Multibagger Penny Stocks: ಷೇರು ಮಾರುಕಟ್ಟೆ ಅಂದ್ರೆ ರಿಸ್ಕ್ ಇದ್ದೇ ಇರುತ್ತೆ, ಆದ್ರೆ ನಿಮ್ಮ ಅದೃಷ್ಟ ಮತ್ತು ರಿಸರ್ಚ್ ಸರಿಯಾಗಿದ್ರೆ, ಮಾರುಕಟ್ಟೆ ನಿಮ್ಮನ್ನು ರಾತ್ರೋರಾತ್ರಿ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಮಾಡಬಲ್ಲದು. ಕೆಲವೊಮ್ಮೆ ಕೆಲವು ಷೇರುಗಳು ಇಡೀ ಆಟವನ್ನೇ ಬದಲಿಸಿಬಿಡುತ್ತವೆ.
ಈ ಸಣ್ಣ ಷೇರುಗಳು ಕಳೆದ 12 ತಿಂಗಳಲ್ಲಿ ಎಂಥಾ ಸದ್ದು ಮಾಡಿವೆ ಅಂದ್ರೆ, ದೊಡ್ಡ ದೊಡ್ಡ ಕಂಪನಿಗಳ ಷೇರುಗಳು ಕೂಡ ಇವುಗಳ ಮುಂದೆ ಮಂಕಾಗಿವೆ. ಈ ಷೇರುಗಳು ಒಂದೇ ವರ್ಷದಲ್ಲಿ 8,000% ವರೆಗೆ ಲಾಭ ನೀಡಿ ಎಲ್ಲರನ್ನೂ ಬೆರಗುಗೊಳಿಸಿವೆ. ಒಂದು ವರ್ಷದ ಹಿಂದೆ ಯಾರಾದ್ರೂ ಈ ಷೇರುಗಳಲ್ಲಿ ಒಂದರಲ್ಲಿ ₹1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು ಅದರ ಮೌಲ್ಯ ₹80 ಲಕ್ಷಕ್ಕೂ ಹೆಚ್ಚಾಗಿರುತ್ತಿತ್ತು. ಅಂದರೆ, ಅವರು ಈಗ ಕೋಟ್ಯಾಧಿಪತಿಗಳಾಗಿರುತ್ತಿದ್ದರು.
26
Magnus Steel Share: ಕೃಷಿ ಮತ್ತು ಐಟಿಯ ಡಬಲ್ ಡೋಸ್
ಈ ಕಂಪನಿ ಮೊದಲು ಕೃಷಿ ಉತ್ಪನ್ನಗಳ ಬ್ಯುಸಿನೆಸ್‌ನಲ್ಲಿತ್ತು. ಆದರೆ ಈಗ ಕಂಪ್ಯೂಟರ್ ಸಾಫ್ಟ್‌ವೇರ್, ಹಾರ್ಡ್‌ವೇರ್ ಮತ್ತು BPO ನಂತಹ ಐಟಿ ಸೇವೆಗಳನ್ನು ಸಹ ನೀಡುತ್ತಿದೆ. ಈ ಮಲ್ಟಿಬ್ಯಾಗರ್ ಸ್ಟಾಕ್, ಒಂದೇ ವರ್ಷದಲ್ಲಿ 2343% ರಿಟರ್ನ್ಸ್ ನೀಡಿದೆ. ಅಂದರೆ ಹೂಡಿಕೆದಾರರ ಹಣವನ್ನು 23 ಪಟ್ಟು ಹೆಚ್ಚಿಸಿದೆ. ಇದರ ಸದ್ಯದ ಬೆಲೆ ₹119.75. ಈ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 590% ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
36
Shree Salasar Share: ಫೈನಾನ್ಸ್ ಮತ್ತು ಇನ್ಫ್ರಾದ ಅದ್ಭುತ ಸಂಗಮ
1980ರಿಂದ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿ ಹಣಕಾಸು ಸೇವೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ದೇಶ-ವಿದೇಶಗಳಲ್ಲಿ ಶೇರು/ಬಾಂಡ್‌ಗಳ ಟ್ರೇಡಿಂಗ್ ಕೆಲಸವನ್ನು ನಿಭಾಯಿಸುತ್ತದೆ. ಇದರ ಮಾರುಕಟ್ಟೆ ಮೌಲ್ಯ ₹174 ಕೋಟಿ. ಒಂದೇ ವರ್ಷದಲ್ಲಿ ಈ ಶೇರು 1,614% ಲಾಭ ತಂದುಕೊಟ್ಟಿದ್ದು, ಇದರ ಬೆಲೆ ಈಗ ₹250 ಆಗಿದೆ. ಈ ಶೇರು ರಾಕೆಟ್‌ನಂತೆ ಏರಲು ಮುಖ್ಯ ಕಾರಣ, ಕಂಪನಿಯ ತ್ರೈಮಾಸಿಕ ಲಾಭದಲ್ಲಿ 1117% ರಷ್ಟು ಭಾರಿ ಹೆಚ್ಚಳವಾಗಿರುವುದು.
ಈ ಲಿಸ್ಟ್‌ನಲ್ಲಿರುವ ಅತ್ಯಂತ ಹೊಸ ಕಂಪನಿ ಇದು. 2023ರಲ್ಲಿ ಆರಂಭವಾದ ಈ ಕಂಪನಿ ಮುಖ್ಯವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಕ್ಲೌಡ್, ಮಷಿನ್ ಲರ್ನಿಂಗ್ ಮತ್ತು ಡೇಟಾ ಅನಾಲಿಟಿಕ್ಸ್‌ನಂತಹ ಹೈ-ಟೆಕ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಸದ್ಯ ಎಲ್ಲೆಡೆ AIದ್ದೇ ಹವಾ ಇರುವುದರಿಂದ, ಈ ಹೊಸ ಕಂಪನಿಯ ಶೇರು ಕೂಡ ಕೇವಲ 1 ವರ್ಷದಲ್ಲಿ 1,408% ರಿಟರ್ನ್ಸ್ ನೀಡಿದೆ. ಇಂದು ಇದರ ಬೆಲೆ ₹160.30. ಟೆಕ್ನಾಲಜಿಗೆ ಭಾರಿ ಬೇಡಿಕೆ ಇರುವುದರಿಂದ ಇದರ ತ್ರೈಮಾಸಿಕ ಲಾಭ ಕೂಡ 428% ಕ್ಕಿಂತ ಹೆಚ್ಚು ಹೆಚ್ಚಾಗಿದೆ.
56
SMT Engineering Share: ಪ್ಲಾಸ್ಟಿಕ್‌ನಿಂದ ಬಂಪರ್ ಲಾಭ
1984ರ ಈ ಹಳೆಯ ಕಂಪನಿ ಪ್ಲಾಸ್ಟಿಕ್ ಎಕ್ಸ್‌ಟ್ರೂಷನ್ ಸಿಸ್ಟಮ್ (ಪ್ಲಾಸ್ಟಿಕ್ ತಯಾರಿಕೆಗೆ ಸಂಬಂಧಿಸಿದ ಯಂತ್ರೋಪಕರಣ) ತಯಾರಿಸುತ್ತದೆ. ಒಂದು ವರ್ಷದ ಹಿಂದೆ ಇದರ ಬೆಲೆ ಕೇವಲ ₹15.8 ಇತ್ತು, ಆದರೆ ಇಂದು ಇದು ₹420ರಲ್ಲಿ ಭರ್ಜರಿಯಾಗಿ ಟ್ರೇಡ್ ಆಗುತ್ತಿದೆ. ಇದು ತನ್ನ ಹೂಡಿಕೆದಾರರಿಗೆ 2,685% ಲಾಭವನ್ನು ನೀಡಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ 466% ರಷ್ಟು ಭಾರೀ ಹೆಚ್ಚಳವನ್ನು ದಾಖಲಿಸಿದೆ. ಇದೇ ಕಾರಣಕ್ಕೆ ಷೇರು ನಾಗಾಲೋಟದಲ್ಲಿ ಓಡುತ್ತಿದೆ.
66
JTL Defence Share: ₹4ರ ಶೇರು ₹397ಕ್ಕೆ ಜಿಗಿತ
1992ರಿಂದ ಕಾರ್ಯನಿರ್ವಹಿಸುತ್ತಿರುವ JTL ಡಿಫೆನ್ಸ್ ಕಂಪನಿ ತಾಮ್ರ ಮತ್ತು ತಾಮ್ರಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುತ್ತದೆ. ಕಳೆದ ವರ್ಷ ಈ ಷೇರು ಕೇವಲ ₹4.81 ರಲ್ಲಿ ವಹಿವಾಟು ನಡೆಸುತ್ತಿತ್ತು, ಆದರೆ ಇಂದು ಅದು ₹397.20 ಕ್ಕೆ ತಲುಪಿದೆ. ಅಂದರೆ, 1 ವರ್ಷದಲ್ಲಿ ನಿಮ್ಮ ಹಣ 80 ಪಟ್ಟು ಹೆಚ್ಚಾಗಿದೆ. ಕಂಪನಿಯ ತ್ರೈಮಾಸಿಕ ಲಾಭ ಕೂಡ 182% ಕ್ಕಿಂತ ಹೆಚ್ಚು ಹೆಚ್ಚಾಗಿದ್ದು, ಕಂಪನಿ ಕೇವಲ ಕಾಗದದ ಮೇಲೆ ಅಲ್ಲ, ನಿಜವಾಗಿಯೂ ಬಲಿಷ್ಠ ವ್ಯಾಪಾರ ಮಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
ಗಮನಿಸಿ: ಈ ಲೇಖನದಲ್ಲಿ ನೀಡಿರುವ ಮಾಹಿತಿ ಕೇವಲ ತಿಳುವಳಿಕೆಗಾಗಿ ಮಾತ್ರ. ಇದನ್ನು ಹೂಡಿಕೆ ಸಲಹೆಯಾಗಿ ಪರಿಗಣಿಸಬಾರದು. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳು ರಿಸ್ಕ್‌ಗೆ ಒಳಪಟ್ಟಿವೆ. ಯಾವುದೇ ಸ್ಟಾಕ್‌ನಲ್ಲಿ ಹಣ ಹೂಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಅಥವಾ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.