ಯಶಸ್ವಿ ಉದ್ಯಮಿಯಾಗಲು ಬರೀ ಹಣವೊಂದಿದ್ದರೆ ಸಾಲದು. ಮಾರುಕಟ್ಟೆಯ ಬೇಡಿಕೆ ಅರ್ಥ ಮಾಡಿಕೊಂಡು, ಸರಿಯಾದ ಕ್ಷೇತ್ರವನ್ನು ಆಯ್ಕೆ ಮಾಡುವುದು ಮುಖ್ಯ. ಕೆಲವು ಬ್ಯುಸಿನೆಸ್‌ಗಳಲ್ಲಿ ನಷ್ಟದ ಭಯವೇ ಇರುವುದಿಲ್ಲ, ಬದಲಾಗಿ ಉತ್ತಮ ಲಾಭವನ್ನೇ ತಂದುಕೊಡುತ್ತವೆ. ಅಂತಹ ಕ್ಷೇತ್ರಗಳು ಯಾವುವು ಎಂದು ಇಲ್ಲಿ ನೋಡೋಣ.
ಈಗಾಗಲೇ ಕೆಲಸ ಮಾಡುತ್ತಾ ಕೆಲಸದ ಒತ್ತಡದಿಂದ ಬೇಸತ್ತವರು ಅಥವಾ ಇನ್ನೊಬ್ಬರ ಕೈಕೆಳಗೆ ದುಡಿಯಲು ಇಷ್ಟವಿಲ್ಲದವರು ವ್ಯಾಪಾರ ಮಾಡುವ ಕನಸು ಕಾಣುತ್ತಾರೆ. ಸಣ್ಣದೋ ದೊಡ್ಡದೋ ಒಂದು ಬ್ಯುಸಿನೆಸ್ ಶುರುಮಾಡಿ ಯಶಸ್ವಿಯಾಗಿ ಮುನ್ನಡೆಸಬೇಕು ಎಂದುಕೊಳ್ಳುತ್ತಾರೆ. ಆದರೆ ಯಾವ ವ್ಯಾಪಾರ ಆರಂಭಿಸಬೇಕು, ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೇಡಿಕೆಯಿದೆ ಎಂಬ ಗೊಂದಲವಿರುತ್ತದೆ. ವ್ಯಾಪಾರದಲ್ಲಿ ಯಶಸ್ಸು ಗಳಿಸಲು ಬಂಡವಾಳ, ಬುದ್ಧಿವಂತಿಕೆ ಜೊತೆಗೆ ನಾವು ಆಯ್ಕೆ ಮಾಡುವ ಕ್ಷೇತ್ರವೂ ಮುಖ್ಯ. ಹಾಗಾಗಿ ಇಂದಿನ ದಿನಗಳಲ್ಲಿ ಹೆಚ್ಚು ಲಾಭ ತರುವ ವ್ಯಾಪಾರಗಳು ಯಾವುವು ಎಂದು ನೋಡೋಣ.
26
ಆಹಾರ, ದಿನಸಿ (Food & Groceries)
ಪ್ರತಿಯೊಬ್ಬರಿಗೂ ಆಹಾರ ಮೂಲಭೂತ ಅವಶ್ಯಕತೆ. ಅದಕ್ಕಾಗಿಯೇ ಈ ವ್ಯಾಪಾರ ಎಂದಿಗೂ ವಿಫಲವಾಗುವುದಿಲ್ಲ. ಟಿಫಿನ್ ಸೆಂಟರ್, ಫುಡ್ ಹೋಮ್ ಡೆಲಿವರಿ ಅಥವಾ ಸಣ್ಣ ಹೋಟೆಲ್‌ನಂತಹ ಉದ್ಯಮಗಳು ಇತರ ವ್ಯಾಪಾರಗಳಿಗಿಂತ 5 ಪಟ್ಟು ಹೆಚ್ಚು ಲಾಭದೊಂದಿಗೆ ಉತ್ತಮ ಆದಾಯವನ್ನು ನೀಡುತ್ತವೆ. ಇದರೊಂದಿಗೆ, ದಿನಸಿ ಅಂಗಡಿಗಳು ಕೂಡ ನಮ್ಮ ದೈನಂದಿನ ಜೀವನದಲ್ಲಿ ಬಹಳ ಮುಖ್ಯ. ಎಷ್ಟೇ ದೊಡ್ಡ ಸೂಪರ್‌ಮಾರ್ಕೆಟ್‌ಗಳು ಬಂದರೂ, ಹೆಚ್ಚಿನ ಜನರಿಗೆ ಹತ್ತಿರದ ಕಿರಾಣಿ ಅಂಗಡಿಯೇ ಮೊದಲ ಆಯ್ಕೆಯಾಗಿರುತ್ತದೆ. ಹಾಗಾಗಿ ಇವು ಕೂಡ ಉತ್ತಮ ಲಾಭವನ್ನು ತಂದುಕೊಡುತ್ತವೆ.
36
ಶಿಕ್ಷಣ, ಆರೋಗ್ಯ (Health, Education)
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಮುಂಚೂಣಿಯಲ್ಲಿವೆ. ಟ್ಯೂಷನ್ ಕ್ಲಾಸ್‌ಗಳು, ಕೋಚಿಂಗ್ ಸೆಂಟರ್ ಅಥವಾ ಆನ್‌ಲೈನ್ ಕೋಚಿಂಗ್ ಸೆಂಟರ್ ತೆರೆದು ನಿರಂತರ ಆದಾಯ ಗಳಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಚೆನ್ನಾಗಿ ಸಂಪಾದಿಸಬಹುದು. ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ, ಮನುಷ್ಯ ಬದುಕಲು ವೈದ್ಯಕೀಯ ಸೇವೆಗಳು ಬಹಳ ಮುಖ್ಯ. ಆಸ್ಪತ್ರೆಗಳ ಬಳಿ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಫಾರ್ಮಸಿ (ಮದ್ದುಗಳ ಅಂಗಡಿ) ತೆರೆದರೆ ಸ್ಥಿರವಾದ ಆದಾಯ ಬರುತ್ತದೆ. ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡುವುದರಿಂದಲೂ ಹೆಚ್ಚು ಲಾಭ ಗಳಿಸಬಹುದು.
ಪ್ರಸ್ತುತ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ನಗರಗಳಿಗೆ ವಲಸೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ನಗರಗಳಲ್ಲಿ ಮನೆ ಮತ್ತು ಕಚೇರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಿಮ್ಮ ಬಳಿ ಹಣವಿದ್ದರೆ, ಖಾಲಿ ಜಾಗವನ್ನು ಖರೀದಿಸಿ, ಅಲ್ಲಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಬಹುದು. ಮನೆಗಳನ್ನು ಬಾಡಿಗೆಗೆ ನೀಡುವುದರ ಮೂಲಕ ಅಥವಾ ಪ್ರಾಪರ್ಟಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುವ ಮೂಲಕ ಹೆಚ್ಚು ಶ್ರಮವಿಲ್ಲದೆ ಸ್ಥಿರ ಆದಾಯವನ್ನು ಗಳಿಸಬಹುದು.
56
ಆನ್ ಲೈನ್ ವ್ಯಾಪಾರಗಳು (Online Business)
ಆನ್‌ಲೈನ್ ಪೇಮೆಂಟ್‌ಗಳು, ಹೋಮ್ ಡೆಲಿವರಿಯಂತಹ ಸೇವೆಗಳನ್ನು ಒದಗಿಸಿ ಕೂಡ ಆದಾಯ ಗಳಿಸಬಹುದು. ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸೇರಿದ ವಸ್ತುಗಳನ್ನು ಹೋಮ್ ಡೆಲಿವರಿ ಮಾಡುವ ಮೂಲಕ ಹಣ ಸಂಪಾದಿಸಬಹುದು. ಈ ವ್ಯಾಪಾರವನ್ನು ಪ್ರಾರಂಭಿಸುವ ಮೊದಲು, ಸ್ಥಳೀಯ ಮಾರುಕಟ್ಟೆಯ ಅಗತ್ಯಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು.
66
ಗಮನಿಸಿ
ಇಲ್ಲಿ ನೀಡಿರುವ ಮಾಹಿತಿಯನ್ನು ಇಂಟರ್ನೆಟ್ ಮತ್ತು ಕೆಲವು ವರದಿಗಳನ್ನು ಆಧರಿಸಿ ನೀಡಲಾಗಿದೆ. ನೀವು ಯಾವುದೇ ಹೊಸ ಬ್ಯುಸಿನೆಸ್ ಆರಂಭಿಸಿದರೂ, 'ಗ್ರಾಹಕ ಸೇವೆ'ಗೆ ಹೆಚ್ಚಿನ ಆದ್ಯತೆ ನೀಡಿ. ಗುಣಮಟ್ಟದ ಉತ್ಪನ್ನದ ಜೊತೆಗೆ ಗ್ರಾಹಕರೊಂದಿಗೆ ನೀವು ನಿರ್ವಹಿಸುವ ಉತ್ತಮ ಸಂಬಂಧವೇ ನಿಮ್ಮ ವ್ಯಾಪಾರವನ್ನು ದೀರ್ಘಕಾಲ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.