ಅಂಬಾನಿ ಸದಾ ಹೇಳುವ ಈ ಮಾತುಗಳೇ ನನಗೆ ಸ್ಪೂರ್ತಿ: ಅವರಿಂದಲೇ ದೊಡ್ಡ ಜೀವನ ಪಾಠ ಕಲಿತೆ: ರಣ್‌ಬೀರ್ ಕಪೂರ್

Published : Feb 16, 2024, 04:05 PM IST

ಸಾಧನೆ ಮಾಡಿದ ಎಲ್ಲರ ಬದುಕಿನಲ್ಲಿ ಒಬ್ಬರು ಸ್ಪೂರ್ತಿದಾಯಕ ವ್ಯಕ್ತಿಗಳು ಎಂದಿರುತ್ತಾರೆ. ಅದೇ ರೀತಿ ಅನಿಮಲ್ ನಟ ರಣ್‌ಬೀರ್‌ ಕಪೂರ್‌ ಪಾಲಿಗೆ ಸ್ಪೂರ್ತಿ ತುಂಬಿದ ವ್ಯಕ್ತಿ ಯಾರು ಎಂಬುದನ್ನು ನಟ ರಣ್‌ಬೀರ್ ಕಪೂರ್ ಹೇಳಿಕೊಂಡಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರು ತನ್ನ ಪಾಲಿನ ಸ್ಪೂರ್ತಿದಾಯಕ ವ್ಯಕ್ತಿ ಎಂಬುದನ್ನು ನಟ ರಣ್ಬೀರ್ ಕಪೂರ್ ಹೇಳಿದ್ದಾರೆ. 

PREV
18
ಅಂಬಾನಿ ಸದಾ ಹೇಳುವ ಈ ಮಾತುಗಳೇ ನನಗೆ ಸ್ಪೂರ್ತಿ: ಅವರಿಂದಲೇ ದೊಡ್ಡ ಜೀವನ ಪಾಠ ಕಲಿತೆ: ರಣ್‌ಬೀರ್ ಕಪೂರ್

ಸಾಧನೆ ಮಾಡಿದ ಎಲ್ಲರ ಬದುಕಿನಲ್ಲಿ ಒಬ್ಬರು ಸ್ಪೂರ್ತಿದಾಯಕ ವ್ಯಕ್ತಿಗಳು ಎಂದಿರುತ್ತಾರೆ. ಅದೇ ರೀತಿ ಅನಿಮಲ್ ನಟ ರಣ್‌ಬೀರ್‌ ಕಪೂರ್‌ ಪಾಲಿಗೆ ಸ್ಪೂರ್ತಿ ತುಂಬಿದ ವ್ಯಕ್ತಿ ಯಾರು ಎಂಬುದನ್ನು ನಟ ರಣ್‌ಬೀರ್ ಕಪೂರ್ ಹೇಳಿಕೊಂಡಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಅವರು ತನ್ನ ಪಾಲಿನ ಸ್ಪೂರ್ತಿದಾಯಕ ವ್ಯಕ್ತಿ ಎಂಬುದನ್ನು ನಟ ರಣ್ಬೀರ್ ಕಪೂರ್ ಹೇಳಿದ್ದಾರೆ. 
 

28

ಪ್ರಸ್ತುತ ವೃತ್ತಿ ಹಾಗೂ ವೈಯಕ್ತಿಕ ಬದುಕು ಈ ಎರಡರಲ್ಲೂ ಒಳ್ಳೆ ಗ್ರಾಫ್‌ನಲ್ಲಿರುವ ರಣ್ಬೀರ್ ಕಪೂರ್ ಅವರು  ತಮ್ಮ ಇತ್ತೀಚೆಗೆ ರಿಲೀಸ್ ಆದ ಎನಿಮಲ್ ಸಿನಿಮಾದ ಯಶಸ್ಸಿನಿಂದ ಇನ್ನು ಹೊರಬಂದಿಲ್ಲ, ಒಂದಾದ ನಂತರ ಒಂದರಂತೆ ಈ ಸಿನಿಮಾಗೆ ಪ್ರಶಸ್ತಿಗಳು ಬರುತ್ತಿದ್ದು, ಇದರ ಜೊತೆ ನಟನಿಗೆ ಇತ್ತೀಚೆಗೆ ಮಹಾರಾಷ್ಟ್ರೀಯನ್  ಆಫ್ ದ ಇಯರ್ ಪ್ರಶಸ್ತಿ( ಮಹಾರಾಷ್ಟ್ರದ ವರ್ಷದ ವ್ಯಕ್ತಿ) ಲಭಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ.

38

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಣ್‌ಬೀರ ಕಪೂರ್ ತಮ್ಮ ಯಶಸ್ಸಿನ ಹಿಂದಿರುವ ಮಂತ್ರವನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಉದ್ಯಮಿ ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ತನ್ನ ಜೀವನದ ಇನ್ಸ್ಪಿರೇಷನ್ ಎಂದು ಹೇಳಿದ್ದಾರೆ ರಣ್‌ಬೀರ್,

48

ತಾನು ಅವರ ಜೀವನದಿಂದ ಅತ್ಯಂತ ದೊಡ್ಡ ಜೀವನ ಪಾಠವನ್ನು ಕಲಿತಿರುವುದಾಗಿ ರಣ್‌ಬೀರ್ ಕಪೂರ್ ತಮ್ಮ ಭಾಷಣದಲ್ಲಿ ಮುಕೇಶ್ ಅಂಬಾನಿ ಅವರನ್ನು ಹಾಡಿ ಹೊಗಳಿದ್ದಾರೆ. 

58

ನನ್ನ ಜೀವನದ ತುಂಬಾ ಸಿಂಪಲ್ ಆಗಿರುವ ಕೆಲ ಗುರಿಗಳನ್ನು ನಾನು ಇಲ್ಲಿ ಹೇಳುತ್ತಿದ್ದೇನೆ, ಮೊದಲನೇಯದಾಗಿ ಚೆನ್ನಾಗಿ ಕೆಲಸ ಮಾಡು, ವಿನಯದಿಂದ ಕೆಲಸ ಮಾಡು ಎಂಬುದು, ನಾನು ಮುಕೇಶ್ ಅಂಬಾನಿ ಅವರಿಂದ ತುಂಬಾ ಪ್ರೇರಣೆ ಪಡೆದುಕೊಂಡಿದ್ದೇನೆ,

68

ಒಬ್ಬ ಒಳ್ಳೆ ವ್ಯಕ್ತಿಯಾಗು ಒಳ್ಳೆ ಮಗನಾಗು ಒಳ್ಳೆ ತಂದೆಯಾಗು ಒಳ್ಳೆ ಪತಿ, ಒಳ್ಳೆ ಸೋದರ, ಒಳ್ಳೆಯ ಗೆಳೆಯ ಎಲ್ಲವೂ ಆಗು ಆದರೆ ಎಲ್ಲಕ್ಕಿಂತ ಮೊದಲು ಓರ್ವ ಉತ್ತಮ ನಾಗರಿಕನಾಗು  ಎಂಬುದು ನನ್ನ ಜೀವನದ ಚಿಂತನೆಯಾಗಿದೆ

78

. ನಾನೊಬ್ಬ ಮುಂಬೈಗನಾಗಿ ನನಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ತುಂಬಾ ಹೆಮ್ಮೆ ಇದೆ. ಇದಕ್ಕಾಗಿ ತುಂಬಾ ಧನ್ಯವಾದಗಳು ಎಂದು ರಣ್‌ಬೀರ್ ಹೇಳಿದ್ದಾರೆ. 

88

ರಣ್‌ಬೀರ್ ಕಪೂರ್ ಅವರು ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿಗೆ ಉತ್ತಮ ಗೆಳೆಯನೂ ಆಗಿದ್ದಾರೆ.  ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮದುವೆಗಾಗಿ ಅಂಬಾನಿ ಕುಟುಂಬ ಮೂರು ದಿನಗಳ ವಿವಾಹಪೂರ್ವ ಕಾರ್ಯಕ್ರಮಕ್ಕಾಗಿ ಸ್ವಿಟ್ಜರ್ಲ್ಯಾಂಡ್‌ಗೆ ತೆರಳಿದ್ದಾಗ ಇವರ ಜೊತೆ ರಣ್‌ಬೀರ್ ಕೂಡ ತೆರಳಿದ್ದರು ಅಲ್ಲದೇ ಅಂಬಾನಿ ಕುಟುಂಬದ ಫ್ಯಾನ್ ಪೇಜ್‌ನಲ್ಲೂ ರಣ್‌ಬೀರ್ ಆಕಾಶ್ ಜೊತೆಯಾಗಿರುವ ಫೋಟೋಗಳು ಆಗಾಗ ಕಾಣಿಸುತ್ತಿರುತ್ತವೆ. ಇದರ ಜೊತೆಗೆ 2022ರಲ್ಲಿ ರಣ್ಬೀರ್ ಆಲಿಯಾ ಮದ್ವೆಯಾದಾಗ ಈ ವಿವಾಹ ಸಮಾರಂಭದಲ್ಲಿ ಅಂಬಾನಿ ಕುಟುಂಬ ಬಹಳ ಆತ್ಮೀಯವಾಗಿ ಭಾಗವಹಿಸಿತ್ತು.
 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories