Flipkart Valentine's Day sale Offer: ಫ್ಲಿಪ್‌ಕಾರ್ಟ್, ಪ್ರೇಮಿಗಳ ದಿನದ ವಿಶೇಷ ಸೇಲ್‌ನಲ್ಲಿ ಐಫೋನ್ ಮೇಲೆ ಬರೋಬ್ಬರಿ ₹13,000 ಮೆಗಾ ಡಿಸ್ಕೌಂಟ್ ನೀಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
ಭಾರತದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಆನ್‌ಲೈನ್ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಫ್ಲಿಪ್‌ಕಾರ್ಟ್ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸ್ಪೆಷಲ್ ಸೇಲ್ ಘೋಷಿಸಿ, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತದೆ. ಅದರಂತೆ ಈಗ ಪ್ರೇಮಿಗಳ ದಿನದ ವಿಶೇಷ ಸೇಲ್ ನಡೆಯುತ್ತಿದೆ.
25
ಐಫೋನ್‌ಗೆ ಭರ್ಜರಿ ರಿಯಾಯಿತಿ
ಫ್ಲಿಪ್‌ಕಾರ್ಟ್, ಐಫೋನ್ 16 ಮಾಡೆಲ್‌ಗೆ ₹13,000 ರಿಯಾಯಿತಿ ನೀಡುತ್ತಿದೆ. ಈ ಫೋನನ್ನು ₹79,900 ಕ್ಕೆ ಬಿಡುಗಡೆ ಮಾಡಲಾಗಿತ್ತು. ಐಫೋನ್ 17 ಬಂದ ನಂತರ, ಇದರ ಬೆಲೆ ₹69,900 ಕ್ಕೆ ಇಳಿದಿತ್ತು.
ಈಗ ಪ್ರೇಮಿಗಳ ದಿನದ ಆಫರ್‌ನಲ್ಲಿ ಸುಮಾರು ₹13,000 ಹೆಚ್ಚುವರಿ ರಿಯಾಯಿತಿ ಸಿಗುತ್ತಿದೆ. ಇದರಲ್ಲಿ ₹1,000 ಬ್ಯಾಂಕ್ ಆಫರ್ ಕೂಡ ಸೇರಿದೆ.
35
ಐಫೋನ್ 16 ವೈಶಿಷ್ಟ್ಯಗಳೇನು?
ಈ ಫೋನ್ 6.1-ಇಂಚಿನ Super Retina XDR OLED ಡಿಸ್‌ಪ್ಲೇ ಹೊಂದಿದೆ. ಇದರ ಮುಂಭಾಗದಲ್ಲಿ 12MP ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 48MP + 12MP ಕ್ಯಾಮೆರಾಗಳಿವೆ.
ಐಫೋನ್ 17ರಂತೆಯೇ ಕಾಣುವ ಈ ಫೋನ್, ಡೈನಾಮಿಕ್ ಐಲ್ಯಾಂಡ್ (Dynamic Island) ಫೀಚರ್ ಹೊಂದಿದೆ. ಜೊತೆಗೆ, ಆ್ಯಪಲ್‌ನ ಹೊಸ AI ಫೀಚರ್‌ಗಳನ್ನು (Apple Intelligence) ಇದು ಸಪೋರ್ಟ್ ಮಾಡುತ್ತದೆ.
ವಿಶೇಷ ಆ್ಯಕ್ಷನ್ ಬಟನ್ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ ಕೂಡ ಇದೆ. 25W ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದ್ದು, IP68 ರೇಟಿಂಗ್ ಇರುವುದರಿಂದ ನೀರು ಮತ್ತು ಧೂಳಿನಿಂದ ಫೋನ್‌ಗೆ ಹಾನಿಯಾಗುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.