ಕಂಪನಿಯು 135 ಕೋಟಿ ರೂಪಾಯಿ ಮೌಲ್ಯದ ಹೊಸ ಆರ್ಡರ್ ಪಡೆದ ನಂತರ ಅದರ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭ ನೀಡಿರುವ ಈ ಮಲ್ಟಿಬ್ಯಾಗರ್ ಷೇರು, ಫೆಬ್ರವರಿ 11 ರಂದು 5% ಅಪ್ಪರ್ ಸರ್ಕ್ಯೂಟ್ ತಲುಪಿದೆ.
ಫೆಬ್ರವರಿ 11ರಂದು ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿತ್ತು. ಒಂದೇ ಒಂದು ಆರ್ಡರ್ ಪಡೆದುಕೊಂಡ ಪರಿಣಾಮ ಮಲ್ಟಿಬ್ಯಾಗರ್ ಷೇರು ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಹೂಡಿಕೆದಾರರಿಗೆ ಶೇ.7950 ಲಾಭವನ್ನು ನೀಡಿದೆ. ಕಳೆದ ಐದು ವಹಿವಾಟು ಅವಧಿಗಳಲ್ಲಿ ಷೇರುಗಳು ಶೇ.15ಕ್ಕಿಂತ ಹೆಚ್ಚು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
26
ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್
ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ (GHV Infra Projects) ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಬುಧವಾರ ಏರಿಕೆ ಕಂಡುಬಂದಿದೆ. ಈ ಏರಿಕೆಗೆ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಬಹುದೊಡ್ಡ ಆರ್ಡರ್ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಕಂಪನಿ ಷೇರು ಮಾರುಕಟ್ಟೆಗೆ ಈ ಮಾಹಿತಿ ನೀಡುತ್ತಿದ್ದಂತೆ ಬೆಲೆಗಳು ಏರಿಕೆ ಕಂಡಿವೆ. ಹಾಗಾಗಿ ಇಂದು ಸಹ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ ಕಣ್ಣಿಟ್ಟಿದ್ದಾರೆ.
36
5% ಅಪ್ಪರ್ ಸರ್ಕ್ಯೂಟ್
ಕಳೆದ ಐದು ವರ್ಷಗಳಲ್ಲಿ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಮಲ್ಟಿಬ್ಯಾಗರ್ ಸ್ಟಾಕ್ ತನ್ನ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭವನ್ನು ನೀಡಿವೆ. ಫೆಬ್ರವರಿ 11 ರಂದು ಷೇರು ಮಾರುಕಟ್ಟೆಯಲ್ಲಿ 5% ಅಪ್ಪರ್ ಸರ್ಕ್ಯೂಟ್ ತಲುಪಿವೆ. ಹಾಗಾಗಿ ಬುಧವಾರ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಹೂಡಿಕೆದಾರರ ಗಮನವನ್ನು ಸೆಳೆದಿತ್ತು.
ಫೆಬ್ರವರಿ 10ರಂದು ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಹರಿಯಾಣದಲ್ಲಿ ನೀರು ಸಂಗ್ರಹಣಾ ಕೊಳವನ್ನು ನಿರ್ಮಿಸಲು MHK ಬಿಲ್ಡ್‌ಕಾನ್ LLPಯಿಂದ ಆರ್ಡರ್ ಪಡೆದುಕೊಂಡಿದೆ. ಫೆಬ್ರವರಿ 11ರಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಲಾಗಿತ್ತು. ಈ ಯೋಜನೆಯ ಒಟ್ಟು ಮೌಲ್ಯ 135 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹೊಸ ಯೋಜನೆಯ ಘೋಷಣೆಯ ನಂತರ ಷೇರುಗಳು ಏರಿಕೆಯಾಗಿವೆ.
56
ಭವಿಷ್ಯದಲ್ಲಿ ಹೆಚ್ಚಾಗುವ ಸಾಧ್ಯತೆ
ಈ ಯೋಜನೆ ಪೂರ್ಣಗೊಳಿಸಲು ಕಂಪನಿಗೆ 22 ತಿಂಗಳ ಸಮಯವನ್ನು ನೀಡಲಾಗಿದೆ. ಇದು ಸಂಪೂರ್ಣ ದೇಶಿಯ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 6,800% ರಷ್ಟು ಭಾರಿ ಲಾಭವನ್ನು ಕಂಡಿದೆ.
ಬುಧವಾರ ದಿನದ ಅಂತ್ಯದಲ್ಲಿ ಕಂಪನಿಯ ಷೇರುಗಳು ಶೇಕಡಾ 4.98 ರಷ್ಟು ಅಥವಾ ₹12.45 ರಷ್ಟು ಏರಿಕೆಯಾಗಿ ₹262.35 ಕ್ಕೆ ಮುಕ್ತಾಯಗೊಂಡಿವೆ. ಷೇರುಗಳು ದಿನ ₹262.35 ಕ್ಕೆ ಪ್ರಾರಂಭವಾದವು. ಕಂಪನಿಯ 52 ವಾರಗಳ ಗರಿಷ್ಠ ₹362.40 ಮತ್ತು ಅದರ 52 ವಾರಗಳ ಕನಿಷ್ಠ ₹32.86 ಆಗಿದೆ. ಇದರ ಮಾರುಕಟ್ಟೆ ಬಂಡವಾಳೀಕರಣ ಸುಮಾರು ₹1,809 ಕೋಟಿ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.