡ್ಡ ವ್ಯತ್ಯಾಸವಿದೆ. ಟಿಸಿಎಸ್‌ಗಿಂತ ಇನ್ಫೋಸಿಸ್ ವಹಿವಾಟು ಕಡಿಮೆ ಇದ್ದರೂ, ಸಿಇಒ ಸಂಬಳದಲ್ಲಿ ಈ ಅಂತರ ಕಂಡುಬಂದಿದೆ.
ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳಲ್ಲಿ ಕೆಲಸ ಮಾಡೋದು ಎಷ್ಟೋ ಜನರ ಕನಸು ಆಗಿರುತ್ತದೆ. ಈ ಎರಡೂ ಖಾಸಗಿ ಕಂಪನಿಗಳ ಬಗ್ಗೆ ಪರಿಚಯ ಮಾಡುವ ಅಗತ್ಯವಿಲ್ಲ. ಇಂದು ಈ ಎರಡೂ ಕಂಪನಿಗಳ ಸಿಇಒಗಳು ಪಡೆದುಕೊಳ್ಳುತ್ತಿರುವ ಸಂಬಳದ ಮಾಹಿತಿ ಹೊರಬಿದ್ದಿದೆ. ಎರಡೂ ಕಂಪನಿಗಳ ವಾರ್ಷಿಕ ದಾಖಲೆಗಳ ಪ್ರಕಾರ, ಅವರ ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸವಿದೆ.
25
ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ
ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪನಿಗಳ 2025-26ರ ವಾರ್ಷಿಕ ವರದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸಿಇಒ ಪಡೆದುಕೊಳ್ಳುತ್ತಿರುವ ಸಂಬಳ ದಾಖಲಾಗಿದೆ. ವರದಿಗಳ ಪ್ರಕಾರ, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಈ ವರ್ಷ ₹82.6 ಕೋಟಿ (ಸುಮಾರು $1.2 ಬಿಲಿಯನ್) ಸಂಬಳವನ್ನು ಪಡೆದುಕೊಂಡಿದ್ದಾರೆ. ಟಿಸಿಎಸ್‌ನ ಸಿಇಒ ಆಗಿರುವ ಕೆ. ಕೃತಿವಾಸನ್ ₹28 ಕೋಟಿ (ಸುಮಾರು $1.2 ಬಿಲಿಯನ್) ಸಂಬಳ ತೆಗೆದುಕೊಂಡಿದ್ದಾರೆ.
35
ಸಲೀಲ್ ಪರೇಖ್
ಸಲೀಲ್ ಪರೇಖ್ ಅವರು ಟಿಸಿಎಸ್ ಸಿಇಒಗಿಂತ ಸುಮಾರು 55 ಕೋಟಿ ರೂಪಾಯಿಗಳಷ್ಟು ಹೆಚ್ಚು ಸಂಬಳ ಪಡೆದಿದ್ದಾರೆ. ಟಿಸಿಎಸ್ ವಹಿವಾಟು ಇನ್ಪೋಸಿಸಸ್‌ಗಿಂತ ಹೆಚ್ಚಾಗಿದ್ರೂ ಇಬ್ಬರು ಸಿಇಒ ಸಂಬಳದಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು. 2026ರ ಆರ್ಥಿಕ ವರ್ಷದಲ್ಲಿ ಟಿಸಿಎಸ್ ಆದಾಯ 2.67 ಲಕ್ಷ ಕೋಟಿ ಮತ್ತು ಲಾಭ 49,201 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಇನ್ಫೋಸಿಸ್‌ನ ಆದಾಯ ₹1.79 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇನ್ಪೋಸಿಸ್ ಕಂಪನಿಯ ಗಾತ್ರ ಚಿಕ್ಕದಾಗಿದ್ರೂ, ಇಲ್ಲಿಯ ಸಿಇಒ ಸಲೀಲ್ ಹೆಚ್ಚು ಸಂಬಳ ಪಡೆಯುತ್ತಾರೆ. ಸಲೀಲ್ ಪರೇಖ್ ಪಡೆದುಕೊಳ್ಳುವ ಸಂಬಳದ ಬಹುಪಾಲು ಷೇರುಗಳು ಆಗಿದೆ.
ಸ್ಥಿರ ವೇತನ: ರೂ 7.97 ಕೋಟಿ
ನಿವೃತ್ತಿ ಮತ್ತು ಇತರ ಭತ್ಯೆಗಳು: ರೂ 0.53 ಕೋಟಿ
ಕಾರ್ಯಕ್ಷಮತೆ ಆಧಾರಿತ ಬೋನಸ್: ರೂ 8.5 ಕೋಟಿ
ಸ್ಟಾಕ್ (ಷೇರು) ಆಧಾರಿತ ಪ್ರೋತ್ಸಾಹ: ರೂ 23.35 ಕೋಟಿ
ಷೇರು ಆಯ್ಕೆಗಳನ್ನು ಮಾರಾಟ / ಚಲಾಯಿಸುವುದರಿಂದ ಲಾಭ: ರೂ 50.75 ಕೋಟಿ
55
ಟಿಸಿಎಸ್ ಸಿಇಒ ಆಗಿರುವ ಕೆ. ಕೃತಿವಾಸನ್ ಸಂಬಳ ಪ್ಯಾಕೇಜ್?
ಸಿಇಒ ಕೆ. ಕೃತಿವಾಸನ್ ಅವರ ಒಟ್ಟು ವಾರ್ಷಿಕ ಸಂಬಳ ₹28 ಕೋಟಿ
ಮೂಲ ವೇತನ: ರೂ 1.67 ಕೋಟಿ
ಭತ್ಯೆಗಳು ಮತ್ತು ಇತರ ಸವಲತ್ತುಗಳು: ರೂ 1.43 ಕೋಟಿ
ಕಾರ್ಯಕ್ಷಮತೆ ಆಧಾರಿತ ಆಯೋಗ: ರೂ 25 ಕೋಟಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.