ಭಾರತದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್‌ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ನೆಟ್‌ವರ್ತ್‌ ಎಷ್ಟು?

Published : Feb 15, 2024, 02:32 PM ISTUpdated : Feb 15, 2024, 02:37 PM IST

ಯುವ ಉದ್ಯಮಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ತಮ್ಮ ಸ್ವಂತ ಶಕ್ತಿಯಿಂದ ಬಿಲಿಯನೇರ್ ಆದವರು. ಒಡಿಶಾದ ರಾಯಗಡದಲ್ಲಿ ಜನಿಸಿದ ಈ ಸೆಲ್ಪ್ ಮೇಡ್ ಬಿಲಿಯನೇರ್‌ ಅವರು ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಇಂಡಿಯಾ ಶೋದಲ್ಲಿ ಭಾಗವಹಿಸಿದ್ದು, ತಮ್ಮ ಆದಾಯ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.   

PREV
19
ಭಾರತದ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್‌ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ನೆಟ್‌ವರ್ತ್‌ ಎಷ್ಟು?

ಯುವ ಉದ್ಯಮಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ತಮ್ಮ ಸ್ವಂತ ಶಕ್ತಿಯಿಂದ ಬಿಲಿಯನೇರ್ ಆದವರು. ಒಡಿಶಾದ ರಾಯಗಡದಲ್ಲಿ ಜನಿಸಿದ ಈ ಸೆಲ್ಪ್ ಮೇಡ್ ಬಿಲಿಯನೇರ್‌ ಅವರು ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಇಂಡಿಯಾ ಶೋದಲ್ಲಿ ಭಾಗವಹಿಸಿದ್ದು, ತಮ್ಮ ಆದಾಯ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

29

2013ರಲ್ಲಿ 19 ವರ್ಷದ ರಿತೇಶ್‌ ಅಗರ್ವಾಲ್ ಅವರು ಒಯೋ ಸ್ಥಾಪಿಸಿದಾಗ ಅದು ಅತಿಥ್ಯ ಉದ್ಯಮದಲ್ಲಿ ಈ ರೀತಿ ಪ್ರಭಾವ ಬೀರಬಹುದು ಎಂದು ಯಾರೊಬ್ಬರು ಭಾವಿಸಿರಲಿಲ್ಲ,  ಏರ್‌ಬಿನ್‌ಬಿ ಮಾದರಿಯನ್ನು ಆಧರಿಸಿ ಬಂದ ಈ  ಒರಾವೆಲ್ ಸ್ಟೇಸ್ ಸ್ಟಾರ್ಟ್‌ಅಪ್‌ ಅತಿಥ್ಯ ಉದ್ಯಮದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. 

39

1.1 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅತಿಥ್ಯ ಉದ್ಯಮದ ಮುಂಚೂಣಿ ಉದ್ಯಮಿ ಎನಿಸಿದ ರಿತೇಶ್ ಅವರ ಈ ಪಯಣದ ಯಶಸ್ಸಿನ ಹಿಂದೆ ಅವರ ಅಚಲ ನಿರ್ಧಾರ ಹಾಗೂ ಉದ್ಯಮ ಶೀಲತೆಯ ಮನೋಭಾವ ಇದೆ.

49

ರಿತೇಶ್ ಪ್ರಸ್ತುತ 16,000 ಕೋಟಿ ಮೌಲ್ಯದ  ನಿವ್ವಳ ಆದಾಯವನ್ನು ಎಂಜಾಯ್ ಮಾಡ್ತಿದ್ದು, ಹೆಚ್ಚುವರಿಯಾಗಿ ಅವರ ಉದ್ಯಮದ ಬೆಳವಣಿಗೆಯ ಮೌಲ್ಯವೂ  ಕೇವಲ 4 ವರ್ಷದಲ್ಲಿ 100 ಶೇಕಡಾ ಏರಿಕೆ ಆಗಿದೆ. ಇಡೀ ಜಗತ್ತನ್ನು ಕಾಡಿದ ಕೋವಿಡ್ ಮಾರಿಯ ಸಮಯದಲ್ಲಿ ರಿತೇಶ್ ಅವರ ನಿವ್ವಳ ಮೌಲ್ಯ ಸುಮಾರು 8,000 ಕೋಟಿ ರೂ ಇತ್ತು. 

59

ಆದರೆ ಈಗ ಅವರ ಒಯೋ ರೂಮ್ಸ್‌  ಕಂಪನಿ 74 ಸಾವಿರ ಕೋಟಿ ಬೆಲೆ ಬಾಳುತ್ತಿದೆ.  ಇದರ ಜೊತೆಗೆ ಅವರು 100,000 ಡಾಲರ್‌ ಅನುದಾನ ಥಿಯೆಲ್ ಫೆಲೋಶಿಪ್ ಗೆದ್ದ ಮೊದಲ ಭಾರತೀಯ ನಿವಾಸಿಯಾಗಿರುವವ ಉದ್ಯಮಿ ಎನಿಸಿದ್ದಾರೆ. 

69

ರಿತೇಶ್ ಅವರು 2013ರಲ್ಲಿ ಓಯೋ ರೂಮ್ಸ್ ಆರಂಭಿಸಿದ್ದು, ಗುರ್ಗಾಂವ್‌ನಲ್ಲಿ ಅದು ಕೇವಲ 5 ಹೊಟೇಲ್‌ಗಳ ಸಹಭಾಗಿತ್ವದೊಂದಿಗೆ ಆಗ ಅವರು ತಮ್ಮ ಈ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಹಾಖಕಿದ ಬಂಡವಾಳ ಕೇವಲ 82 ಲಕ್ಷ, ಆದರೆ ಈಗ ಅದೆಲ್ಲವೂ ಇತಿಹಾಸ, 

79

ಅಲ್ಲದೇ 2018ರಲ್ಲಿ ಅವರು ತಮ್ಮ ಸಂಸ್ಥೆಗಾಗಿ 1 ಬಿಲಿಯನ್ ಡಾಲರ್ ಸಂಗ್ರಹಿಸಿದ್ದರು, ಇದು ಅವರನ್ನು ದೇಶದ ಅತ್ಯಂತ ಕಿರಿಯ ಕೋಟ್ಯಾಧಿಪತಿಯಾಗಿ ಮಾಡಿತ್ತು. ಇದರ ಜೊತೆಗೆ ಕೈಲಿ ಜೆನ್ನರ್ ನಂತರ ವಿಶ್ವದ ಎರಡನೇ ಸೆಲ್ಫ್ ಮೇಡ್ (ಸ್ವಯಂ ನಿರ್ಮಿತ) ಕೋಟ್ಯಾಧಿಪತಿ ಎನಿಸಿದ್ದಾರೆ. 

89

ಅಮೆರಿಕಾದ ಮಾಜಿ ಪ್ರಧಾನಿ ಡೊನಾಲ್ಡ್ ಟ್ರಂಪ್ ಈ ಹಿಂದೆ ಭಾರತಕ್ಕೆ ಬಂದಿದ್ದ ವೇಳೆ ರಿತೇಶ್ ಕೆಲ ಯುವ ಉದ್ಯಮಿಗಳ ಜೊತೆ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅಮೆರಿಕಾಗೆ ಆಗಮಿಸಿ ಬಂಡವಾಳ ಹೂಡುವಂತೆ ಟ್ರಂಪ್ ಮನವಿ ಮಾಡಿದ್ದರು.
 

99

ಓಯೋ ಭಾರತೀಯ ಬಹುರಾಷ್ಟ್ರೀಯ ಆತಿಥ್ಯ ಸರಪಳಿಯಾಗಿದ್ದು ಆನ್‌ಲೈನ್‌ ಮೂಲಕ ಹೊಟೇಲ್ ಮನೆಗಳನ್ನು ವಾಸಕ್ಕಾಗಿ ಬುಕ್ ಮಾಡಬಹುದಾಗಿದೆ.

Read more Photos on
click me!

Recommended Stories