ದಿನ 3 ಜಿಬಿ, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಉಚಿತ, ಏರ್ಟೆಲ್ 84 ವ್ಯಾಲಿಟಿಡಿ ಪ್ಲಾನ್ ಘೋಷಣೆ

Published : Jul 02, 2025, 05:23 PM IST

ಏರ್‌ಟೆಲ್ ಇದೀಗ ಭರ್ಜರಿ ಆಫರ್ ಮೂಲಕ ಪ್ಲಾನ್ ಘೋಷಿಸಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ದಿನ 3 ಜಿಬಿ ಉಚಿತ ಡೇಟಾ, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಸೇರಿದಂತೆ ಹಲವು ಸೌಲಭ್ಯವಿದೆ. ಕೈಗೆಟುಕುವ ದರದ ಈ ಪ್ಲಾನ್ ಡಿಟೇಲ್ ಇಲ್ಲಿದೆ.

PREV
16

ವೆಬ್ ಸೀರಿಸ್ ಸೇರಿದಂತೆ ಮೊಬೈಲ್ ಮೂಲಕ ಒಂದಷ್ಟು ಸೀರಿಸ್ ಅಥವ ಮನರಂಜನೆ ವೀಕ್ಷಿಸಲು ಹೆಚ್ಚಿನ ಡೇಟಾ ಅವಶ್ಯಕತೆ ಇದೆ. ಜೊತೆಗೆ ಉಚಿತವಾಗಿ ಹಲವು ಆ್ಯಪ್ ಸಬ್‌ಸ್ಕ್ರಪ್ಶನ್ ಅವಶ್ಯಕತೆ ಇದೆ. ಜನರ ಬೇಡಿಕೆಯನ್ನು ಗಮನಿಸಿದ ಏರ್‌ಟೆಲ್ ಇದೀಗ ಹೊಸ ಪ್ಲಾನ್ ಘೋಷಿಸಿದೆ. ವಿಶೇಷ ಅಂದರೆ ಇದು ಸರಿಸುಮಾರು 3 ತಿಂಗಳ ಪ್ಲಾನ್ ಅಂದರೆ 84 ದಿನ ವ್ಯಾಲಿಡಿಟಿ ಇರಲಿದೆ. ಜೊತೆಗೆ ಉಚಿತ ಡೇಟಾ, ಉಚಿತ ನೆಟ್‌ಫ್ಲಿಕ್ಸ್ ಸೇರಿದಂತೆ ಇತರ ಸೌಲಭ್ಯಗಳು ಈ ಆಫರ್‌ನಲ್ಲಿದೆ. ಏರ್‌ಟೆಲ್ ಇದೀಗ ಒಂದು ತಿಂಗಳ ಪ್ಲಾನ್‌ನಿಂದ ಹಿಡಿದು 3 ತಿಂಗಳ ವ್ಯಾಲಿಟಿಡಿ ಪ್ಲಾನ್ ವರೆಗಿನ ರೀಚಾರ್ಜ್ ಆಫರ್ ಘೋಷಿಸಿದೆ. ಈ ಕುರಿತು ವಿವರ ಇಲ್ಲಿದೆ.

26

ಹೊಸ ಪ್ಲಾನ್ ಏ‌ರ್‌ಟೆಲ್ 449 ರೂಪಾಯಿ ರೀಚಾರ್ಜ್ ಪ್ಲಾನ್

ಏರ್‌ಟೆಲ್ ಇದೀಗ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡೇಟಾ ಸೇರಿದಂತೆ ಗ್ರಾಹಕರಿಗೆ ಮನರಂಜನೆ ಪ್ಲಾನ್ ನೀಡುತ್ತಿದೆ. ಈ ಪೈಕಿ ಮೊದಲ ಪ್ಲಾನ್ 449 ರೂಪಾಯಿ ರೀಚಾರ್ಜ್ ಪ್ಲಾನ್. ಇದು 28 ದಿನ ವ್ಯಾಲಿಟಿಡಿ ಪ್ಲಾನ್ ಆಗಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಪ್ರತಿ ದಿನ 3 ಜಿಬಿ ಡೇಟಾ ಉಚಿತವಾಗಿ ಪಡೆಯಲಿದ್ದಾರೆ. ಒಟ್ಟ 22 ಒಟಿಟಿ ಪ್ಲಾಟ್‌ಫಾರ್ಮ್ ಉಚಿತ ಪ್ರವೇಶ ಸಿಗಲಿದೆ. ಸೋನಿ ಲೈವ್ ಸೇರಿದಂತೆ ಹಲವು ಸೌಲಭ್ಯ ಇದರಲ್ಲಿದೆ.

36

598 ರೂಪಾಯಿ ರೀಚಾರ್ಜ್ ಪ್ಲಾನ್

ಈ ಪ್ಲಾನ್ ರೀಚಾರ್ಜ್ ಮಾಡಿದರೆ ಪ್ರತಿ ದಿನ 2 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಸೌಲಭ್ಯ ನೀಡಲಿದೆ. ಇದರ ಜೊತೆಗೆ ನೆಟ್‌ಫ್ಲಿಕ್ಸ್ ಬೇಸಿಕ್ ಹಾಗೂ ಜಿಯೋ ಹಾಟ್‌ಸ್ಟಾರ್ ಸೇರಿದಂತೆ ಇತರ ಕೆಲ ಪ್ಲಾಟ್‌ಫಾರ್ಮ್ ಅವಕಾಶ ಸಿಗಲಿದೆ. ಈ ಪ್ಲಾನ್ ರಿಚಾರ್ಜ್ ಮಾಡಿದರೆ 28 ದಿನ ವ್ಯಾಲಿಟಿಡಿ ಸಿಗಲಿದೆ.

46

838 ರೂಪಾಯಿ ರೀಚಾರ್ಜ್ ಪ್ಲಾನ್

ಈ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಪ್ರತಿ ದಿನ 3 ದಿನ ಉಚಿತ ಡೇಟಾ ಸೌಲಭ್ಯ ಸಿಗಲಿದೆ. ಜೊತೆಗೆ ಎಲ್ಲಾ ನೆಟ್‌ವರ್ಕ್‌ಗೆ ಅನಿಯಮಿತಿ ಕರೆ ಸೌಲಭ್ಯವೂ ಸಿಗಲಿದೆ. ಇದರ ಜೊತೆಗೆ ಅಮೇಜಾನ ಪ್ರೈಮ್ ಲೈಟ್ ಸಂಪೂರ್ಣವಾಗಿ ಉಚಿತವಾಗಿದೆ. ಇಷ್ಟೇ ಅಲ್ಲ 56 ದಿನಗಳ ವ್ಯಾಲಿಟಿಡಿ ಅಂದರೆ ಸರಿಸುಮಾರು 2 ತಿಂಗಳ ವ್ಯಾಲಿಟಿಡಿ ಸಿಗಲಿದೆ.

56

1029 ರೂಪಾಯಿ ರೀಚಾರ್ಜ್ ಪ್ಲಾನ್

ಈ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ 84 ದಿನದ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 2 ಜಿಬಿ ಡೇಟಾ, ಪ್ರತಿ ದಿನ ಅನ್‌ಲಿಮಿಟೆಡ್ ಕರೆ ಸೌಲಭ್ಯಗಳು ಇವೆ. ಜಿಯೋಹಾಟ್‌ಸ್ಟಾರ್ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್ ಉಚಿತವಾಗಿ ಸಿಗಲಿದೆ. 1199 ರೂಪಾಯಿ ಪ್ಲಾನ್‌ನಲ್ಲಿ ಪ್ರತಿ ದಿನ 2.5 ಜಿಬಿ ಡೇಟಾ, ಅಮೇಜಾನ್ ಪ್ರೈಮ್ ಲೈಟ್ ಸೇರಿದಂತೆ ಇತರ ಸೌಲಭ್ಯಗಳು ಇದರಲ್ಲಿದೆ.

66

1798 ರೂಪಾಯಿ ರೀಚಾರ್ಜ್ ಪ್ಲಾನ್

ಪ್ಲಾನ್ ದುಬಾರಿ ಏನಿಸಿದರೂ ಇದರ ಬೆನಿಫಿಟ್ ಹಲವರಿಗೆ ಉಪಯುಕ್ತವಾಗಿದೆ. ಮನೆಯಲ್ಲಿ ಎಲ್ಲರು ಕುಳಿತು ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ಮೂಲಕ ಸೀರಿಸ್, ಸಿನಿಮಾ ವೀಕ್ಷಿಸವು ಮಂದಿಗೂ ಇದು ನರೆವಾಗಲಿದೆ. 84 ದಿನ ವ್ಯಾಲಿಟಿಡಿ, ಪ್ರತಿ ದಿನ 3 ಜಿಬಿ ಉಚಿತ ಹೈಸ್ಪೀಡ್ ಡೇಟಾ, ನೆಟ್‌ಫ್ಲಿಕ್ಸ್ ಬೇಸಿಕ್ ಸೇರಿದಂತೆ ಕೆಲ ಒಟಿಟಿ ಪ್ಲಾಟ್‌ಫಾರ್ಮ್ ಉಚಿತ ಪ್ರವೇಶ ನೀಡಲಿದೆ.

Read more Photos on
click me!

Recommended Stories