ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ

Published : Apr 30, 2025, 01:35 PM ISTUpdated : Apr 30, 2025, 01:47 PM IST

ತಿಂಗಳಿಗ 82 ರೂಪಾಯಿಯಂತೆ ಇದ್ದರೆ ಸಾಕು, ಜಿಯೋ ಬಂಪರ್ ಪ್ಲಾನ್ ಘೋಷಿಸಿದೆ. ಅನ್‌ಲಿಮಿಟೆಡ್ ಕರೆ, ಉಚಿತ ಡೇಟಾ ಜೊತೆಗೆ ಬರೋಬ್ಬರಿ 11 ತಿಂಗಳ ವ್ಯಾಲಿಟಿಡಿ ಪ್ಲಾನ್ ನೀಡಿದೆ. 

PREV
16
ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ

ರಿಲಯನ್ಸ್ ಜಿಯೋ ಭಾರತದಲ್ಲಿ ಗರಿಷ್ಠ ಗ್ರಾಹಕರ ಹೊಂದಿದ ಟೆಲಿಕಾಂ ನೆಟ್‌ವರ್ಕ್. ಇದೀಗ ತನ್ನ ಗ್ರಾಹಕರ ಸಂಖ್ಯೆ ಬೆಳೆಸಲು ಹಾಗೂ ಜಿಯೋದಿಂದ ಇತರ ನೆಟ್‌ವರ್ಕ್‌ಗೆ ಪೋರ್ಟ್ ಆದರವನ್ನು ಮತ್ತೆ ಕರೆ ತರಲು ಜಿಯೋ ಹೊಸ ಕಸರತ್ತು ಮಾಡುತ್ತಿದೆ. ಇದೀಗ ರಿಲಯನ್ಸ್ ಜಿಯೋ ಘೋಷಿಸಿದ ಹೊಸ ರೀಚಾರ್ಜ್ ಪ್ಲಾನ್ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಇದು ಅತೀ ಕಡಿಮೆ ಬೆಲೆಯ ಬರೋಬ್ಬರಿ 11 ತಿಂಗಳ ವ್ಯಾಲಿಟಿಡಿ ಪ್ಲಾನ್ ಆಗಿದೆ.

26

ರಿಲಯನ್ಸ್ ಜಿಯೋ ಇದೀಗ 11 ತಿಂಗಳ ವ್ಯಾಲಿಟಿಡಿ ಪ್ಲಾನ್ ಘೋಷಿಸಿದೆ. ತಿಂಗಳಿಗೆ ಲೆಕ್ಕ ಹಾಕಿದರೆ ಸರಿಸುಮಾರು 82 ರೂಪಾಯಿ ಇದ್ದರೆ ಸಾಕು. ಅಂದರೆ ಈ ಪ್ಲಾನ್ ರೀಚಾರ್ ಮಾಡಲು ಒಟ್ಟು 895 ರೂಪಾಯಿ. 11 ತಿಂಗಳಿಗೆ ಲೆಕ್ಕ ಹಾಕಿದರೆ ಪ್ರತಿ ತಿಂಗಳಿಗೆ ಕೇವಲ 82 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಆದರೆ ಇದರ ಸೌಲಭ್ಯ ಮಾತ್ರ ಇತರ ರೀಚಾರ್ಜ್ ಪ್ಲಾನ್‌ನಂತೆ ನೀಡಲಾಗಿದೆ.

36

11 ತಿಂಗಳ ವ್ಯಾಲಿಟಿಡಿ ಪ್ಲಾನ್‌ನಲ್ಲಿ 11 ತಿಂಗಳು ಕೂಡ ಅನ್‌ಲಿಮಿಚೆಡ್ ಕಾಲ್ ಸೌಲಭ್ಯವಿದೆ. ದೇಶದ ಯಾವುದೇ ನೆಟ್‌ವರ್ಕ್‌ಗೆ 11 ತಿಂಗಳು ಉಚಿತವಾಗಿ ಕರೆ ಮಾಡಬಹುದು. ಲೋಕಲ್ ಅಥವಾ ಎಸ್‌ಟಿಡಿ ನೆಟ್‌ವರ್ಕ್ ಕರೆ ಉಚಿತವಾಗಿದೆ. ಇದರ ಜೊತೆಗೆ ಪ್ರತಿ 28 ದಿನಕ್ಕೆ 2ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಒಟ್ಟು 11 ತಿಂಗಳ ಅವಧಿಯಲ್ಲಿ 24 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.

46

ಪ್ರತಿ 28 ದಿನಕ್ಕೆ 50 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಒಮ್ಮ 895 ರೂಪಾಯಿ ರೀಚಾರ್ಜ್ ಮಾಡಿದರೆ 11 ತಿಂಗಳು ಯಾವುದೇ ತಲೆನೋವಿಲ್ಲ. ಪ್ರಮುಖವಾಗಿ ಕರೆಗಳನ್ನು ಹೆಚ್ಚಾಗಿ ಮಾಡುವ ಹಾಗೂ ಡೇಟಾ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ಹೊರತಂದಿರುವ ಈ ಪ್ಲಾನ್ ಸೂಕ್ತವಾಗಿದೆ.

56

ಯಾರು ಈ ಪ್ಲಾನ್‌ಗೆ ಅರ್ಹರು
ರಿಲಯನ್ಸ್ ಜಿಯೋ ಹೊರತಂದಿರುವ ಅತೀ ಕಡಿಮೆ ಬೆಲೆ ಪ್ಲಾನ್‌ಗಳ ಪೈಕಿ ಇದು ಒಂದಾಗಿದೆ. ಈ ಪ್ಲಾನ್ ಜಿಯೋ ಫೋನ್ ಹಾಗೂ ಜಿಯೋ ಭಾರತ್ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇತರ ಜಿಯೋ ಗ್ರಾಹಕರಿಗೆ ಇದೇ ರೀತಿಯ ಕಡಿಮೆ ರೀಚಾರ್ಜ್ ಮೊತ್ತದ ಟ್ರು 5ಜಿ ಪ್ಲಾನ್ ಹೊರತಂದಿದೆ.

66

ಅತೀ ಕಡಿಮೆ ಬೆಲೆಯ ಜಿಯೋ ರೀಚಾರ್ಜ್ ಪ್ಲಾನ್ ಇತರ ನೆಟ್‌ವರ್ಕ್‌ಗಳಿಗೆ ಪೈಪೋಟಿ ನೀಡುತ್ತಿದೆ. ಜಿಯೋ ಪ್ಲಾನ್‌ಗಳಿಂದ ಏರ್‌‌ಟೆಲ್, ವೋಡಾಫೋನ್ ಕೂಡ ಕಡಿಮೆ ಬೆಲೆಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಟೆಲಿಕಾಂ ಕ್ಷೇತ್ರಗಳ ಕಾಂಪಿಟೀಶನ್‌ನಿಂದ ಭಾರತದ ಗ್ರಾಹಕರು ಉತ್ತಮ ಪ್ಲಾನ್ ಪಡೆಯುತ್ತಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories