ದೇಶದ ಗ್ರೇಡ್‌-1 ಸೋಪ್‌ಗಳಲ್ಲೇ ಮೈಸೂರು ಸ್ಯಾಂಡಲ್‌ ನಂ.1!

Published : Apr 10, 2025, 07:32 PM ISTUpdated : Apr 10, 2025, 07:35 PM IST

ದೇಶದಲ್ಲಿ ಲಭ್ಯವಿರುವ ಸ್ನಾನದ ಸೋಪ್‌ಗಳಲ್ಲಿ, ಟಿಎಫ್‌ಎಂ (ಟೋಟಲ್ ಫ್ಯಾಟಿ ಮ್ಯಾಟರ್) ಅಂಶದ ಆಧಾರದ ಮೇಲೆ ಗ್ರೇಡ್-1 ಸೋಪ್‌ಗಳನ್ನು ಗುರುತಿಸಲಾಗುತ್ತದೆ. ಮೈಸೂರು ಸ್ಯಾಂಡಲ್‌ನಿಂದ ಗೋದ್ರೇಜ್ ನಂ.1 ವರೆಗೆ, ಯಾವ ಸೋಪ್‌ಗಳು ಚರ್ಮಕ್ಕೆ ಉತ್ತಮ ಮತ್ತು ಅವುಗಳ ಟಿಎಫ್‌ಎಂ ಸ್ಕೋರ್ ಎಷ್ಟು ಎಂಬುದನ್ನು ತಿಳಿಯಿರಿ.

PREV
110
ದೇಶದ ಗ್ರೇಡ್‌-1 ಸೋಪ್‌ಗಳಲ್ಲೇ ಮೈಸೂರು ಸ್ಯಾಂಡಲ್‌ ನಂ.1!

ದೇಶದಲ್ಲಿ ಸ್ನಾನದ ಸೋಪ್‌ಗಳ ವಿಚಾರಕ್ಕೆ ಬಂದಾಗ ಸಾವಿರಾರು ಸೋಪ್‌ಗಳು ನಮ್ಮ ಕಣ್ಣೆದುರು ಬರುತ್ತದೆ. ಆದರೆ, ಕೆಲವೊಂದು ಸೋಪ್‌ಗಳು ಸ್ನಾನಕ್ಕೆ ಯೋಗ್ಯವೇ ಆಗಿರೋದಿಲ್ಲ. ಅದರ ಟಿಎಫ್‌ಎಂ ಕಂಟೆಂಟ್‌ ಅಂದರೆ ಟೋಟಲ್‌ ಫ್ಯಾಟಿ ಮ್ಯಾಟರ್‌ ಆಧಾರದ ಮೇಲೆ ಸೋಪ್‌ ಸ್ನಾನಕ್ಕೆ ಎಷ್ಟು ಯೋಗ್ಯ ಅನ್ನೋದು ನಿರ್ಧಾರವಾಗುತ್ತದೆ. 

210

ಈ ಟಿಎಫ್‌ಎಂಅನ್ನು ಇದನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ನಿರ್ಧಾರ ಮಾಡುತ್ತದೆ. ಸಾಮಾನ್ಯವಾಗಿ ಟಿಎಫ್‌ಎಂ ಶೇ.76ಕ್ಕಿಂತ ಹೆಚ್ಚಿನ ಸೋಪ್‌ಗಳನ್ನು ಗ್ರೇಡ್‌-1 ಸೋಪ್‌ಗಳು ಎನ್ನಲಾಗುತ್ತದೆ. ಇವುಗಳು ಸ್ನಾನಕ್ಕೆ ಯೋಗ್ಯ ಅನ್ನೋದು ಬಿಐಎಸ್‌ ಅಭಿಮತ.

310

ಈ ಲೆಕ್ಕಾಚಾರದಲ್ಲಿ ನೋಡುವುದಾದರೆ, ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್‌ ದೇಶದ ನಂ.1 ಗ್ರೇಡ್‌-1 ಸೋಪ್‌ ಎನಿಸಿದೆ. ಇದರ ಟಿಎಫ್‌ಎಂ ಸ್ಕೋರ್‌ ಶೇ.80. ಟಿಎಫ್‌ಎಂ ಸ್ಕೋರ್‌ 87. ನೈಸರ್ಗಿಕ ಶ್ರೀಗಂಧ ಮಾತ್ರವಲ್ಲದೆ ಅದ್ಭುತ ಪೋಷಣೆಯನ್ನೂ ಚರ್ಮಕ್ಕೆ ನೀಡುತ್ತದೆ.

410

2ನೇ ಸ್ಥಾನದಲ್ಲಿರುವ ಸೋಪ್‌ ಸಿಂಥಾಲ್‌. ಇದರಲ್ಲಿ ಸಾಕಷ್ಟು ವೇರಿಯಂಟ್‌ಗಳು ಇವೆ. ಮೂಲ ಸಿಂಥಾಲ್‌ ಸೋಪ್‌ನ ಟಿಎಫ್‌ಎಂ ಶೇ. 79 ಇದ್ದು, ಟಿಎಫ್‌ಎಂ ಸ್ಕೋರ್‌ 83 ಆಗಿದೆ. ಇದು ರಿಫ್ರೆಶಿಂಗ್‌ ಅಲ್ಲದೆ ಮೊಡವೆಗಳಿಂದ ರಕ್ಷಣೆಯನ್ನೂ ನೀಡುತ್ತದೆ.

510

ಮೂರನೇ ಸ್ಥಾನದಲ್ಲಿರುವುದು ಸುಪಾರಿಯಾ ಸಿಲ್ಕ್‌ (Superia Silk). ಈ ಸೋಪ್‌ನ ಟಿಎಫ್‌ಎಂ ಶೇ. 76 ಆಗಿದ್ದು, ಟಿಎಫ್‌ಎಂ ಸ್ಕೋರ್‌ 82 ಆಗಿದೆ. ಬಟರ್‌ಸ್ಕಾಚ್‌ನೊಂದಿಗೆ ಕಾಂತಿಯುತ ಚರ್ಮವನ್ನು ಇದು ನೀಡುತ್ತದೆ.

610

ನಾಲ್ಕನೇ ಸ್ಥಾನದಲ್ಲಿರುವುದು ಗೋದ್ರೇಜ್‌ ಫೇರ್‌ ಗ್ಲೋ (Godrej Fair Glow). ಇದರ ಟಿಎಫ್‌ಎಂ ಶೇ. 76 ಆಗಿದ್ದರೆ, ಟಿಎಫ್‌ಎಂ ಸ್ಕೋರ್‌ 78 ಆಗಿದೆ. ಚರ್ಮಕ್ಕೆ ಫೇರ್‌ನೆಸ್‌ ನೀಡೋದಲ್ಲದೆ, ಚರ್ಮದ ಮೇಲಿನ ಕಲ್ಮಶವನ್ನೂ ನಿವಾರಣೆ ಮಾಡುತ್ತದೆ.

710

ಪಾರ್ಕ್‌ ಅವೆನ್ಯೂ (Park Avenue) ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದರ ಟಿಎಫ್‌ಎಂ ಶೇ. 76 ಆಗಿದ್ದು, ಟಿಎಫ್‌ಎಂ ಸ್ಕೋರ್‌ 77 ಆಗಿದೆ. ಈ ಸೋಪ್‌ ನಿಮ್ಮನ್ನು ಹೈಡ್ರೇಟ್‌ ಆಗಿ ಇರಿಸುವಂತೆ ಮಾಡುತ್ತದೆ.

810

6ನೇ ಸ್ಥಾನದಲ್ಲಿರುವ ಗೋದ್ರೇಜ್‌ ನಂ.1 ಸೋಪ್‌ (Godrej No. 1). ಇದರ ಟಿಎಫ್‌ಎಂ ಶೇ. 76 ಆಗಿದ್ದು, ಟಿಎಫ್‌ಎಂ ಸ್ಕೋರ್‌ 77 ಆಗಿದೆ. ಶ್ರೀಗಂಧವನ್ನು ಇದಕ್ಕೆ ಬಳಕೆ ಮಾಡಲಾಗುತ್ತದೆ ಅದರೊಂದಿಗೆ ಚರ್ಮ ಸುಕ್ಕುಗಟ್ಟುವುದನ್ನೂ ಇದು ತಡೆಯುತ್ತದೆ.

910

ಟಿಎಫ್‌ಎಂ ಗುರುತಿಸೋದು ಹೇಗೆ: ಪ್ರತಿ ಸೋಪ್‌ನ ಪ್ಯಾಕ್‌ನ ಹಿಂಭಾಗದಲ್ಲಿ ಎಲ್ಲಾ ಕಂಪನಿಗಳು ಟಿಎಫ್‌ಎಂ ಪರ್ಸಂಟೇಜ್‌ ಜೊತೆಗೆ ಸೋಪ್‌ ಯಾವ ಗ್ರೇಡ್‌ನದ್ದು ಅನ್ನೋದನ್ನ ನಮೂದಿಸಲೇಬೇಕು. ಇದು ಕಡ್ಡಾಯ ನಿಯಮ. ಇದರಲ್ಲಿ ಗ್ರೇಡ್‌-1, ಗ್ರೇಡ್‌-2, ಗ್ರೇಡ್‌-3 ಅನ್ನೋದನ್ನು ನಮೂದು ಮಾಡಿರುತ್ತಾರೆ. ಸಾಮಾನ್ಯವಾಗಿ ಇಂದು ನಾವು ಬಳಕೆ ಮಾಡುವ ಸಾಕಷ್ಟು ಪ್ರಚಲಿತದಲ್ಲಿರುವ ಸೋಪ್‌ಗಳೆಲ್ಲವೂ ಗ್ರೇಡ್‌-2 ಅಥವಾ ಗ್ರೇಡ್‌-3 ದರ್ಜೆಯಲ್ಲಿಯೇ ಬರುತ್ತದೆ.

KSDL ದಾಖಲೆ ವಹಿವಾಟು: ಮೈಸೂರು ಸ್ಯಾಂಡಲ್ ಫ್ಯಾಕ್ಟರಿಗೆ 416 ಕೋಟಿ ರೂ. ಲಾಭ!

1010

ಅಷ್ಟಕ್ಕೂ ಟಿಎಫ್‌ಎಂ ಎಂದರೇನು:ಸೋಪುಗಳಲ್ಲಿ TFM (ಟೋಟಲ್ ಫ್ಯಾಟಿ ಮ್ಯಾಟರ್) ಮುಖ್ಯ ಏಕೆಂದರೆ ಅದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೊಬ್ಬಿನಾಮ್ಲಗಳ ಪ್ರಮಾಣವನ್ನು ತೋರಿಸುತ್ತದೆ. ಹೆಚ್ಚಿನ TFM (ಗ್ರೇಡ್ 1, ≥76%) ಸೋಪುಗಳು ಮೃದುವಾಗಿರುತ್ತವೆ, ತೇವಾಂಶವನ್ನು ನೀಡುತ್ತವೆ ಮತ್ತು ಸೂಕ್ಷ್ಮ ಚರ್ಮಕ್ಕೆ ಉತ್ತಮವಾಗಿರುತ್ತವೆ, ಶುಷ್ಕತೆಯನ್ನು ಕಡಿಮೆ ಮಾಡುತ್ತವೆ. ಕಡಿಮೆ TFM (ಗ್ರೇಡ್ 3, <60%) ಸೋಪುಗಳು ನೈಸರ್ಗಿಕ ಎಣ್ಣೆಗಳನ್ನು ತೆಗೆದುಹಾಕಬಹುದು, ಇದು ಕಿರಿಕಿರಿಯನ್ನು ಉಂಟುಮಾಡಬಹುದು. ಕಡಿಮೆ TFM ಕಾಲಾನಂತರದಲ್ಲಿ ಚರ್ಮವನ್ನು ಒಣಗಿಸಬಹುದು. 

ವಿಜಯಪುರದಲ್ಲೂ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ; ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ ಗೊತ್ತಾ?

Read more Photos on
click me!

Recommended Stories