ಮುಕೇಶ್ ಅಂಬಾನಿ ಪ್ರತಿ ದಿನ ಪರ್ಸ್‌ನಲ್ಲಿ ಎಷ್ಟು ಹಣ ಇಟ್ಟುಕೊಂಡಿರುತ್ತಾರೆ? ಸೀಕ್ರೆಟ್ ಬಹಿರಂಗ

Published : Oct 07, 2025, 11:25 AM IST

ಮುಕೇಶ್ ಅಂಬಾನಿ ಪ್ರತಿ ದಿನ ಪರ್ಸ್‌ನಲ್ಲಿ ಎಷ್ಟು ಹಣ ಇಟ್ಟುಕೊಂಡಿರುತ್ತಾರೆ? ಸೀಕ್ರೆಟ್ ಬಹಿರಂಗವಾಗಿದೆ.ಜನಸಾಮಾನ್ಯರು ಯುಪಿಐ ಕ್ರಾಂತಿ ಬಳಿಕವೂ ಕನಿಷ್ಠ 100 ರೂಪಾಯಿ ಆದರೂ ಇಟ್ಟುಕೊಳ್ಳುತ್ತಾರೆ,, ದೇಶದ ಶ್ರೀಮಂತ ಮುಕೇಶ್ ಅಂಬಾನಿ ಪರ್ಸ್‌ನಲ್ಲಿ ಎಷ್ಟಿರುತ್ತೆ ಹಣ? 

PREV
15
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನಗದು ಸೀಕ್ರೆಟ್

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನಗದು ಸೀಕ್ರೆಟ್

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಟ್ಟು ಆಸ್ತಿ ಬರೋಬ್ಬರಿ 108.3 ಬಿಲಿಯನ್ ಅಮೆರಿಕನ್ ಡಾಲರ್. ಏಷ್ಯಾದ ಶ್ರೀಮಂತ ಪಟ್ಟ ಪಡೆದಿರುವ ಮುಕೇಶ್ ಅಂಬಾನಿ ಆ್ಯಂಟಿಲಿಯಾ ಮನೆ 16,640 ಕೋಟಿ ರೂಪಾಯಿ . ಮುಕೇಶ್ ಅಂಬಾನಿ ರೊಲ್ಸ್ ರಾಯ್ಸ್ ಕಾರಿನಲ್ಲಿ ಪ್ರಯಾಣ ಮಾಡಿದರೆ, ಅಂಬಾನಿ ಭದ್ರತೆಗೆ ನಿಯೋಜನೆ ಮಾಡಿರುವ ಭದ್ರತಾ ಪಡೆ ರೇಂಜ್ ರೋವರ್ ಸೇರಿದಂತೆ ಐಷಾರಾಮಿ ಕಾರಿನಲ್ಲಿ ಬೆಂಗಾವಲು ನೀಡುತ್ತದೆ. ಇಷ್ಟು ಐಷಾರಾಮಿ ಜೀವನದಲ್ಲಿರುವ ಮುಕೇಶ್ ಅಂಬಾನಿ ಪರ್ಸ್‌ನಲ್ಲಿ ಎಷ್ಟು ನಗದು ಹಣ ಇಟ್ಟಿರುತ್ತಾರೆ?

25
ಪರ್ಸ್‌ನಲ್ಲಿ ಎಷ್ಟಿದೆ ದುಡ್ಡು?

ಪರ್ಸ್‌ನಲ್ಲಿ ಎಷ್ಟಿದೆ ದುಡ್ಡು?

ಸಂದರ್ಶನ ಒಂದರಲ್ಲಿ ಮುಕೇಶ್ ಅಂಬಾನಿ ಪರ್ಸ್‌ನಲ್ಲಿರುವ ದುಡ್ಡು ಕುರಿತು ಮಾತನಾಡಿದ್ದಾರೆ. ಹಣ ಒಂದು ಸಂಪನ್ಮೂಲ. ಈ ಸಂಪನ್ಮೂಲ ಬಳಸಿ ರಿಲಯನ್ಸ ಇಂಡಸ್ಟ್ರಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇನೆ. ಇದಕ್ಕಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಆದರೆ ವೈಯುಕ್ತಿತವಾಗಿ ನನಗೆ ಹಣವೇ ಎಲ್ಲವೂ ಅಲ್ಲ. ನಾನು ಪರ್ಸ್ ಇಟ್ಟುಕೊಳ್ಳುವುದಿಲ್ಲ. ನನ್ನ ಜೇಬಿನಲ್ಲಿ ಹಣವೂ ಇರುವುದಿಲ್ಲ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

35
ಮುಕೇಶ್ ಅಂಬಾನಿ ಪಾವತಿ ಹೇಗೆ?

ಮುಕೇಶ್ ಅಂಬಾನಿ ಪಾವತಿ ಹೇಗೆ?

ಮುಕೇಶ್ ಅಂಬಾನಿ ಯಾವತ್ತೂ ಪರ್ಸ್ ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಜೊತೆಗೆ ತಾವು ಜೇಬಿನಲ್ಲೂ ಹಣ ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ತಮ್ಮ ಬಳಿ ಇರುವ ಆಪ್ತರು, ಸೆಕ್ರೆಟರಿ ಏನಾದರು ಪಾವತಿ ಇದ್ದರೆ ಮಾಡುತ್ತಾರೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ದೇವಸ್ಥಾನಕ್ಕೆ ಅಥವಾ ದೇಣಿಗೆ ನೀಡುವಾಗ ಮೊದಲೆ ನಿರ್ಧರಿಸಿ ಹಣ ಅಥವಾ ಚೆಕ್ ರೆಡಿ ಮಾಡಿಕೊಂಡಿರುತ್ತೇವೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

45
ಶಾಲಾ ದಿನಗಳಲ್ಲೂ ಹಣ ಇಟ್ಟುಕೊಂಡಿಲ್ಲ

ಶಾಲಾ ದಿನಗಳಲ್ಲೂ ಹಣ ಇಟ್ಟುಕೊಂಡಿಲ್ಲ

ಶಾಲಾ ದಿನಗಳಲ್ಲಿ ತಂದೆ ಧೀರೂಬಾಯಿ ಅಂಬಾನಿ ಶಿಸ್ತು ಪಾಲಿಸಲು ಪ್ರಮುಖ ಆದ್ಯತೆ ನೀಡುತ್ತಿದ್ದರು. ಹೀಗಾಗಿ ಶಾಲೆಗೆ ತೆರಳುವಾಗ ತಮಗೆ ಯಾವುದೇ ಹಣ ನೀಡುತ್ತಿರಲಿಲ್ಲ. ಅಂದು ನಮಗೆ ಶಾಲೆಗೆ ಹೋಗುವಾಗ ಜೇಬಿನಲ್ಲಿ ಹಣ ಇರಬೇಕು ಎಂದು ಇರಲಿಲ್ಲ. ಆ ಶಿಸ್ತು ಮೈಗೂಡಿತ್ತು. ಹೀಗಾಗಿ ಶಾಲಾ, ಕಾಲೇಜು ದಿನಗಳಲ್ಲೂ ಯಾವುದೇ ಹಣ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

55
ಅಂಬಾನಿ ಮಾಧ್ಯಮ ಇಷ್ಟವಿಲ್ಲ

ಅಂಬಾನಿ ಮಾಧ್ಯಮ ಇಷ್ಟವಿಲ್ಲ

ಮುಕೇಶ್ ಅಂಬಾನಿಗೆ ಮಾಧ್ಯಮ ಇಷ್ಟವಿಲ್ಲ ಎಂದಿದ್ದಾರೆ. ಮಾಧ್ಯಮಗಳು ಬಿಲೇನಿಯರ್, ಕೋಟ್ಯಾಧಿಪತಿ ಸೇರಿದಂತೆ ಹಲವು ಹೆಸರಿನಿಂದ ಕರೆಯುುದು ಇಷ್ಟವಿಲ್ಲ. ತಾನು ಸಾಮಾನ್ಯನಾಗಿ ಇರಲು ಇಷ್ಟಪಡುತ್ತೇನೆ. ಕೆಲ ನಿರ್ಬಂಧಗಳು ಇದೆ. ಆದರೆ ಇದನ್ನು ಹೊರತುಪಡಿಸಿದರೆ ತಾನು ಸಾಮಾನ್ಯ ವ್ಯಕ್ತಿಯಾಗಿಯೇ ಇರುತ್ತೇನೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

Read more Photos on
click me!

Recommended Stories