ನೀವು ಕಮರ್ಷಿಯಲ್ ಸಿಲಿಂಡರ್ ಖರೀದಿ ಮಾಡ್ತಿದ್ದರೆ ನಿಮಗೆ ಮುಖ್ಯ ಮಾಹಿತಿ ಒಂದಿದೆ. ಕಮರ್ಷಿಯಲ್ ಸಿಲಿಂಡರ್ ವಿತರಣೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಸಿಲಿಂಡರ್ ವಂಚನೆ ತಪ್ಪಿಸಲು ಕಂಪನಿಗಳು ಮಹತ್ವದ ಹೆಜ್ಜೆ ಇಟ್ಟಿವೆ.
ವಾಣಿಜ್ಯ ಸಿಲಿಂಡರ್ ಗಳ ವಿತರಣೆಗೆ ಸಂಬಂಧಿಸಿದಂತೆ LPG ಬಳಕೆದಾರರಿಗೆ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಭಾರತ್ ಗ್ಯಾಸ್ ಏಜೆನ್ಸಿ ವಾಣಿಜ್ಯ ಸಿಲಿಂಡರ್ ವಿತರಣೆಯ ನಿಯಮಗಳನ್ನು ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಭಾರತ್ ಗ್ಯಾಸ್ ಏಜೆನ್ಸಿ ಈಗ ವಾಣಿಜ್ಯ ಸಿಲಿಂಡರ್ಗಳನ್ನು DAC ಕೋಡ್ನೊಂದಿಗೆ ತಲುಪಿಸಲಿದೆ. ಸಿಲಿಂಡರ್ ಬುಕ್ ಮಾಡಿದ ನಂತ್ರ, ಕೋಡ್ ಬರುತ್ತೆ. ನೀವು ಈ ಕೋಡ್ ಅನ್ನು ಡೆಲಿವರಿ ಸಮಯದಲ್ಲಿ ಏಜೆಂಟ್ಗೆ ಒದಗಿಸಿದ್ರೆ ಮಾತ್ರ ಅವರು ನಿಮಗೆ ವಾಣಿಜ್ಯ ಸಿಲಿಂಡರ್ ನೀಡಲಿದ್ದಾರೆ. ಇಲ್ಲ ಅಂದ್ರೆ ನಿಮಗೆ ಸಿಲಿಂಡರ್ ಸಿಗೋದಿಲ್ಲ.
25
ಡಿಎಸಿ ಅಂದ್ರೇನು?
DAC ಕೋಡ್ ಒಂದು ರೀತಿಯ OTP ಆಗಿದೆ. ಇದು ಕಮರ್ಷಿಯಲ್ ಸಿಲಿಂಡರ್ ಗಳಿಗೆ ಇನ್ಮುಂದೆ ಕಡ್ಡಾಯವಾಗಲಿದೆ. ಕಂಪನಿಯ ಹೊಸ ನಿಯಮವು ತಪ್ಪು ವಿತರಣೆ, ವಂಚನೆ ಮತ್ತು ಗ್ರಾಹಕರ ದೂರುಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಅಂಗಡಿಗಳಿಗೆ ಈ ಕೋಡ್ ಕಡ್ಡಾಯವಾಗಿದೆ.
35
ಗ್ರಾಹಕ ಸುರಕ್ಷತೆಗಾಗಿ ಕೋಡ್ ಮುಖ್ಯ
ಭಾರತ್ ಗ್ಯಾಸ್ ಏಜೆನ್ಸಿಯ ಪ್ರಕಾರ, ಗ್ರಾಹಕರು ಸಿಲಿಂಡರ್ ವಿತರಣೆಯ ನಂತರ ಕೋಡ್ ಹಂಚಿಕೊಳ್ಳಬೇಕು. ಗ್ರಾಹಕರ ಸುರಕ್ಷತೆಗಾಗಿ ಈ ಕೋಡ್ ನಿರ್ಣಾಯಕವಾಗಿದೆ. ಕೋಡ್ ಅನ್ನು ಮೊದಲೇ ಹಂಚಿಕೊಂಡ್ರೆ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಮೊದಲು ಸಿಲಿಂಡರ್ ಅನ್ನು ಪರಿಶೀಲಿಸಿ ಮತ್ತು ನಂತರ DAC ಹಂಚಿಕೊಳ್ಳಿ.
ಕಂಪನಿಯ ಪ್ರಕಾರ, ಹೊಸ DAC ವ್ಯವಸ್ಥೆಯಡಿಯಲ್ಲಿ, ಏಜೆಂಟ್ ಸಿಲಿಂಡರ್ ಡೆಲಿವರಿ ಮಾಡಿದ ನಂತ್ರ ಗ್ರಾಹಕರಿಗೆ ಡಿಜಿಟಲ್ ನಗದು ಮೆಮೊವನ್ನು ಸಹ ಒದಗಿಸುತ್ತಾರೆ. ಇದು ಸಿಲಿಂಡರ್ ವಿತರಣೆಯ ಆನ್ಲೈನ್ ರೆಕಾರ್ಡ್ ಇರುತ್ತದೆ. ಪೇಮೆಂಟ್ ಹಾಗೂ ಡೆಲಿವರಿ ಮಾಹಿತಿ ಮೊಬೈಲ್ನಲ್ಲಿ ಲಭ್ಯವಿರುತ್ತವೆ. ಇದ್ರಿಂದಾಗಿ ನೀವು ಭೌತಿಕ ಬಿಲ್ ಇಟ್ಟುಕೊಳ್ಳುವ ಅಗತ್ಯವಿಲ್ಲ.
55
ಮೊಬೈಲ್ ಸಂಖ್ಯೆ ನವೀಕರಣ
ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡುವಂತೆ ಕಂಪನಿ ಸೂಚನೆ ನೀಡಿದೆ. ಒಂದ್ವೇಳೆ ನಂಬರ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ ಅದನ್ನು ಮತ್ತೆ ಸಕ್ರಿಯಗೊಳಿಸಿ. DAC ಕೋಡ್ ಅನ್ನು ಯಾವುದೇ ಅಪರಿಚಿತ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ. ಸಿಲಿಂಡರ್ ಸ್ವೀಕರಿಸಿದ ನಂತರವೇ ಕೋಡ್ ಹಂಚಿಕೊಳ್ಳಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.