ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ, ಖರೀದಿಗೆ ಮುಗಿಬಿದ್ದ ಜನ

Published : May 01, 2025, 09:10 AM ISTUpdated : May 01, 2025, 09:40 AM IST

ಅಕ್ಷಯ ತೃತೀಯ ದಿನ ದಾಖಲೆ ಪ್ರಮಾಣದ ಚಿನ್ನಾಭರಣ ಮಾರಾಟವಾಗಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅಕ್ಷಯ ತೃತೀಯ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇದು ಹಲವರ ನೆಮ್ಮದಿಗೆ ಕಾರಣವಾಗಿದೆ.  

PREV
18
ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ, ಖರೀದಿಗೆ ಮುಗಿಬಿದ್ದ ಜನ

ಅಕ್ಷಯ ತೃತೀಯ ದಿನದ ಕರ್ನಾಟಕ ಸೇರಿದಂತೆ ದೇಶದಲ್ಲಿ ದಾಖಲೆ ಮೊತ್ತದ ಚಿನ್ನಾಭರಣ ಮಾರಾಟವಾಗಿದೆ. ಕರ್ನಾಟಕದಲ್ಲಿ ಅಕ್ಷಯ ತೃತೀಯ ದಿನ ಬರೋಬ್ಬರಿ 3000 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದೀಗ ಅಕ್ಷಯ ತೃತೀಯ ದಿನ ಬಳಿಕ ಅಂದರೆ ಮೇ.01 ರಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇದು ಹಲವರ ನೆಮ್ಮದಿಗೆ ಕಾರಣವಾಗಿದೆ.

28

ಮದುವೆ ಸೀಸನ್ ಆರಂಭಗೊಂಡಿದೆ. ಹಲವು ಜನಸಾಮಾನ್ಯರು ಚಿನ್ನ ಖರೀದಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಇದರ ನಡುವೆ ಚಿನ್ನದ ಬೆಲೆಯಲ್ಲಿ ಆಗಿರುವ ಇಳಿಕೆ ಕೊಂಚ ಸಮಾಧಾನ ತಂದಿದೆ. ಈ ಇಳಿಕೆ ಮತ್ತಷ್ಟು ದಿನ ಮುಂದುವರಿಯಲಿ ಅನ್ನೋ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. 24 ಕಾರೆಟ್  ಚಿನ್ನದ ಬೆಲೆಯಲ್ಲಿ  10 ರೂಪಾಯಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ.

38

ಗುರುವಾರದ ಟ್ರೇಡಿಂಗ್ ಆರಂಭದಲ್ಲೇ ಚಿನ್ನ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕಾರೆಟ್ ಚಿನ್ನ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಕಂಡಿದೆ. ಇಂದಿನ 24 ಕಾರೆಟ್ ಚಿನ್ನ ಟ್ರೆಡಿಂಗ್ ಬೆಲೆ ₹97,900 ರೂಪಾಯಿಂದ ಆರಂಭಗೊಂಡಿದೆ ಎಂದು ಗುಡ್‌ರಿಟರ್ನ್ ವೆಬ್‌ಸೈಟ್ ಹೇಳಿದೆ. ಇನ್ನು 99,900 ರೂಪಾಯಿ ಟ್ರೇಡ್‌ನೊಂದಿಗೆ ಆರಂಭಗೊಂಡಿದ್ದ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ.

48

ಇನ್ನು 22 ಕಾರೆಟ್ 10 ಗ್ರಾಂ ಚಿನ್ನ ಬೆಲೆ 89,740 ರೂಪಾಯಿ ಆಗಿದೆ. ಇದೇ ವೇಳೆ 24 ಕಾರೆಟ್ ಚಿನ್ನದ ಬೆಲೆ ಬೆಂಗಳೂರಿನಲ್ಲಿ 10 ಗ್ರಾಂಗೆ 97,420 ರೂಪಾಯಿ ಆಗಿದೆ. ಇತ್ತ ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ನಗರದಲ್ಲಿ 24 ಕಾರೆಟ್ ಚಿನ್ನ 10 ಗ್ರಾಂ ಬೆಲೆ 97,900 ರೂಪಾಯಿ ಆಗಿದೆ.  
 

58

ಅಹಮದಾಬಾದ್‌ನಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,790 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 97,950 ರೂ. ಪ್ರತಿ 10 ಗ್ರಾಂ

ಚಂಡೀಗಢದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,890 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 98,030 ರೂ. ಪ್ರತಿ 10 ಗ್ರಾಂ

68

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರಟ್- 89,890 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 98,030 ರೂ. ಪ್ರತಿ 10 ಗ್ರಾಂ

ಮುಂಬೈನಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,740 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 97,900 ರೂ. ಪ್ರತಿ 10 ಗ್ರಾಂ

78

ಕೋಲ್ಕತ್ತಾದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,740 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 97,900 ರೂ. ಪ್ರತಿ 10 ಗ್ರಾಂ

ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,740 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 97,900 ರೂ. ಪ್ರತಿ 10 ಗ್ರಾಂ

88

ಜೈಪುರದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,890 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 98,030 ರೂ. ಪ್ರತಿ 10 ಗ್ರಾಂ

ಇಂದೋರ್‌ನಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್- 89,790 ರೂ. ಪ್ರತಿ 10 ಗ್ರಾಂ
24 ಕ್ಯಾರಟ್- 97,950 ರೂ. ಪ್ರತಿ 10 ಗ್ರಾಂ

Read more Photos on
click me!

Recommended Stories