ತಿಂಗಳ ಮೊದಲ ವಾರದಲ್ಲಿಯೇ 10,400 ರೂಪಾಯಿ ಇಳಿಕೆ: ಚಿನ್ನಾಭರಣ ಪ್ರಿಯರು ಫುಲ್ ಖುಷ್!

Published : Jul 07, 2025, 10:27 PM IST

Gold And Silver Price: ಜುಲೈ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 10,400 ರೂ.ಗಳಷ್ಟು ಇಳಿಕೆಯಾಗಿದ್ದು, ಖರೀದಿದಾರರಿಗೆ ಸಂತಸ ತಂದಿದೆ. 

PREV
15
10 ಸಾವಿರ ರೂ.ಗೂ ಅಧಿಕ ಇಳಿಕೆ

ಬೆಲೆ ಎಷ್ಟೇ ಆದ್ರೂ ಆಭರಣಗಳ ಮೇಲಿನ ವ್ಯಾಮೋಹ ಕೊಂಚವೂ ಕಡಿಮೆಯಾಗಲ್ಲ. ಚಿನ್ನದ ಬೆಲೆ ಹೆಚ್ಚಾದಂತೆ ಬೇಡಿಕೆಯೂ ಹೆಚ್ಚಾಗುತ್ತದೆ. ಈ ತಿಂಗಳ ಮೊದಲ ವಾರದಲ್ಲಿಯೇ ಚಿನ್ನದ ಬೆಲೆಯಲ್ಲಿ 10 ಸಾವಿರ ರೂಪಾಯಿಗೂ ಅಧಿಕ ಇಳಿಕೆಯಾಗಿದೆ.

25
ಈ ವಿಷಯ ಗೊತ್ತಿರಲಿ

22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ. ಹಾಗಾಗಿ ಯಾವ ಚಿನ್ನವನ್ನು ಖರೀದಿ ಮಾಡುತ್ತಿದ್ದೇವೆ ಎಂದು ತಿಳಿದುಕೊಂಡಿರಬೇಕು. ಚಿನ್ನವನ್ನ ಖರೀದಿಗೂ ಮುನ್ನ ಬೆಲೆ ಎಷ್ಟು? ನಿಮ್ಮ ಬಜೆಟ್ ಎಷ್ಟು? ಆ ಹಣಕ್ಕೆ ಎಷ್ಟು ಚಿನ್ನ ಸಿಗುತ್ತೆ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು.

35
ಜುಲೈನಲ್ಲಿ ಎಷ್ಟು ಇಳಿಕೆ?

ಜುಲೈ 7ರವರೆಗೆ ಚಿನ್ನದ ಬೆಲೆಯಲ್ಲಿ ಎರಡು ಬಾರಿ ಇಳಿಕೆಯಾಗಿದೆ. ಎರಡು ದಿನದಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 10,400 ರೂ.ಗಳಷ್ಟು ಇಳಿಕೆಯಾಗಿದೆ.

ಜುಲೈ 4ರಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 6,000 ರೂ. ಇಳಿಕೆಯಾಗಿತ್ತು.

ಜುಲೈ 7ರಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 5,400 ರೂ. ಇಳಿಕೆಯಾಗಿದೆ.

45
ಜುಲೈನಲ್ಲಿ ಎಷ್ಟು ಏರಿಕೆ?

ಜುಲೈ 7ರವರೆಗೆ ಚಿನ್ನದ ಬೆಲೆಯಲ್ಲಿ ನಾಲ್ಕು ಬಾರಿ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಯಾವ ದಿನ ಎಷ್ಟು ಏರಿಕೆಯಾಗಿದೆ ಎಂದು ನೋಡೋಣ ಬನ್ನಿ.

ಜುಲೈ 1: 1050 ರೂ.

ಜುಲೈ 2: 450 ರೂ.

ಜುಲೈ 3: 400 ರೂ.

ಜುಲೈ 5: 100 ರೂ.

55
ಬೆಳ್ಳಿ ಬೆಲೆ

ಇನ್ನು ಜುಲೈ 6ರಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗಿರಲಿಲ್ಲ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿರೋದನ್ನು ಕಾಣಬಬಹುದು. ಜುಲೈ ಮೊದಲ ವಾರದಲ್ಲಿ ಒಂದು ಬಾರಿ ಬೆಲೆ ಇಳಿಕೆಯಾಗಿದೆ. ಕಳೆದ ಹಲವು ದಿನಗಳಿಂದ ಬೆಳ್ಳಿ 1 ಲಕ್ಷದ ಮೇಲೆಯೇ ಇದೆ.

Read more Photos on
click me!

Recommended Stories