ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಮತ್ತು ಮಾರಾಟ ಕುಸಿತದಿಂದಾಗಿ, ಪಿಜ್ಜಾ ಹಟ್‌ನ ಮೂಲ ಕಂಪನಿ ಯಮ್ ಬ್ರ್ಯಾಂಡ್ಸ್ ಅದನ್ನು 2.7 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಮಾರಾಟವು ಎರಡು ಭಾಗಗಳಲ್ಲಿ ನಡೆಯಲಿದೆ.
ಇಂದಿನ ಯುವ ಸಮುದಾಯಕ್ಕೆ ರುಚಿಯಾದ ಫಾಸ್ಟ್ ಫುಡ್ ನೀಡುತ್ತಿದ್ದ ಪಿಜ್ಜಾ ಹಟ್ ಮಾರಾಟಕ್ಕೆ ಸಿದ್ಧವಾಗಿದೆ. ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಪಿಜ್ಜಾ ಹಟ್ ಮಾರಾಟಕ್ಕೆ ಬಂದು ನಿಂತಿದೆ. ಪಿಜ್ಜಾ ಚೈನ್‌ನ ಮೂಲ ಕಂಪನಿಯಾಗಿರುವ "ಯಮ್ ಬ್ರ್ಯಾಂಡ್ಸ್" (Yum Brands) 2.7 ಕೋಟಿ ಬಿಲಿಯನ್ ಡಾಲರ್‌ಗೆ Pizza Hut ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
25
ಎರಡು ವಿಭಾಗಗಳಲ್ಲಿ ಮಾರಾಟ
ಪಿಜ್ಜಾ ಹಟ್ ಮಾರಾಟದ ಮಾಹಿತಿಯನ್ನು ನೀಡಿರುವ ಯಮ್ ಬ್ರ್ಯಾಂಡ್ಸ್ ಹಲವು ವಿಷಯಗಳನ್ನು ಹಂಚಿಕೊಂಡಿದೆ. ಈ ಮಾರಾಟ ಎರಡು ಭಾಗದಲ್ಲಿ ವಿಂಗಡನೆಯಾಗಲಿದೆ. ಒಪ್ಪಂದದ ಪ್ರಕಾರ ಚೀನಾ ಹೊರತುಪಡಿಸಿ ಪಿಜ್ಜಾ ಹಟ್‌ನ ಜಾಗತೀಕ ವ್ಯವಹಾರದ ಖಾಸಗಿ ಇಕ್ವಿಟಿ ಸಂಸ್ಥೆಯಾಗಿರುವ ಲಾಂಗ್‌ರೇಂಜ್ ಕ್ಯಾಪಿಟಲ್ (LongRange Capital) ಸುಮಾರು 1.5 ಬಿಲಿಯನ್ ಮೌಲ್ಯದ ಸ್ವಾಧೀನಪಡಿಸಿಕೊಳ್ಳಲಿದೆ. ಇನ್ನು ಚೀನಾದಲ್ಲಿರುವ ಪಿಜ್ಜಾ ಹಟ್ ರೆಸ್ಟೋರೆಂಟ್‌ಗಳನ್ನು ಯಮ್ ಚೀನಾ ಹೋಲ್ಡಿಂಗ್ಸ್ ಇಂಕ್ 1.2 ಬಿಲಿಯನ್ ಡಾಲರ್‌ಗೆ ತೆಗೆದುಕೊಳ್ಳಲಿದೆ.
35
ಚೀನಾ ಪಿಜ್ಜಾ ಹಟ್‌ಗೆ ಎರಡನೇ ಅತಿದೊಡ್ಡ ಮಾರುಕಟ್ಟೆ
2016ರಲ್ಲಿ ಯಮ್ ಬ್ರ್ಯಾಂಡ್‌ನಿಂದ ಬೇರ್ಪಟ್ಟ ಯಮ್ ಚೀನಾ ಇಂದು ಸ್ವತಂತ್ರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಅಮೆರಿಕಾ ಬಳಿಕ ಚೀನಾ ಪಿಜ್ಜಾ ಹಟ್‌ಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ ಯಮ್ ಚೀನಾ ಒಂದು ಭಾಗವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆ. ಚೀನಾದ ಮಾರುಕಟ್ಟೆ ಪ್ರಮಾಣ ಶೇ.19ರಷ್ಟಿದೆ ಎಂದು ವರದಿಯಾಗಿದೆ.
1858ರಲ್ಲಿ ಕ್ಯಾನ್ಸನ್‌ನ ವಿಚಿಟಾ ಎಂಬಲ್ಲಿ ಇಬ್ಬರು ಸೋದರರು ತಾಯಿಯಿಂದ 600 ಡಾಲರ್ ಸಾಲ ಪಡೆದು ಪಿಜ್ಜಾ ಹಟ್ ಆರಂಭಿಸಿದ್ದರು. ತಮ್ಮ ಅಂಗಡಿಯ ಸೈನ್‌ಬೋರ್ಡ್‌ನಲ್ಲಿ ಎಂಟು ಅಕ್ಷರಗಳಿಗೆ ಮಾತ್ರ ಸ್ಥಾನವಿರೋದರಿಂದ ಸೋದರರು Pizza Hut ಎಂದು ಹೆಸರಿಟ್ಟಿದ್ದರು. 1971ರ ವೇಳೆ ಪಿಜ್ಜಾ ಎಂಬ ಆಹಾರದ ಕಲ್ಪನೆ ಇಡೀ ವಿಶ್ವವನ್ನು ಆವರಿಸಿಕೊಂಡಿತ್ತು. 1977ರಲ್ಲಿ ಪೆಪ್ಸಿಕೋ ಮೊದಲ ಬಾರಿ ಪಿಜ್ಜಾಹಟ್ ಸಂಸ್ಥೆಯನ್ನು ವಶಕ್ಕೆ ಪಡೆದುಕೊಂಡಿತ್ತು. ಆನಂತರ 1997ರಲ್ಲಿ ಯಮ್ ಬ್ರ್ಯಾಂಡ್ ಆಗಿ ಬದಲಾಯ್ತು.
ಕಳೆದ ವರ್ಷ ಯಮ್ ಬ್ರ್ಯಾಂಡ್ ಮಾರಾಟ ಶೇ.5ರಷ್ಟು ಏರಿಕೆಯಾಗಿದ್ರೆ, ಪಿಜ್ಜಾ ಹಟ್‌ನ ಮಾರಾಟ ಶೇ.2ರಷ್ಟು ಕುಸಿತ ಕಂಡಿತ್ತು. ಇದೇ ವರ್ಷ ಫೆಬ್ರವರಿಯಲ್ಲಿ ಅಮೆರಿಕದಲ್ಲಿರುವ 250 ಔಟ್‌ಲೆಟ್‌ಗಳನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿತ್ತು. ಗ್ಲೋಬಲ್ ಡೇಟಾ ವ್ಯವಸ್ಥಾಪಕ ನಿರ್ದೇಶಕ ನೀಲ್ ಸೌಂಡರ್ಸ್ ಪ್ರಕಾರ, ಪಿಜ್ಜಾ ಹಟ್ ಬ್ರ್ಯಾಂಡ್‌ನ್ನು ಮಾರುಕಟ್ಟೆಯಲ್ಲಿ ಮುನ್ನಲೆಗೆ ತೆಗೆದುಕೊಂಡು ಬರಲು ಹೂಡಿಕೆಯ ಅಗತ್ಯವಿತ್ತು. ಆದ್ರೆ ಯಮ್ ಬ್ರ್ಯಾಂಡ್ ಹೊಸ ಹೂಡಿಕೆಗೆ ಮುಂದೆ ಬರಲಿಲ್ಲ ಎಂದು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.