ಬಿಲಿಯನೇರ್‌ ಮಗಳು ಕೊಡುಗೈ ದಾನಿ, ಲಕ್ಸುರಿ ಲೈಫ್‌ಸ್ಟೈಲ್‌ ಫಾಲೋ ಮಾಡಿದ್ರೂ ದೇಣಿಗೆ ಕೊಡೋದ್ರಲ್ಲಿ ನಂ.1

First Published | Feb 16, 2024, 11:11 AM IST

ಜಗತ್ತಿನಲ್ಲಿ ಹಲವಾರು ಶ್ರೀಮಂತ ವ್ಯಕ್ತಿಗಳಿದ್ದಾರೆ. ಆದರೆ ಮಿಲಿಯನೇರ್‌, ಬಿಲಿಯನೇರ್‌ಗಳಾಗಿದ್ರೂ ಎಲ್ಲರೂ ದೇಣಿಗೆ ನೀಡುವುದಿಲ್ಲ. ಆದರೆ ಪಾಕಿಸ್ತಾನದ ಖ್ಯಾತ ಬಿಲಿಯನೇರ್ ಪುತ್ರಿ ಲಕ್ಸುರಿಯಸ್‌ ಲೈಫ್‌ಸ್ಟೈಲ್‌ ಹೊಂದಿರುವ ಜೊತೆಗೆ ಕೊಡುಗೈ ದಾನಿಗೂ ಹೆಸರುವಾಸಿಯಾಗಿದ್ದಾರೆ.

ಜಗತ್ತಿನಲ್ಲಿ ಹಲವಾರು ಶ್ರೀಮಂತ ವ್ಯಕ್ತಿಗಳಿದ್ದಾರೆ. ಆದರೆ ಮಿಲಿಯನೇರ್‌, ಬಿಲಿಯನೇರ್‌ಗಳಾಗಿದ್ರೂ ಎಲ್ಲರೂ ದೇಣಿಗೆ ನೀಡುವುದಿಲ್ಲ. ವಿಶ್ವದ ರಿಚೆಸ್ಟ್‌ ಲಿಸ್ಟ್‌ನಲ್ಲಿ ಇರುವವರಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಉದಾರ ಕೊಡುಗೈ ದಾನಿಗಳಾಗಿದ್ದಾರೆ. ಅವರಲ್ಲಿ ಪಾಕ್‌ನ ಶ್ರೀಮಂತ ವ್ಯಕ್ತಿಯ ಮಗಳಾದ ಶಾನ್ನಾ ಖಾನ್ ಮೊದಲ ಸ್ಥಾನದಲ್ಲಿ ಬರುತ್ತಾರೆ.

ಪಾಕಿಸ್ತಾನದ ಖ್ಯಾತ ಬಿಲಿಯನೇರ್ ಶಾಹಿದ್ ಖಾನ್. ಲಕ್ಸುರಿಯಸ್‌ ಲೈಫ್‌ಸ್ಟೈಲ್‌ ಮತ್ತು ಕ್ರೀಡಾ ಹೂಡಿಕೆಗೆ ಹೆಸರುವಾಸಿಯಾಗಿದ್ದಾರೆ. ಬರೋಬ್ಬರಿ  97,276 ಕೋಟಿಗೂ ಮೀರಿದ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅವರ ಮಗ, ಟೋನಿ ಖಾನ್, ಅವರ ತಂದೆಯೊಂದಿಗೆ ಆಲ್ ಎಲೈಟ್ ವ್ರೆಸ್ಲಿಂಗ್ (AEW) ಸಹ-ಮಾಲೀಕತ್ವವನ್ನು ಒಳಗೊಂಡಂತೆ ಅವರ ಕ್ರೀಡಾ ಉದ್ಯಮಗಳಲ್ಲಿ ಯಶಸ್ವೀಯಾಗಿ ತೊಡಗಿಸಿಕೊಂಡಿದ್ದಾರೆ.

Tap to resize

ಶಾಹಿದ್ ಖಾನ್ ಪುತ್ರಿ ಶಾನ್ನಾ ಖಾನ್ ಉದಾರತೆಗೆ ಹೆಸರುವಾಸಿಯಾಗಿದ್ದಾರೆ. ಹಲವಾರು ದತ್ತಿ ಕಾರ್ಯಗಳಿಗೆ ಶನ್ನಾ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತಾರೆ. ಆದರೂ, ಇತ್ತೀಚೆಗೆ ಶಾನ್ನಾ, ಇಲಿನಾಯ್ಸ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಬೋಧನಾ ಆಸ್ಪತ್ರೆಗೆ 123 ಕೋಟಿ ರೂ.ಗಳ ಗಣನೀಯ ದೇಣಿಗೆ ನೀಡುವ ಮೂಲಕ ಸುದ್ದಿ ಮಾಡಿದರು. 

ಶಾನ್ನಾ, 20 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಈ ನಿವ್ವಳ ಮೌಲ್ಯವು ಭಾರತದ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಮಕ್ಕಳದಾ ಇಶಾ ಮತ್ತು ಆಕಾಶ್ ಅಂಬಾನಿಯಂತಹ ವ್ಯಕ್ತಿಗಳ ಬೃಹತ್ ಸಂಪತ್ತಿಗೆ ಹೋಲಿಸಿದರೆ ತುಂಬಾ ಕಡಿಮೆ.

ಬಿಲಿಯನೇರ್ ಉದ್ಯಮಿಗಳ ಸಂಖ್ಯೆಗೆ ಬಂದಾಗ ಪಾಕಿಸ್ತಾನದಲ್ಲಿ ಶ್ರೀಮಂತರ ಸಂಖ್ಯೆ ತುಂಬಾ ಕಡಿಮೆಯಿದೆ. ಉದಾಹರಣೆಗೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವು ಸುಮಾರು 90 ಬಿಲಿಯನ್ ಆಗಿದ್ದರೆ, ಪಾಕಿಸ್ತಾನದ ಶ್ರೀಮಂತ ವ್ಯಕ್ತಿ ಶಾಹಿದ್ ಖಾನ್ ಅವರ ನಿವ್ವಳ ಮೌಲ್ಯ ಕೇವಲ 12 ಬಿಲಿಯನ್ ಆಗಿದೆ.

ಆದರೂ ಶಾನ್ನಾ ಖಾನ್‌ ತಮ್ಮ ದೇಣಿಗೆಯಿಂದ ಪ್ರಸಿದ್ಧಿಯಾಗಿದ್ದಾರೆ. ಶಾನ್ನಾ, ವುಲ್ಫ್ ಪಾಯಿಂಟ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಸ್ಟಿನ್ ಮ್ಯಾಕ್‌ಕೇಬ್ ಅವರನ್ನು ವಿವಾಹವಾದರು. ಶಾನ್ನಾ, ಜಾಗ್ವಾರ್ಸ್ ಫೌಂಡೇಶನ್ ಮೂಲಕ ಕಾರ್ಯನಿರ್ವಹಿಸುತ್ತಾರೆ. ಇದು ಬಡ ಕುಟುಂಬಗಳಿಗೆ ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸುತ್ತಾರೆ.

USAಯ ಇಲಿನಾಯ್ಸ್‌ನಲ್ಲಿ ಹುಟ್ಟಿ ಬೆಳೆದ ಶಾನ್ನಾ ತನ್ನ ಪಾಕಿಸ್ತಾನಿ ಪರಂಪರೆಯೊಂದಿಗೆ ಬಲವಾದ ಸಂಬಂಧವನ್ನು ನಿರ್ವಹಿಸುತ್ತಾರೆ. ಲೋಕೋಪಕಾರಿ, ವಾಣಿಜ್ಯೋದ್ಯಮಿ ಮತ್ತು ಕಾಂಗ್ರೆಸ್ ಪ್ರತಿನಿಧಿಯಾಗಿ ಬಹುಮುಖಿ ವೃತ್ತಿಜೀವನದ ಹೊಂದಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ಕೈ ಜೋಡಿಸುತ್ತಾರೆ.

ಆಕೆಯ ನಿವ್ವಳ ಮೌಲ್ಯವು ಅಂಬಾನಿ ವಂಶಸ್ಥರಿಗೆ ಪ್ರತಿಸ್ಪರ್ಧಿಯಾಗದಿದ್ದರೂ, ಶಾನ್ನಾ ಖಾನ್ ಅವರ ದತ್ತಿ ಕಾರ್ಯಗಳಿಗೆ ಅಚಲವಾದ ಸಮರ್ಪಣೆಯು ಖಾನ್ ಕುಟುಂಬದೊಳಗೆ ಗಮನಾರ್ಹ ವ್ಯಕ್ತಿಯಾಗಿ ಅವರನ್ನು ರೂಪಿಸಿದೆ.

Latest Videos

click me!