ತಿಂಗಳಿಗೆ 150 ಕಿಮೀ ಓಡುತ್ತಿದ್ದ ಅಂಬಾನಿ ಆಪ್ತ ಹೃದಯಾಘಾತಕ್ಕೆ ಬಲಿ!

Published : Apr 10, 2025, 01:03 PM ISTUpdated : Apr 10, 2025, 02:18 PM IST

ಅಂಬಾನಿ ಕುಟುಂಬದ ಆಪ್ತ. ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್‌ನ ಮಾಜಿ ಸಿಇಒ ದರ್ಶನ್ ಮೆಹ್ತಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫ್ಯಾಷನ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಅವರ ಕೊಡುಗೆ ಅಪಾರವಾಗಿದ್ದು, ಐಷಾರಾಮಿ ಬ್ರ್ಯಾಂಡ್‌ಗಳನ್ನು ಭಾರತಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  

PREV
15
ತಿಂಗಳಿಗೆ 150 ಕಿಮೀ ಓಡುತ್ತಿದ್ದ ಅಂಬಾನಿ ಆಪ್ತ ಹೃದಯಾಘಾತಕ್ಕೆ ಬಲಿ!

 ಅಂಬಾನಿ ಕುಟುಂಬದ ಆಪ್ತ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆಯಾದ ರಿಲಯನ್ಸ್ ರೀಟೈಲ್‌ನಲ್ಲಿರುವ ಅಂಗಸಂಸ್ಥೆ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (RBL)ನ ಮಾಜಿ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ದರ್ಶನ್ ಮೆಹ್ತಾ ಏ.09ರಂದು ನಿಧನರಾಗಿದ್ದಾರೆ. ತಾಜ್ ಹೈದರಾಬಾದ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ ಸಂಭವಿಸಿದ್ದು ಅವರ ಹಠಾತ್ ನಿಧನಕ್ಕೆ ಕಾರಣ ಎನ್ನಲಾಗಿದೆ. ಫ್ಯಾಷನ್ ಮತ್ತು ಚಿಲ್ಲರೆ ವ್ಯಾಪಾರ ಉದ್ಯಮದ ಅನುಭವಿಯಾಗಿ ದೇಶದ ಪ್ರೀಮಿಯಂ ಮತ್ತು ಐಷಾರಾಮಿ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ಮೆಹ್ತಾ ಪ್ರಮುಖ ಪಾತ್ರ ವಹಿಸಿದ್ದಾರೆ.

25

ಓಟಗಾರ ಮತ್ತು ಹಿಮಾಲಯನ್ ಚಾರಣಿಗರಾಗಿದ್ದ 64 ವರ್ಷದ ಶ್ರೀ ಮೆಹ್ತಾ ತಿಂಗಳಿಗೆ 150 ಕಿ.ಮೀ ಜಾಗಿಂಗ್‌ ಮೂಲಕ ಪೂರ್ಣಗೊಳಿಸುತ್ತಿದ್ದರು. ಈ ಮೂಲಕ ದೈಹಿಕ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು. ರಿಲಯನ್ಸ್ ರಿಟೇಲ್‌ನ ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಬ್ರಾಂಡ್ಸ್ ಅನ್ನು 2007ರಲ್ಲಿ ಮುಖೇಶ್ ಅಂಬಾನಿ ಸ್ಥಾಪಿಸಿದರು. ಆಗ ಬ್ರ್ಯಾಂಡ್‌ನ ಮೊದಲ ಉದ್ಯೋಗಿಯಾಗಿದ್ದವರು ದರ್ಶನ್ ಮೆಹ್ತಾ. ನವೆಂಬರ್ 2024 ರಲ್ಲಿ ತಮ್ಮ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಕಂಪೆನಿಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
 

35

ರಿಲಯನ್ಸ್ ಗಿಂತ ಮೊದಲು, ಮೆಹ್ತಾ ಅರವಿಂದ್ ಬ್ರಾಂಡ್ಸ್ ನಂತಹ ಕಂಪನಿಗಳಲ್ಲಿ ಸೇವೆ ಸಲ್ಲಿಸಿದರು, ಅಲ್ಲಿ ಅವರು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದರು. ಐಷಾರಾಮಿ ಮತ್ತು ಪ್ರೀಮಿಯಂ ಚಿಲ್ಲರೆ ವ್ಯಾಪಾರದಲ್ಲಿ ರಿಲಯನ್ಸ್ ಬ್ರಾಂಡ್ಸ್ ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ರಿಲಯನ್ಸ್ ಬ್ರಾಂಡ್ಸ್ ದೇಶದಲ್ಲಿ ಹಲವಾರು ಫ್ಯಾಷನ್ ಮತ್ತು ಜೀವನಶೈಲಿ ಬ್ರಾಂಡ್ ಗಳನ್ನು ಪರಿಚಯಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ವ್ಯಾಲೆಂಟಿನೋ, ಬಾಲೆನ್ಸಿಯಾಗ, ಟಿಫಾನಿ & ಕಂ., ಎರ್ಮೆನೆಗಿಲ್ಡೊ ಜೆಗ್ನಾ, ಜಾರ್ಜಿಯೊ ಅರ್ಮಾನಿ, ಬೊಟ್ಟೆಗಾ ವೆನೆಟಾ, ಜಿಮ್ಮಿ ಚೂ, ಬರ್ಬೆರಿ ಮತ್ತು ಪಾಟರಿ ಬಾರ್ನ್‌ನಂತಹ ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳನ್ನು ಭಾರತದ ಮಾರುಕಟ್ಟೆಗೆ ತರುವಲ್ಲಿ ಮೆಹ್ತಾ  ಪಾತ್ರ  ಬಹಳ ದೊಡ್ಡದಿದೆ. 

45

 

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗಸಂಸ್ಥೆಗಳಲ್ಲಿ ಒಂದಾದ  ರಿಲಯನ್ಸ್  ರೀಟೆಲ್ಸ್ ಪುತ್ರಿ ಇಶಾ ಅಂಬಾನಿಯ ಮುಂದಾಳತ್ವದಲ್ಲಿದೆ. ಪ್ರಸ್ತುತ, RBL ಫ್ಯಾಷನ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಕ್ಕೂ ಹೆಚ್ಚು ಪ್ರಮುಖ ಜಾಗತಿಕ ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇದಲ್ಲದೆ, ಆರ್‌ಬಿಎಲ್‌ನಲ್ಲಿ, ಶ್ರೀ ಮೆಹ್ತಾ ಮುಂಬೈನಲ್ಲಿ ರಿಲಯನ್ಸ್ ಗ್ರೂಪ್‌ನ ಎರಡು ಚಿಲ್ಲರೆ ಕೇಂದ್ರಗಳನ್ನು ಕೂಡ ಸ್ಥಾಪಿಸಿದರು. ಅವೆರಡು ಯಾವುದೆಂದರೆ ಜಿಯೋ ವರ್ಲ್ಡ್ ಡ್ರೈವ್ ಮತ್ತು ಜಿಯೋ ವರ್ಲ್ಡ್ ಪ್ಲಾಜಾ. ಭಾರತದಲ್ಲಿ ಐಷಾರಾಮಿ ಚಿಲ್ಲರೆ ವ್ಯಾಪಾರವನ್ನು ಪ್ರತಿನಿಧಿಸುತ್ತಿದೆ. 2019 ರಲ್ಲಿ ಯುಕೆ ಮೂಲದ ಆಟಿಕೆ ಸರಪಳಿ ಹ್ಯಾಮ್ಲೀಸ್ ಅನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳುವಲ್ಲಿ  ಮೆಹ್ತಾ ಪಾತ್ರ ದೊಡ್ಡದಿದೆ.
 

55

 ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಮೆಹ್ತಾ, PwC ಇಂಡಿಯಾದಲ್ಲಿ ತಮ್ಮ ಮೊದಲ ಉದ್ಯೋಗ ಆರಂಭಿಸಿದರು. ಅದಾದ ನಂತರ ಲಾಲ್‌ಭಾಯ್ ಗ್ರೂಪ್‌ಗೆ ಸೇರಿ 20 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರು.WPP - ಅನಗ್ರಾಮ್ ಸ್ಟಾಕ್ ಬ್ರೋಕಿಂಗ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಲಾಲ್‌ಭಾಯ್ ಗುಂಪಿನ ಭಾಗವಾದ ಗ್ರೇ ಅಡ್ವರ್ಟೈಸಿಂಗ್‌ನಲ್ಲಿ  ಉನ್ನತ ಸ್ಥಾನ ಹೊಂದಿದರು. ಅಂತಿಮವಾಗಿ ಅರವಿಂದ್ ಬ್ರಾಂಡ್ಸ್ ಲಿಮಿಟೆಡ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡು,  ಮಾರುಕಟ್ಟೆಯಲ್ಲಿ ಹೊಸ ಬ್ರ್ಯಾಂಡ್‌ಗಳ ಪರಿಚಯದ ಜೊತೆಗೆ ದೇಶದ ಬ್ರಾಂಡ್‌ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಫ್ಯಾಷನ್ ಪಾಲುದಾರಿಕೆಗಳಲ್ಲಿ ಫೇಮಸ್‌ ಮಾಡಿದರು. 

Read more Photos on
click me!

Recommended Stories