ಚಿನ್ನದ ಮಾರುಕಟ್ಟೆಗೆ 40 ವರ್ಷಗಳಲ್ಲಿಯೇ ಅತಿ ಕೆಟ್ಟ ವಾರ; ಮತ್ತಷ್ಟು ಇಳಿಕೆಯಾಗುತ್ತಾ ಬಂಗಾರ?

Published : Mar 23, 2026, 01:42 PM IST

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆಯ ಕುಸಿತ ಕಂಡಿದೆ. ಕಳೆದ 40 ವರ್ಷಗಳಲ್ಲೇ ಅತಿ ದೊಡ್ಡ ಇಳಿಕೆಯಾಗಿದ್ದು, ಇದು ಹೂಡಿಕೆದಾರರು ಮತ್ತು ಖರೀದಿದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. 

PREV
15
ಹಳದಿಲೋಹದ ಬೆಲೆ ಇಳಿಕೆ

ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತಿದೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಮತ್ತಷ್ಟು ಆಕ್ರಮಣಕಾರಿಯಾಗಿ ಬದಲಾಗುತ್ತಿದೆ. ಈ ಯುದ್ಧ ಜಾಗತೀಕ ಮಾರುಕಟ್ಟೆ ಮೇಲೆಯೂ ನೇರ ಪರಿಣಾಮ ಬೀರುತ್ತಿದ್ದು, ಹಳದಿಲೋಹದ ಬೆಲೆ ಇಳಿಕೆಗೂ ಕಾರಣವಾಗುತ್ತಿದೆ. ಈ ಒಂದು ವಾರದಲ್ಲಿ ಪಾತಾಳಕ್ಕೆ ಕುಸಿದಿರುವ ಚಿನ್ನದ ಬೆಲೆ ಹಲವು ಅಚ್ಚರಿಗೆ ಕಾರಣವಾಗಿದೆ.

25
ಒಂದೇ ವಾರದಲ್ಲಿ ಪ್ರತಿ ಔನ್ಸ್‌ 4354 ಡಾಲರ್‌ಗೆ

ಚಿನ್ನದ ಬೆಲೆ ಒಂದೇ ವಾರದಲ್ಲಿ ಪ್ರತಿ ಔನ್ಸ್‌ 4354 ಡಾಲರ್‌ಗೆ ತಲುಪಿದೆ. ಇದು ಕಳೆದ 40 ವರ್ಷಗಳಲ್ಲಿ ಅತಿ ಕುಸಿತದ ವಾರ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಮಾರ್ಚ್ 13ರಂದು ಪ್ರತಿ ಔನ್ಸ್‌ಗೆ 5200 ಡಾಲರ್ ಆಗಿತ್ತು. ಒಂದು ವಾರದಲ್ಲಿ ಗಣನೀಯ ಇಳಿಕೆಯಾಗಿದ್ದು, ಇದನ್ನು ಅತ್ಯಂತ ಕೆಟ್ಟ ವಾರ ಎಂದು ಕರೆಯಲಾಗುತ್ತಿದೆ. ಈ ಹಿಂದೆ ಒಂದೇ ವಾರದಲ್ಲಿ 5,595.51 ಡಾಲರ್‌ಕ್ಕೆ ಏರಿಕೆ ಸಾರ್ವಕಾಲಿಕ ದಾಖಲೆಯನ್ನು ಬರೆದಿತ್ತು. ಇದೀಗ ಮಾರುಕಟ್ಟೆ ತದ್ವಿರುದ್ಧವಾದ ಬೆಳವಣಿಗೆಯಾಗಿದೆ.

35
ಭೌಗೋಳಿಕ ರಾಜಕೀಯ ಉದ್ವಿಗ್ನತೆ

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಚಿನ್ನ ಹೂಡಿಕೆದಾರರನ್ನು ತನ್ನ ಮೌಲ್ಯವನನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರೋದು ಕಂಡು ಬರುತ್ತಿದೆ. ವಾಲ್‌ಸ್ಟ್ರೀಟ್ ಜನರಲ್ ವರದಿ ಪ್ರಕಾರ, ಚಿನ್ನದ ಬೆಲೆ ಇಳಿಕೆ ದೀರ್ಘಕಾಲದ ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆದಿಡಬಹುದು. ಹಾಗೆಯೇ ಖರೀದಿದಾರಿಗೆ ಇದು ಸುವರ್ಣವಕಾಶ ಅಂತಾನೂ ವ್ಯಾಖ್ಯಾನಿಸಬಹುದು ಎಂದು ಹೇಳಿದೆ.

45
4,154 ಡಾಲರ್

ಇದೇ ರೀತಿ ಚಿನ್ನ 200 ದಿನಗಳ ಕಾಲ ನಿರಂತರವಾಗಿ ಇಳಿಕೆಯಾಗಿದ್ರೆ ಸರಾಸರಿ ಒಂದು ಔನ್ಸ್ ಚಿನ್ನದ ಬೆಲೆ 4,154 ಡಾಲರ್ ಆಗಬಹುದು ಎಂದು ಅಂದಾಜಿಸುತ್ತಾರೆ. ಆದ್ರೆ ಈ ಬೆಲೆ ಇಳಿಕೆ ಭವಿಷ್ಯದ ಏರಿಕೆಯ ಮುನ್ಸೂಚನೆಯೂ ಆಗಿರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಿದ್ದಾರೆ. ಯುದ್ಧದ ಸನ್ನಿವೇಶಗಳಿಂದಾಗಿ ಚಿನ್ನದ ಮಾರುಕಟ್ಟೆ ಕುಸಿತವಾಗಲಾರಂಭಿಸಿದೆ.

ಇದನ್ನೂ ಓದಿ: ಭಾರತದಲ್ಲಿದೆ ಡೈನೋಸಾರ್‌ಗಿಂತ ಹಳೇ ಪರ್ವತ, ಅಚ್ಚರಿ ವಿಡಿಯೋ ಹಂಚಿದ ಆನಂದ್ ಮಹೀಂದ್ರ

55
ಮಾರ್ಚ್ 18ರಿಂದ ಚಿನ್ನದ ಬೆಲೆ ಇಳಿಕೆ

ಭೌಗೋಳಿಕ ರಾಜಕೀಯ ಉದ್ವಗ್ನತೆ ಹೊರತಾಗಿಯೂ ಚಿನ್ನದ ಬೆಲೆ ಏರಿಕೆಯಾಗಲು ಅಸಮರ್ಥವಾಗಿದೆ. ಪ್ರಸ್ತುತ ಮಾರುಕಟ್ಟೆಯ ಅಂಶಗಳು ಚಿನ್ನದ ಮೇಲೆ ಪರಿಣಾಮ ಬೀರುತ್ತಿವೆ. ಸಾಂಪ್ರದಾಯಿಕ ಬೇಡಿಕೆ ಜೊತೆ ಡಾಲರ್ ಮಾರುಕಟ್ಟೆಯಲ್ಲಿ ದೃಢವಾಗುತ್ತಿರೋದು ಬೆಲೆ ಇಳಿಕೆಗೆ ಕಾರಣವಾಗಿರಲಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಮಾರ್ಚ್ 18ರಿಂದ ಚಿನ್ನದ ಬೆಲೆ ಇಳಿಕೆ ಮಾರ್ಗದಲ್ಲಿಯೇ ಚಲಿಸುತ್ತಿದೆ.

ಇದನ್ನೂ ಓದಿ: ಎಲ್‌ಪಿಜಿ ಬಿಕ್ಕಟ್ಟು, 14.2 ಕೆಜಿ ಬದಲಾಗಿ 10 ಕೆಜಿ? ಬದಲಾಗಲಿದೆಯಾ ಸಿಲಿಂಡರ್ ತೂಕ?

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories