ಚಿನ್ನದ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ: 6ನೇ ದಿನವೂ ಇಳಿಕೆ; ಇಂದು 8 ಸಾವಿರಕ್ಕೂ ಅಧಿಕ ಕಡಿಮೆಯಾದ ದರ

Published : Oct 23, 2025, 11:03 AM IST

ಭಾರತದಲ್ಲಿ ಕಳೆದ ಆರು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 8 ಸಾವಿರ ರೂ.ಗೂ ಅಧಿಕ ಕುಸಿತವಾಗಿದ್ದು, ಬೆಳ್ಳಿ ದರವೂ ಗಣನೀಯವಾಗಿ ಕಡಿಮೆಯಾಗಿದೆ. 

PREV
16
ಚಿನ್ನದ ಬೆಲೆಯಲ್ಲಿ ಕುಸಿತ

ಭಾರತದಲ್ಲಿ ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ 8 ಸಾವಿರ ರೂ.ಗೂ ಅಧಿಕ ಕಡಿಮೆಯಾಗಿದೆ. ಕಳೆದ ಆರು ದಿನಗಳಲ್ಲಿ 7,050 ರೂ.ವರಗೆ ದರ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

26
ಬೆಳ್ಳಿ ದರ

ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತದೆ. ಹಾಗೆಯೇ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ. ಇಂದು ಚಿನ್ನದ ಜೊತೆ ಬೆಳ್ಳಿ ದರವೂ ಗಣನೀಯವಾಗಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 1,000 ರೂ.ವರೆಗೂ ಕಡಿಮೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಮಾಹಿತಿ ಇಲ್ಲಿದೆ.

46
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 12,508 ರೂಪಾಯಿ

8 ಗ್ರಾಂ: 1,00,064 ರೂಪಾಯಿ

10 ಗ್ರಾಂ: 1,25,080 ರೂಪಾಯಿ

100 ಗ್ರಾಂ: 12,50,800 ರೂಪಾಯಿ

56
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ

ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,15,000 ರೂಪಾಯಿ, ಮುಂಬೈ: 1,14,650 ರೂಪಾಯಿ, ದೆಹಲಿ: 1,14,800 ರೂಪಾಯಿ, ಕೋಲ್ಕತ್ತಾ: 1,14,650 ರೂಪಾಯಿ, ಬೆಂಗಳೂರು: 1,14,650 ರೂಪಾಯಿ, ಹೈದರಾಬಾದ್: 1,14,650 ರೂಪಾಯಿ, ವಡೋದರ: 1,14,700 ರೂಪಾಯಿ

ಇದನ್ನೂ ಓದಿ: ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​ 

66
ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆ ಬೆಳ್ಳಿ ದರವೂ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಈಗಾಗಲೇ ಬೆಳ್ಳಿ ಸಹ ಬೆಲೆ ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇಂದಿನ ಬೆಳ್ಳಿ ದರದ ಮಾಹಿತಿ ಇಲ್ಲಿದೆ.

10 ಗ್ರಾಂ: 1,590 ರೂಪಾಯಿ

100 ಗ್ರಾಂ: 15,900 ರೂಪಾಯಿ

1000 ಗ್ರಾಂ: 1,59,000 ರೂಪಾಯಿ

ಇದನ್ನೂ ಓದಿ: ವಾರ್ಷಿಕ 694 ಕೋಟಿ ರೂ ಇದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಸ್ಯಾಲರಿ ಹೈಕ್,ಈಗ ಎಷ್ಟು?

Read more Photos on
click me!

Recommended Stories